
ಪಯಂಗಾಡಿ(ಜು.06): ಅಪರೂಪದ ಕಾಯಿಲೆಯೊಂದರಿಂದ ಬಳಲುತ್ತಿರುವ ಬಡ ಕುಟುಂಬದ ಒಂದೂವರೆ ವರ್ಷದ ಮಗುವಿನ ಜೀವ ಉಳಿಸಲು ಜನರೆಲ್ಲಾ ಸೇರಿ 18 ಕೋಟಿ ರು. ಕಲೆಹಾಕಿದ ಅಪರೂಪದ ಘಟನೆ ಕೇರಳದಲ್ಲಿ ನಡೆದಿದೆ.
ಕಣ್ಣೂರು ಜಿಲ್ಲೆಯ ಕಲಶ್ಶೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ರಫೀಕ್-ಮರಿಯಮ್ ದಂಪತಿಗೆ ಮೂರು ಮಕ್ಕಳಿದ್ದಾರೆ. ಅವರ ಮೂರು ಮಕ್ಕಳ ಪೈಕಿ 15 ವರ್ಷದ ಅರ್ಫಾ ಹಿರಿಯಾಕೆ ಸ್ಪೈನಲ್ ಮಸ್ಕು್ಯಲರ್ ಅಟ್ರೋಪಿ ಎಂಬ ಕಾಯಿಲಿಗೆ ತುತ್ತಾಗಿ ಓಡಾಡದ ಸ್ಥಿತಿಯಲ್ಲಿದ್ದಾಳೆ. ಇದೀಗ ಈ ದಂಪತಿಯ ಒಂದೂವರೆ ವರ್ಷದ ಮಗು ಮಹಮ್ಮದ್‌ಗೂ ಅದೇ ಸಮಸ್ಯೆ ಕಾಣಿಸಿಕೊಂಡಿದೆ. ಅದನ್ನು ತಕ್ಷಣವೇ ನಿವಾರಿಸಲು ಝೋಲ್‌ಜೆನ್ಸ್ಮಾ ಎಂಬ ಕೇವಲ 44 ಎಂ.ಎಲ್.ನ ಔಷಧ ಬೇಕು. ವಿಶ್ವದಲ್ಲೇ ದುಬಾರಿ ಎನ್ನಿಸಿದ ಇದರ ಮೌಲ್ಯ 18 ಕೋಟಿ.
ಆದರೆ ದಂಪತಿ ಬಳಿ ಅಷ್ಟುಹಣವಿಲ್ಲ. ಈ ವಿಷಯ ತಿಳಿದ ಸ್ಥಳೀಯ ಶಾಸಕ ವಿಜಿಲ್ ಮತ್ತು ಗ್ರಾಮಸ್ಥರು ಈ ಬಗ್ಗೆ ಅನಿವಾಸಿ ಭಾರತೀಯರು ಸೇರಿದಂತೆ ಎಲ್ಲರಿಂದ ನೆರವು ಕೋರಿದ್ದರು. ಅಚ್ಚರಿ ಎಂಬಂತೆ ಇದೀಗ ಕೆಲವೇ ದಿನಗಳಲ್ಲಿ 18 ಕೋಟಿ ರು. ಹಣ ಸಂಗ್ರಹವಾಗಿದೆ. ಹೀಗಾಗಿ ಮಹಮ್ಮದ್ ಮುಂದೆ ತನ್ನ ಸೋದರಿಯಂತೆ ಸಮಸ್ಯೆ ಎದುರಿಸಬೇಕಾದ ಸಂಕಟದಿಂದ ಪಾರಾಗಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ