100ನೇ ವರ್ಷಾಚರಣೆ ವೇಳೆ RSS ಮನೆ ಮನೆಗೆ ತಲುಪಬೇಕು: ಮೋಹನ್ ಭಾಗವತ್!

By Suvarna NewsFirst Published Sep 11, 2021, 1:28 PM IST
Highlights

* RSS ಕಾರ್ಯಕರ್ತರನ್ನುದ್ದೇಶಿಸಿ ಮುಖ್ಯಸ್ಥ ಮೋಹನ್ ಭಾಗವತ್ ಮಾತು

* ನಾಲ್ಕು ವರ್ಷದೊಳಗೆ ಆರ್‌ಎಸ್‌ಎಸ್‌ ಮನೆ ಮನೆಗೂ ತಲುಪಬೇಕು

* ಸದಸ್ಯರಿಗೆ ನಡೆ, ನುಡಿ ಹೇಗಿರಬೇಕೆಂದು ವಿವರಿಸಿದ ಭಾಗವತ್

ರಾಂಚಿ(ಸೆ.11): ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್  ಆರ್‌ಎಸ್‌ಎಸ್‌ ಇನ್ನು ನಾಲ್ಕು ವರ್ಷಗಳ ಬಳಿಕ ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ದೇಶದ ಮನೆ ಮನೆಯನ್ನೂ ತಲುಪಿರಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಜಾರ್ಖಂಡ್‌ನಲ್ಲಿ ಸಂಘಟನೆಯ ಅವಲೋಕನಕ್ಕಾಗಿ ಮೂರು ದಿನಗಳ ಪ್ರವಾಸದಲ್ಲಿರುವ  ಆರ್‌ಎಸ್‌ಎಸ್‌ ಮುಖ್ಯಸ್ಥ ಭಾಗವತ್ ಶುಕ್ರವಾರ ಧನಬಾದ್ ತಲುಪಿದ್ದಾರೆ. ಇಲ್ಲಿ ಜಾರ್ಖಂಡ್ ಮತ್ತು ಬಿಹಾರದ ಹಿರಿಯ ನಾಯಕರೊಂದಿಗೆ ಸಭೆ ನಡೆಸಿದ್ದಾರೆ.

ಸಂಘಟನೆಗೆ 2025 ರಲ್ಲಿ100 ವರ್ಷವಾಗಲಿದೆ. ಹೀಗಿರುವಾಗ ಸ್ವಯಂ ಸೇವಕರು ಎಲ್ಲಾ ಗ್ರಾಮಗಳಲ್ಲಿ ಶಾಖೆಗಳ ವಿಸ್ತರಣೆಯೊಂದಿಗೆ ಪ್ರತಿ ಮನೆಗೂ ತಲುಪುವ ನಿಟ್ಟಿನಲ್ಲಿ ಶ್ರಮಪಟ್ಟು ಕೆಲಸ ಮಾಡಬೇಕೆಂದು ಸರ್ಸಂಘಲಕ್ (ಭಾಗವತ್) ನಮಗೆ ಸಲಹೆ ನೀಡಿದರು ಎಂದು ಸಭೆಯಲ್ಲಿ ಭಾಗವಹಿಸಿದ ಆರ್‌ಎಸ್‌ಎಸ್ ಕಾರ್ಯಕರ್ತರೊಬ್ಬರು ಹೇಳಿದರು.

ಆರ್‌ಎಸ್‌ಎಸ್ ಸದಸ್ಯರಿಗೆ ಅವರ ನಡವಳಿಕೆ ಹೇಗಿರಬೇಕು ಮತ್ತು ಅವರ ಜೀವನವನ್ನು ರಾಷ್ಟ್ರ ನಿರ್ಮಾಣಕ್ಕೆ ಹೇಗೆ ಮೀಸಲಿಡಬೇಕು ಎಂದು ತಿಳಿಸಲಾಗಿದೆ ಎಂದು ಪದಾಧಿಕಾರಿ ಹೇಳಿದರು. ಇನ್ನು ಆರ್‌ಎಸ್‌ಎಸ್ ಮುಖ್ಯಸ್ಥರು ಶನಿವಾರ ಮಾಧ್ಯಮವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಇದಕ್ಕೂ ಮುನ್ನ, ಭಾಗವತ್ ಅವರಿಗೆ ರಾಜ್ಯ ಬಿಜೆಪಿ ನಾಯಕರು ಮತ್ತು ಎಬಿವಿಪಿ ಮತ್ತು ಭಾರತೀಯ ಮಜ್ದೂರ್ ಸಂಘದ ಕಾರ್ಯಕರ್ತರು ಭವ್ಯವಾದ ಸ್ವಾಗತವನ್ನು ನೀಡಿದರು, ಅವರು ಬೆಳಿಗ್ಗೆ ಗಂಗಾ-ದಾಮೋದರ್ ಎಕ್ಸ್‌ಪ್ರೆಸ್‌ನಲ್ಲಿ ಪಾಟ್ನಾದಿಂದ ಧನ್ಬಾದ್ ತಲುಪಿದ್ದರು.

click me!