ಜ್ಯೂ. ಎನ್‌ಟಿಆರ್ ಜೊತೆ ಅಮಿತ್ ಶಾ ಡಿನ್ನರ್: ಭೇಟಿ ಹಿಂದಿದ್ಯಾ ರಾಜಕೀಯ ಲೆಕ್ಕಾಚಾರ?‌

Published : Aug 21, 2022, 04:39 PM ISTUpdated : Aug 21, 2022, 06:31 PM IST
ಜ್ಯೂ. ಎನ್‌ಟಿಆರ್ ಜೊತೆ ಅಮಿತ್ ಶಾ ಡಿನ್ನರ್: ಭೇಟಿ ಹಿಂದಿದ್ಯಾ ರಾಜಕೀಯ ಲೆಕ್ಕಾಚಾರ?‌

ಸಾರಾಂಶ

ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಹಯದರಾಬಾದ್‌ನಲ್ಲಿ ಜೂಮಿಯರ್‌ ಎನ್‌ಟಿಆರ್‌ ಅವರನ್ನು ಭೇಟಿ ಮಾಡಲಿದ್ದಾರೆ. ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ಈ ಭೇಟಿ ನಡೆಯಲಿದೆ ಎಂದು ತಿಳಿದುಬಂದಿದೆ. 

ತೆಲುಗು ದೇಶಂ ಪಾರ್ಟಿ (ಟಿಡಿಪಿ) (Telugu Desam Party) ಸಂಸ್ಥಾಪಕ ಎನ್‌ಟಿ ರಾಮರಾವ್ ಅವರ ಮೊಮ್ಮಗ ಹಾಗೂ ತೆಲುಗು ಚಿತ್ರರಂಗದ ಪ್ರಖ್ಯಾತ ನಟ ಜೂನಿಯರ್ ಎನ್‌ಟಿಆರ್ ಅವರನ್ನು ಭಾನುವಾರ ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಔತಣಕೂಟಕ್ಕೆ ಬಿಜೆಪಿ ನಾಯಕರು ಆಹ್ವಾನಿಸಿದ್ದಾರೆ. ತೆಲಂಗಾಣದ ಮುನುಗೋಡೆಯಲ್ಲಿ ಉಪ ಚುನಾವಣೆ ಹಿನ್ನೆಲೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅಮಿತ್ ಶಾ ಮಾತನಾಡಲಿದ್ದು, ಈ ಹಿನ್ನೆಲೆ ಅಲ್ಲಿಗೆ ತೆರಳಿದ್ದಾರೆ. ಇನ್ನೊಂದೆಡೆ, ಹೈದರಾಬಾದ್‌ನಲ್ಲಿ ವಾಸಿಸುತ್ತಿರುವ ಜೂನಿಯರ್ ಎನ್‌ಟಿಆರ್, 2009 ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಟಿಡಿಪಿ ಪರ ಪ್ರಚಾರ ಮಾಡಿದರು ಮತ್ತು ತಮ್ಮ ತಾತ ಸ್ಥಾಪಿಸಿದ ಪಕ್ಷದತ್ತ ವಾಲಿದ್ದರು. ಆದರೆ ಅವರು ಸಕ್ರಿಯ ರಾಜಕೀಯದಿಂದ ದೂರವೇ ಉಳಿದಿದ್ದಾರೆ.

2009 ರಿಂದ, ಜೂನಿಯರ್ ಎನ್‌ಟಿಆರ್‌, ಟಿಡಿಪಿ ನಾಯಕರು ಅಥವಾ ಇತರ ಪಕ್ಷಗಳ ನಾಯಕರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಮತ್ತು ಅವರು ತಮ್ಮ ಚಲನಚಿತ್ರ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಿದ್ದಾರೆ. ಅವರ ತಂದೆ ನಂದಮೂರಿ ಹರಿಕೃಷ್ಣ ಅವರು 2008 ರಿಂದ 2013 ರವರೆಗೆ ಟಿಡಿಪಿ ರಾಜ್ಯಸಭಾ ಸದಸ್ಯರಾಗಿದ್ದರೆ, ಅವರ ಚಿಕ್ಕಪ್ಪ ಮತ್ತು ನಟ ನಂದಮೂರಿ ಬಾಲಕೃಷ್ಣ ಆಂಧ್ರಪ್ರದೇಶದ ಹಿಂದೂಪುರದ ಟಿಡಿಪಿ ಶಾಸಕರಾಗಿದ್ದಾರೆ. ಬಾಲಕೃಷ್ಣ ಟಾಲಿವುಡ್ ಎಂದು ಕರೆಯಲ್ಪಡುವ ತೆಲುಗು ಚಿತ್ರರಂಗದ ಅತ್ಯಂತ ಪ್ರಸಿದ್ಧ ನಟರಲ್ಲಿ ಒಬ್ಬರು, ಇತ್ತೀಚಿನ ಅಖಂಡ ಸೇರಿದಂತೆ ಸುಮಾರು 100 ಚಿತ್ರಗಳಲ್ಲಿ ನಟಿಸಿದ್ದು, ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ಬರಲು ನಿಮ್ಮ ಶ್ರಮ ಬೇಕು: ಬಿಎಸ್‌ವೈಗೆ ಹೇಳಿದ ಮೋದಿ

ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅಮಿತ್ ಶಾ - ಜೂನಿಯರ್‌ ಎನ್‌ಟಿಆರ್‌ ಭೇಟಿ..!
ಅಮಿತ್ ಶಾ ಮತ್ತು ಜೂನಿಯರ್ ಎನ್‌ಟಿಆರ್ ಅವರು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭೇಟಿಯಾಗಲಿದ್ದಾರೆ, ಅಲ್ಲಿ ಪಕ್ಷದ ನಾಯಕರನ್ನು ಭೇಟಿ ಮಾಡಲು ಅಮಿತ್ ಶಾ ಹಯದರಾಬಾದ್‌ಗೆ ತೆರಳುತ್ತಿದ್ದು, ಅಲ್ಲಿ ಕೆಲ ಕಾಲ ಭೇಟಿ ಮಾಡುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎನ್. ರಾಮಚಂದರ್ ರಾವ್ ಹೇಳಿದ್ದಾರೆ. ಇಂದು ಸಂಜೆ ಹಲವು ಪ್ರಮುಖರು ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದು, ಎನ್‌ಟಿಆರ್ ಜೂನಿಯರ್‌ಗೂ ಆಹ್ವಾನ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಜೂನಿಯರ್ ಎನ್‌ಟಿಆರ್‌ ಅವರ ಇತ್ತೀಚಿನ ಚಲನಚಿತ್ರ RRR ಗಾಗಿ ವ್ಯಾಪಕ ಮೆಚ್ಚುಗೆಯನ್ನು ಪಡೆದಿದ್ದು, ಈ ಚಿತ್ರವನ್ನು ಎಸ್ಎಸ್ ರಾಜಮೌಳಿ ನಿರ್ದೇಶಿಸಿದ್ದಾರೆ ಮತ್ತು ತೆಲುಗು ಚಲನಚಿತ್ರ ನಟ ಚಿರಂಜೀವಿ ಅವರ ಮಗ ರಾಮ್ ಚರಣ್ ಸಹ ನಟಿಸಿದ್ದಾರೆ.

ಮೇ 1943 ರಲ್ಲಿ ವಿವಾಹವಾದ ಎನ್‌ಟಿಆರ್‌ ಮತ್ತು ಅವರ ಪತ್ನಿ ಬಸ್ವರಮ ತಾರಕಮ್ ಅವರಿಗೆ 4 ಹೆಣ್ಣುಮಕ್ಕಳು ಸೇರಿದಂತೆ 12 ಮಕ್ಕಳಿದ್ದರು. 1983 ರಲ್ಲಿ ಎನ್‌ಟಿಆರ್‌ ಟಿಡಿಪಿಯನ್ನು ತನ್ನ ಮೊದಲ ಚುನಾವಣೆಯಲ್ಲಿ ಗೆಲುವಿನತ್ತ ಮುನ್ನಡೆಸಿ ಅಧಿಕಾರಕ್ಕೆ ಬಂದಿದ್ದರು. ಅಲ್ಲದೆ, ಎನ್‌ಟಿಆರ್‌ ಅವರಿಂದ ಅಳಿಯ ಎನ್. ಚಂದ್ರಬಾಬು ನಾಯ್ಡು ಹಾಗೂ ಅವರ ಪತ್ನಿ ಮತ್ತು ಎನ್‌ಟಿಆರ್‌ ಪುತ್ರಿ ನಾರಾ ಭುವನೇಶ್ವರಿ ಸಹ ಪಕ್ಷ ಮತ್ತು ರಾಜಕೀಯದಲ್ಲಿ ನೆಲೆ ಕಂಡುಕೊಡರು. 

News Hour: 2023ರ ಚುನಾವಣೆಗೆ ಅನಿವಾರ್ಯವಾದ್ರಾ ಬಿಎಸ್‌ ಯಡಿಯೂರಪ್ಪ!

ಇನ್ನೊಂದೆಡೆ, ಎನ್‌ಟಿಆರ್ ಅವರ ಸ್ವಂತ ಮಕ್ಕಳು ಟಿಡಿಪಿಯಲ್ಲಿ ಮುಖ್ಯಪಾತ್ರ ವಹಿಸಿಲ್ಲ. ಹಾಗೂ, ಪುತ್ರಿ ಡಿ. ಪುರಂದೇಶ್ವರಿ ಮಾತ್ರ ತಮ್ಮ ರಾಜಕೀಯ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಟಿಡಿಪಿ ವ್ಯಾಪ್ತಿಯಿಂದ ಹೊರಬಂದು, ಈಗ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಜೂನಿಯರ್ ಎನ್‌ಟಿಆರ್ ಅವರ ಇತರ ಚಿಕ್ಕಪ್ಪಂದಿರಾದ ಎನ್. ಜಯಕೃಷ್ಣ, ಮೋಹನಕೃಷ್ಣ ಮತ್ತು ರಾಮಕೃಷ್ಣ ಜೂನಿಯರ್ ಚಲನಚಿತ್ರ ನಿರ್ಮಾಪಕರಾಗಿದ್ದರೆ, ಅವರ ಚಿಕ್ಕಮ್ಮಂದಿರ ಪೈಕಿ ಒಬ್ಬರಾದ ಡಾ. ಜಿ ಲೋಕೇಶ್ವರಿ ಸ್ತ್ರೀ ರೋಗ ತಜ್ಞರಾಗಿದ್ದಾರೆ.

ಇನ್ನು, ಟಿಡಿಪಿ ಈ ಹಿಂದೆ ಬಿಜೆಪಿ ಮೈತ್ರಿಕೂಟವಾಗಿತ್ತಾದರೂ, 2019 ರ ವಿಧಾನಸಭೆ ಮತ್ತು ಸಂಸತ್ತಿನ ಚುನಾವಣೆಗಳಿಗೆ ಮುಂಚಿತವಾಗಿ ಚಂದ್ರಬಾಬು ನಾಯ್ಡು ನೇತೃತ್ವದ ಪಕ್ಷವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಿಂದ (ಎನ್‌ಡಿಎ) ಹೊರಬಂದಿತು. ಈ ಮಧ್ಯೆ, ನವೆಂಬರ್ 16 ರಂದು, ತಿರುಪತಿಯಲ್ಲಿ ನಡೆದ ದಕ್ಷಿಣ ವಲಯ ಮಂಡಳಿಯ ಸಭೆಯಲ್ಲಿ ಅಮಿತ್ ಶಾ ಅವರು ಟಿಡಿಪಿಯೊಂದಿಗೆ ಭವಿಷ್ಯದಲ್ಲಿ ಯಾವುದೇ ಸಮಯದಲ್ಲಿ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಹಿನ್ನೆಲೆ ಈಗ ಜೂನಿಯರ್‌ ಎನ್‌ಟಿಆರ್‌ ಅವರನ್ನು ಭೇಟಿ ಮಾಡುತ್ತಿರುವ ಹಿಂದಿನ ರಾಜಕೀಯ ಲೆಕ್ಕಾಚಾರಗಳೇನು ಎಂಬುದು ಚರ್ಚೆಗೆ ಗ್ರಾಸವಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..