
ಉಕ್ರೇನ್(ಫೆ.25): ಉಕ್ರೇನ್ ಮೇಲೆ ರಷ್ಯಾ ದಾಳಿಯಿಂದ ಇದೀಗ ವಿಶ್ವದೆಲ್ಲೆಡೆ ಆತಂಕ ಮನೆ ಮಾಡಿದೆ. ಅದರಲ್ಲೂ ಭಾರತದಲ್ಲಿ ಭೀತಿ ಹೆ್ಚ್ಚಾಗಿದೆ. 18,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿದ್ದಾರೆ. ಇತ್ತ ಒಂದೊಂದು ಪ್ರಾಂತ್ಯದಲ್ಲಿ ಭಾರತೀಯರ ಆಕ್ರಂದನ ಕೇಳಿಬರುತ್ತಿದೆ. ಇದರ ನಡುವೆ ಮತ್ತೊಂದು ಘಟನೆ ಭಾರತೀಯರ ಭೀತಿ ಹೆಚ್ಚಿಸಿದೆ. ಇದಕ್ಕೆ ಕಾರಣ ಉಕ್ರೇನ್‌ನಲ್ಲಿನ 40 ಭಾರತೀಯ ವಿದ್ಯಾರ್ಥಿಗಳು ನಡೆದುಕೊಂಡೇ ಪೊಲೆಂಡ್ ಗಡಿಗೆ ತೆರಳಿದ್ದಾರೆ.
ಉಕ್ರೇನ್‌ನಿಂದ ಭಾರತೀಯರ ರಕ್ಷಣೆ ಸುಲಭವಲ್ಲ. ಹೀಗಾಗಿ ಭಾರತ ಸರ್ಕಾರ ಪೊಲೆಂಡಾ ಸೇರಿದಂತೆ ಇತರ ದೇಶದ ಗಡಿಯಿಂದ ಭಾರತೀಯರ ರಕ್ಷಣೆಗೆ ಯೋಜನೆ ರೂಪಿಸಿದೆ. ಹೀಗಾಗಿ ಭಾರತೀಯ ವಂದೆ ಭಾರತ್ ಮಿಶನ್ ಅಡಿಯಲ್ಲಿ ಭಾರತೀಯರ ರಕ್ಷಣಾ ಕಾರ್ಯ ಆರಂಭಿಸಲಾಗಿದೆ. ಈ ಕಾರಣಕ್ಕಾಗಿ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯರು ಪೊಲೆಂಡ್ ಗಡಿಯತ್ತ ತೆರಳುತ್ತಿದ್ದಾರೆ.
News Hour: ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾ.. ಖಳನಾಯಕ ಯಾರು?
ರಷ್ಯಾದ ಶೆಲ್, ಬಾಂಬ್ ದಾಳಿಗೆ ನಗರ, ಪಟ್ಟಣ, ಕಟ್ಟಡ, ವಿಮಾನ ನಿಲ್ದಾಣ ಧ್ವಂಸಗೊಂಡಿದೆ. ಉಕ್ರೇನ್‌ನಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆಯಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿದೆ. ಇದರ ನಡುವೆ ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳಲು ಇದೀಗ 40 ವಿದ್ಯಾರ್ಥಿಗಳು ಸುಮಾರು 8 ಕಿಲೋಮೀಟರ್ ರಸ್ತೆ ಮೂಲಕ ಸಾಗಿದ್ದಾರೆ.
40 ಮೆಡಿಕಲ್ ವಿದ್ಯಾರ್ಥಿಗಳು ಕಾಲೇಜಿನ ಬಸ್ ಮೂಲಕ ಪೊಲೆಂಡ್ ಗಡಿಯತ್ತ ಕರೆದೊಯ್ಯಲಾಗಿದೆ. ಗಡಿಗೆ ಇನ್ನೂ 8 ಕಿ.ಮೀ ಇರುವಂತೆ ರಸ್ತೆಯಲ್ಲಿ ಇಳಿಸಲಾಗಿದೆ. ಈ ಮೂಲಕ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತ ತಾಣಕ್ಕೆ ಸಾಗಿಸುವ ಕಾರ್ಯ ನಡೆಯುತ್ತಿದೆ.
Russia Ukraine Crisis: ಹಿಂಸಾಚಾರವನ್ನು ತಕ್ಷಣವೇ ಕೊನೆ ಮಾಡಿ, ಪುಟಿನ್ ಗೆ ಮೋದಿ ಮನವಿ!
ಪೊಲೆಂಡ್, ರೋಮಾನಿಯಾ, ಹಂಗೇರಿ, ಸ್ಲೋವಾಕಿಯಾ ಗಡಿಯತ್ತ ಇದೀಗ ವಿದ್ಯಾರ್ಥಿಗಳು ಸಾಗುತ್ತಿದ್ದಾರೆ. ವಿದ್ಯಾರ್ಥಿಗಳ ಜೊತೆಗೆ ಮಹಿಳೆಯರು, ಮಕ್ಕಳು,ವೃದ್ಧರು ದಾರಿಯಲ್ಲಿ ಸಾಗಿದ್ದಾರೆ. ಇದರ ನಡುವೆ ಅತೀ ಕಡಿಣ ಪ್ಯಾಸೇಜ್ ಮೂಲಕ ಸಾಗಿದ್ದಾರೆ. ಈಗಾಗಲೇ ದಕ್ಷಿಣ ಪೊಲೆಂಡ್ ತಲುಪಿರುವ ಉಕ್ರೇನ್ ನಾಗರೀಕರು ಸರಿ ಸುಮಾರ್ 16 ರಿಂದ 18 ಗಂಟೆ ಕಾಯುತ್ತಿದ್ದಾರೆ.
ಈಗಾಗಲೇ ಉಕ್ರೇನ್‌ನಿಂದ 29,000 ನಾಗರೀಕರು ಪೊಲೆಂಡ್ ಗಡಿ ಪ್ರವೇಶಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಉಕ್ರೇನ್ ನಾಗರೀಕರು ಸ್ಲೋವಾಕಿಯಾ ಗಡಿಗಳನ್ನು ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ದಾಖಲೆ ಪತ್ರಗಳ ಪರಿಶೀಲನೆ ಸೇರಿದಂತೆ ಹಲವು ಕಾರಣಗಳಿಂದ ಉಕ್ರೇನ್‌ನಿಂದ ನಾಗರೀಕರ ಪ್ರವೇಶ ವಿಳಂಬವಾಗುತ್ತಿದೆ.
ಇತ್ತ ಕೇಂದ್ರ ಸರ್ಕಾರ ಈಗಾಗಲೇ ಉಕ್ರೇನ್‌ನಿಂದ ಭಾರತೀಯರನ್ನು ಕರೆತರಲು ವಂದೇ ಭಾರತ್ ಮಿಶನ್ ಅಡಿ ವಿಮಾನ ಆಯೋಜಿಸಿದೆ. ಆದರೆ ಉಕ್ರೇನ್‌ನಲ್ಲಿರುವ ವಿಮಾನ ನಿಲ್ದಾಣಗಳು ರಷ್ಯಾ ಟಾರ್ಗೆಟ್ ಮಾಡಿರುವ ಕಾರಣ ರಕ್ಷಣಾ ಕಾರ್ಯಕ್ಕೂ ಅಡ್ಡಿಯಾಗುತ್ತಿದೆ.
ಉಕ್ರೇನ್‌ನಲ್ಲಿರುವ ಭಾರತೀಯರನ್ನು ಸುರಕ್ಷತೆಯಿಂದ ಕರೆತರಲು ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಉಕ್ರೇನ್‌ನ ಭಾರತೀ ರಾಯಭಾರ ಕಚೇರಿ ಭಾರತೀಯರ ಜೊತೆ ನಿರಂತರ ಸಂಪರ್ಕದಲ್ಲಿದೆ. ಉಕ್ರೇನ್‌ನಿಂಗ ಸ್ಲೋವಾಕಿಯಾ, ಹಂಗೇರಿ ಸೇರಿದಂತೆ ಹತ್ತಿರದ ಗಡಿಗೆ ತೆರಳಲು ಎಲ್ಲಾ ನೆರವು ನೀಡಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ