
ಮುಂಬೈ(ಮಾ.24) ಮಹಾರಾಷ್ಟ್ರ ಸರ್ಕಾರವು ಕುಟುಂಬ ಯೋಜನಾ ಕಿಟ್‌ನಲ್ಲಿ ರಬ್ಬರ್‌ನ ಪುರುಷರ ಮರ್ಮಾಂಗದ ಮಾದರಿಯ ವಸ್ತು ವಿತರಿಸುವುದರಿಂದ ರಾಜ್ಯದ ಆರೋಗ್ಯ ಕಾರ್ಯಕರ್ತರು ಸಾಕಷ್ಟು ತೊಂದರೆ, ಮುಜುಗರ ಎದುರಿಸುತ್ತಿದ್ದಾರೆ. ವಾಸ್ತವವಾಗಿ, ಭಾರತದಲ್ಲಿ ಇಂದಿಗೂ, ಲೈಂಗಿಕ ಸಂಬಂಧಿತ ವಿಷಯಗಳನ್ನು ಎಲ್ಲೂ ಬಹಿರಂಗವಾಗಿ ಮಾತನಾಡುವುದಿಲ್ಲ. ಈ ವಿವಾದಾತ್ಮಕ ಕ್ರಮಕ್ಕಾಗಿ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಗುರಿಯಾಗಿಸಿಕೊಂಡಿರುವ ಪ್ರಮುಖ ಪ್ರತಿಪಕ್ಷ ಬಿಜೆಪಿ ಈ ಅಭಿಯಾನವನ್ನು ತೀವ್ರವಾಗಿ ಟೀಕಿಸುತ್ತಿದೆ. ಕೂಡಲೇ ಈ ಕಿಟ್ ಹಿಂಪಡೆಯಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಇದರೊಂದಿಗೆ ಸರ್ಕಾರದ ಈ ಕ್ರಮಕ್ಕಾಗಿ ರಾಜ್ಯದ ಆರೋಗ್ಯ ಕಾರ್ಯಕರ್ತರ ಕ್ಷಮೆಯಾಚಿಸಬೇಕು ಎಂದು ಪಕ್ಷ ಹೇಳಿದೆ. ಈ ಕಿಟ್ ಅನ್ನು ಪರಿಚಯಿಸಿದ ಮಹಾರಾಷ್ಟ್ರ ಸರ್ಕಾರವು "ಬುದ್ಧಿ ಕಳೆದುಕೊಂಡಿದೆ" ಎಂದು ಬಿಜೆಪಿ ಶಾಸಕ ಚಿತ್ರಾ ಕಿಶೋರ್ ವಾಘ್ ಹೇಳಿದ್ದಾರೆ. ಅಲ್ಲದೇ ಕಿಟ್‌ನಿಂದ ಆರೋಗ್ಯ ಕಾರ್ಯಕರ್ತರಿಗೆ ಉಂಟಾದ "ಮುಜುಗರ" ಕ್ಕಾಗಿ ಸರ್ಕಾರ ತಕ್ಷಣ ಕ್ಷಮೆಯಾಚಿಸಬೇಕು ಎಂದು ಅವರ ಮಿತ್ರ ಪಕ್ಷವಾದ ಮತ್ತೊಬ್ಬ ಬಿಜೆಪಿ ನಾಯಕ ಆಕಾಶ್ ಭುಂಡ್ಕರ್ ಹೇಳಿದ್ದಾರೆ. ಇದರಿಂದಾಗಿ ಆಶಾ ಕಾರ್ಯಕರ್ತೆಯರು ಪಡೆದಿರುವ ಹೊಸ ಕಿಟ್‌ನಲ್ಲಿ ಶಿಶ್ನದ ಮಾದರಿಯ ಲೈಂಗಿಕ ಆಟಿಕೆ ಇರುವುದು ತೀವ್ರ ಮುಜುಗರಕ್ಕೆ ಕಾರಣವಾಗಿದೆ. ದಿ ಗಾರ್ಡಿಯನ್ ಸುದ್ದಿ ಪ್ರಕಾರ, ಈ ಕಿಟ್‌ನಲ್ಲಿ ಸ್ತ್ರೀ ಜನನಾಂಗದ ರಚನೆಯನ್ನು ಸಹ ಇರಿಸಲಾಗಿದೆ ಎನ್ನಲಾಗಿದೆ.
ಮಹಾರಾಷ್ಟ್ರದ ಆರೋಗ್ಯ ಸೇವೆಗಳ ನಿರ್ದೇಶನಾಲಯದ ಮುಖ್ಯಸ್ಥೆ ಡಾ.ಅರ್ಚನಾ ಪಾಟೀಲ್ ಮಾತನಾಡಿ, ರಾಜ್ಯಾದ್ಯಂತ ಆರೋಗ್ಯ ಕಾರ್ಯಕರ್ತರು ಮತ್ತು ಗ್ರಾಮೀಣ ಆರೋಗ್ಯ ಕೇಂದ್ರಗಳಿಗೆ ಇಂತಹ ಸುಮಾರು 25 ಸಾವಿರ ಕಿಟ್‌ಗಳನ್ನು ವಿತರಿಸಲಾಗಿದೆ, ಇದರಲ್ಲಿ ಶಿಶ್ನದ ಮಾದರಿಯ ಲೈಂಗಿಕ ಆಟಿಕೆ ಇದೆ. ವಾಸ್ತವವಾಗಿ, ರಾಜ್ಯದಲ್ಲಿ ಕಾಂಡೋಮ್‌ಗಳ ಬಳಕೆಯನ್ನು ಉತ್ತೇಜಿಸಲು, ಆರೋಗ್ಯ ಸಚಿವಾಲಯವು ಕುಟುಂಬ ಯೋಜನೆ ಕಾರ್ಯಕ್ರಮದ ಅಡಿಯಲ್ಲಿ ಸಿದ್ಧಪಡಿಸಲಾದ ಕಿಟ್‌ನಲ್ಲಿ ರಬ್ಬರ್ ಶಿಶ್ನದಂತಹ ರಚನೆಯ ಪ್ರಾತ್ಯಕ್ಷಿಕೆಯನ್ನು ನೀಡುತ್ತಿದೆ ಎಂದಿದ್ದಾರೆ.
ಆದೇಶದ ಪ್ರಕಾರ, ಆಶಾ ಕಾರ್ಯಕರ್ತೆಯರಿಗೆ ಈ ರಬ್ಬರ್ ಶಿಶ್ನ ರಚನೆಯ ಕಾಂಡೋಮ್‌ನ ಪ್ರಾತ್ಯಕ್ಷಿಕೆಯನ್ನು ವಿವಿಧ ಸ್ಥಳಗಳಲ್ಲಿ ತೋರಿಸಬೇಕು ಇದರಿಂದ ಜನರು ಕಾಂಡೋಮ್‌ಗಳ ಸರಿಯಾದ ಬಳಕೆಯ ಬಗ್ಗೆ ಸರಿಯಾದ ಜ್ಞಾನವನ್ನು ಹೊಂದಬಹುದು ಎನ್ನಲಾಗಿದೆ.
ಆಶಾ ಕಾರ್ಯಕರ್ತೆಯರಿಗೆ ಮುಜುಗರ
ಇಬ್ಬರು ಆಶಾ ಕಾರ್ಯಕರ್ತೆಯರು ಈ ಬಗ್ಗೆ ಮಾತನಾಡಲು ನಿರಾಕರಿಸಿದರು. ಇದೇ ಸಂದರ್ಭದಲ್ಲಿ ಉಳಿದ ಇಬ್ಬರು ಆಶಾ ಕಾರ್ಯಕರ್ತೆಯರು ಗ್ರಾಮೀಣ ಪ್ರದೇಶದ ಜನರಿಗೆ ಮನವರಿಕೆ ಮಾಡಿಕೊಡಲು ಮಾದರಿಯನ್ನು ಪ್ರದರ್ಶಿಸುವುದು ನಾಚಿಕೆಗೇಡಿನ ಸಂಗತಿ ಎಂದರು. ಏಕೆಂದರೆ ಅಲ್ಲಿರುವ ಜನರು ಈಗಾಗಲೇ ಲೈಂಗಿಕ ಆರೋಗ್ಯದ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಹೀಗಿರುವಾಗ ಈ ಮಾಡೆಲ್ ಗಳನ್ನು ಕಿಟ್ ಬ್ಯಾಗ್ ನಲ್ಲಿ ಕೊಂಡೊಯ್ಯಲು ಮುಜುಗರವಾಗುತ್ತದೆ ಎಂದೂ ಹೇಳಿದ್ದಾರೆ.
ಹೀಗಿದ್ದರೂ ಇನ್ನು ಕೆಲ ಆಶಾ ಕಾರ್ಯಕತರ್ತೆಯರು ಇದು ತಮ್ಮ ಕೆಲಸದ ಒಂದು ಭಾಗ ಎಂದು ಹೇಳಿದ್ದಾರೆ. ಅಗತ್ಯಬಿದ್ದರೆ ಈ ಮಾದರಿಗಳನ್ನು ಬಳಸಿಕೊಂಡು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಮತ್ತು ಇದರಿಂದ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ