
ನವದೆಹಲಿ (ಏ.16): ವೈದ್ಯಕೀಯ ಸೌಕರ್ಯಗಳ ಉನ್ನತೀಕರಣಕ್ಕಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಕೈಗೊಂಡಿದ್ದಾಗ್ಯೂ, ಗ್ರಾಮೀಣ ಭಾರತದ ಆರೋಗ್ಯ ಕೇಂದ್ರಗಳಲ್ಲಿ ಈಗಲೂ ಸ್ತ್ರೀರೋಗ ತಜ್ಞರು, ಶಿಶು ವೈದ್ಯರು ಸೇರಿದಂತೆ ಒಟ್ಟು ಶೇ.76ರಷ್ಟುವೈದ್ಯರ ಕೊರತೆ ಇದೆ ಎಂಬ ವಿಚಾರ 2019-20ನೇ ಸಾಲಿನ ಗ್ರಾಮೀಣ ಆರೋಗ್ಯ ಅಂಕಿಸಂಖ್ಯೆ(ಆರ್‌ಎಚ್‌ಎಸ್)ಯಿಂದ ಗೊತ್ತಾಗಿದೆ. ದೇಶಾದ್ಯಂತ 2ನೇ ಅಲೆಯ ಕೊರೋನಾ ವೈರಸ್ ತೀವ್ರತೆ ಹೆಚ್ಚುತ್ತಿರುವಾಗಲೇ ಈ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ.
2005ರಿಂದ 2020ರ 15 ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಹಲವು ಕ್ರಮಗಳಿಂದಾಗಿ ದೇಶದ ಆರೋಗ್ಯ ಕ್ಷೇತ್ರವು ಸುಧಾರಣೆ ಕಂಡಿದೆ. ಆದಾಗ್ಯೂ, ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳಲ್ಲಿ ಒಟ್ಟಾರೆ 13,384 ತಜ್ಞ ವೈದ್ಯರ ಅಗತ್ಯವಿದೆ. ಆದರೆ ಕಳೆದ 15 ವರ್ಷಗಳಲ್ಲಿ ತಜ್ಞ ವೈದ್ಯರ ಸಂಖ್ಯೆಯು ಕೇವಲ 3550 ರಿಂದ 4957ಕ್ಕೆ ಹೆಚ್ಚಿದೆ. ಈ ಪ್ರಕಾರ ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ ಶೇ.78.9ರಷ್ಟುಸರ್ಜನ್‌ಗಳು, ಶೇ.69.7ರಷ್ಟುಹೆರಿಗೆ ಮಾಡಿಸುವ ವೈದ್ಯರು ಮತ್ತು ಸ್ತ್ರೀ ರೋಗ ತಜ್ಞರು, ಶೇ.78.2ರಷ್ಟುವೈದ್ಯರು ಹಾಗೂ ಶೇ.78.9ರಷ್ಟುಶಿಶು ತಜ್ಞರ ಕೊರತೆಯಿದೆ. ತನ್ಮೂಲಕ ಆರೋಗ್ಯ ಕೇಂದ್ರಗಳಲ್ಲಿ ಒಟ್ಟಾರೆ ಶೇ.76ರಷ್ಟುತಜ್ಞ ವೈದ್ಯರ ಕೊರತೆ ಕಂಡುಬಂದಿದೆ ಎಂದು ಆರ್‌ಎಚ್‌ಎಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಮೆರಿಕಾ ಮೀರಿಸಿದ ಭಾರತ : ಒಂದೇ ದಿನ ದಾಖಲೆಯಷ್ಟು ಕೇಸ್ ...
ಅತಿಹೆಚ್ಚು ವೈದ್ಯರ ಕೊರತೆ ಎದುರಿಸುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಗುಜರಾತ್ ಅಗ್ರಪಟ್ಟಿಯಲ್ಲಿದೆ. ಗುಜರಾತ್‌ಗೆ ಒಟ್ಟಾರೆ 1088 ತಜ್ಞ ವೈದ್ಯರ ಅಗತ್ಯವಿದ್ದು, ಈ ಪೈಕಿ 996 ವೈದ್ಯರ ಕೊರತೆ ಇದೆ. ಮಧ್ಯಪ್ರದೇಶದಲ್ಲಿ 916 ಅಗತ್ಯ ವೈದ್ಯರ ಪೈಕಿ 867 ವೈದ್ಯರ ಕೊರತೆ, ಪಶ್ಚಿಮ ಬಂಗಾಳದಲ್ಲಿ 380 ವೈದ್ಯರ ಅನಿವಾರ್ಯತೆಯಿದ್ದು, ಇಲ್ಲಿ 247 ವೈದ್ಯರ ಕೊರತೆಯಿದೆ.
2020ರ ಮಾ.31ರವರೆಗಿನ ಆರ್‌ಎಚ್‌ಎಸ್ ವರದಿಯನ್ವಯ, ಗ್ರಾಮೀಣ ಭಾರತದಲ್ಲಿ ಒಟ್ಟಾರೆ 38,595 ಆರೋಗ್ಯ ಕೇಂದ್ರಗಳಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ ಯೋಜನೆಯಡಿ 2022ರ ವೇಳೆಗೆ 1,53,000 ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವುದು ಕೇಂದ್ರದ ಗುರಿಯಾಗಿದೆ. ಇನ್ನು ಉಪ ವಿಭಾಗದ ಆಸ್ಪತ್ರೆಗಳಲ್ಲಿ 1,43,538 ಬೆಡ್‌ಗಳು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ 2,87,025 ಬೆಡ್‌ಗಳು ಲಭ್ಯವಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ