ಭಾರೀ ಉದ್ಯೋಗದ ಆಫರ್ ನೀಡಿದ ಹಿನ್ನೆಲೆ ಕೆಲಸಕ್ಕೆ ತೆರಳಿದ್ದ ಯುವಕನನ್ನು ರಷ್ಯಾ ಸೇನೆಗೆ ಸೇರಿಸಿ ಉಕ್ರೇನ್ ವಿರುದ್ಧ ಯುದ್ಧ ಮಾಡುತ್ತಿದ್ದ ಹರ್ಯಾಣ ಮೂಲದ ರವಿ ಎಂಬ ಯುವಕ ಸಾವನ್ನಪ್ಪಿದ್ದಾನೆ.
ಮಾಸ್ಕೋ (ಜು.30): ರಷ್ಯಾ ಯುದ್ಧಭೂಮಿಯಲ್ಲಿ ಉಕ್ರೇನ್ ವಿರುದ್ಧ ಯುದ್ಧ ಮಾಡುತ್ತಿದ್ದ ಹರ್ಯಾಣ ಮೂಲದ 22 ವರ್ಷದ ರವಿ ಮೌನ್ ಎಂಬ ಯುವಕ ಸಾವನ್ನಪ್ಪಿದ್ದಾನೆ. ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ, ರವಿ ಸಾವನ್ನು ಖಚಿತಪಡಿಸಿದೆ. ಮೃತ ರವಿ ಹರಿರ್ಯಾಣದ ಖೈತಾಲ್ ಜಿಲ್ಲೆಯವರು. ಜ.13 ರಂದು ಏಜೆಂಟ್ ಮೂಲಕ ಸಾರಿಗೆ ಕೆಲಸಕ್ಕೆಂದು ರಷ್ಯಾಗೆ ತೆರಳಿದ್ದರು. ಆದರೆ ಅಲ್ಲಿ ಅವರನ್ನು ವಂಚಿಸಿ ಸೇನೆಗೆ ಸೇರಿಸಿಕೊಳ್ಳಲಾಗಿತ್ತು. ಆದರೆ ಇದೀಗ ರಷ್ಯಾದಲ್ಲಿ ಉಕ್ರೇನ್ ಸೇನೆಗೆ ಬಲಿಯಾಗಿದ್ದಾರೆ. ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿ ರಷ್ಯಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಷ್ಯಾ ಸೇನೆಯಲ್ಲಿರುವ ಎಲ್ಲ ಭಾರತೀಯರನ್ನು ಬಿಡುಗಡೆ ಮಾಡುವುದಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದರು. ಈ ಬೆನ್ನಲ್ಲೇ ಈ ಘಟನೆ ನಡೆದಿದೆ.
ಭಾರೀ ಉದ್ಯೋಗದ ಆಫರ್ ನೀಡಿದ್ದ ಹಿನ್ನೆಲೆಯಲ್ಲಿ ರವಿ ಕುಟುಂಬ ತಮ್ಮ ಬಳಿ ಇದ್ದ ಒಂದು ಎಕರೆ ಜಮೀನು ಮಾರಾಟ ಮಾಡಿ 11.50 ಲಕ್ಷ ರು. ಹಣ ಹೊಂದಿಸಿ ರಷ್ಯಾಕ್ಕೆ ಕಳುಹಿಸಿಕೊಟ್ಟಿತ್ತು. ಇದೀಗ ಶವವನ್ನು ಮರಳಿ ತರಲೂ ತಮ್ಮ ಬಳಿ ಹಣ ಇಲ್ಲ. ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಕುಟುಂಬ ಒತ್ತಾಯಿಸಿದೆ.
ವಯನಾಡ್ ಭೀಕರ ಭೂಕುಸಿತ-ಜಲಪ್ರವಾಹ, ತುರ್ತು ಸಹಾಯವಾಣಿ ಇಲ್ಲಿದೆ
ಉಕ್ರೇನ್ ವಿರುದ್ಧ ಹೋರಾಟ ನಡೆಸಲು ಹಲವು ಭಾರತೀಯ ಯುವಕರನ್ನು ಬಲವಂತವಾಗಿ ರಷ್ಯಾದ ಖಾಸಗಿ ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಎಂಬುದು ಈ ಹಿಂದಿನಿಂದಲೂ ಆರೋಪವಿದೆ. ಹೈದರಾಬಾದ್‌ನಲ್ಲಿ ಈ ಆಘಾತಕಾರಿ ದಂಧೆ ಬಯಲಾಗಿದ್ದು, ನೇಮಕಾತಿ ಪ್ರಕ್ರಿಯೆ ವೇಳೆ ಭಾರತೀಯ ಯುವಕರನ್ನು ರಷ್ಯಾಗೆ ಕರೆದೊಯ್ಯವ ಮುನ್ನ ಅವರ ದಾಖಲೆಗಳಲ್ಲಿ ಐಟಿ ಉದ್ಯೋಗಿಗಳು ಎಂದೇ ನಮೂದಿಸಿ ಕಳಿಸಲಾಗುತ್ತಿರುವುದು ಕಂಡುಬಂದಿತ್ತು. ರಷ್ಯಾಗೆ ಸೆಕ್ಯೂರಿಟಿ ಕೆಲಸ ಎಂದು ಹೇಳಿ ಸಹಿ ಮಾಡಿಸಿಕೊಂಡು ಸೇನೆಗೆ ಸೇರಿಸಿಕೊಳ್ಳಲಾಗುತ್ತಿದೆ.