‘ದೇಶದ ಜನಸಂಖ್ಯೆ ಅಪಾಯಕಾರಿ ಮಟ್ಟದಲ್ಲಿ ಬೆಳೆಯುತ್ತಿದೆ’| ‘ಜನಸಂಖ್ಯೆ ನಿಯಂತ್ರಣ ಕಾಯ್ದೆ ಜಾರಿಗೆ ತರುವುದು ಇಂದಿನ ತುರ್ತು ಅವಶ್ಯ’| RSS ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯ| ಎರಡು ಮಕ್ಕಳು ಕಡ್ಡಾಯ ಕಾನೂನು ಜಾರಿಗೆ ಭಾಗವತ್ ಆಗ್ರಹ|
ನಾಗ್ಪುರ್(ಜ.18): ದೇಶದ ಜನಸಂಖ್ಯೆ ಅಪಾಯಕಾರಿ ಮಟ್ಟದಲ್ಲಿ ಬೆಳೆಯುತ್ತಿದ್ದು, ಜನಸಂಖ್ಯೆ ನಿಯಂತ್ರಣ ಕಾಯ್ದೆ ಜಾರಿಗೆ ತರುವುದು ಇಂದಿನ ತುರ್ತು ಅವಶ್ಯ ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.
ಎರಡು ಮಕ್ಕಳನ್ನು ಮಾತ್ರ ಹೊಂದುವ ಜನಸಂಖ್ಯೆ ನಿಯಂತ್ರಣ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕು ಎಂದು ಮೋಹನ್ ಭಾಗವತ್ ಆಗ್ರಹಿಸಿದ್ದಾರೆ.
undefined
ಅಪರಾಧಿ ಮನೋಭಾವ ಬದಲಿಸಲು ಹಸು ಆರೈಕೆಯ ಜವಾಬ್ದಾರಿ: ಭಾಗವತ್!
ಜನಸಂಖ್ಯೆ ನಿಯಂತ್ರಣಕ್ಕೆ ತರದಿದ್ದರೆ ಮುಂದಿನ ದಿನಗಳಲ್ಲಿ ದೇಶ ಬಹುದೊಡ್ಡ ಗಂಡಾಂತರಕ್ಕೆ ತುತ್ತಾಗಲಿದೆ ಎಂದಿರುವ ಭಾಗವತ್, ಜನಸಂಖ್ಯೆ ನಿಯಂತ್ರಣದಿಂದ ಮುಂಬರುವ ಅನಾಹುತವನ್ನು ತಪ್ಪಿಸಬಹುದು ಎಂದು ಹೇಳಿದ್ದಾರೆ.
ಒಂದು ವೇಳೆ ಸರ್ಕಾರ ಎರಡು ಮಕ್ಕಳು ಕಡ್ಡಾಯ ನೀತಿಯನ್ನು ಜಾರಿಗೊಳಿಸಿದರೆ ಅದನ್ನು RSS ಬೆಂಬಲ ನೀಡಲಿದೆ ಎಂದೂ ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ.
ಕಾಶಿ-ಮಥುರಾ ಬೇಡಿಕೆ ಘೋಷಣೆ: ಅಂತರ ಕಾಯ್ದುಕೊಂಡ RSS!