ಮೋದಿ ಜತೆ ಇಂದು ಫ್ರೆಂಚ್‌ ಅಧ್ಯಕ್ಷರ ರೋಡ್‌ಶೋ: ರಾಜಸ್ಥಾನದ ಪಾರಂಪರಿಕ ತಾಣಗಳ ಪ್ರವಾಸ

By BK Ashwin  |  First Published Jan 25, 2024, 10:45 AM IST

ರಾಜಸ್ಥಾನದಲ್ಲಿ ಇಮ್ಯಾನುಯೆಲ್ ಮ್ಯಾಕ್ರನ್ ಇಂದು ಪ್ರಧಾನಿ ಮೋದಿ ಅವರೊಂದಿಗೆ ರೋಡ್‌ ಶೋನಲ್ಲಿ ಭಾಗಿಯಾಗಲಿದ್ದು, ಅಲ್ಲಿನ ಪಾರಂಪಾರಿಕ ತಾಣ, ಅರಮನೆಗಳ ಪ್ರವಾಸ ಮಾಡಲಿದ್ದಾರೆ. 


ನವದೆಹಲಿ (ಜನವರಿ 25, 2024): ಈ ವರ್ಷದ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿರುವ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಇಂದು ರಾಜಸ್ಥಾನ ರಾಜಧಾನಿ ಜೈಪುರಕ್ಕೆ ಬಂದಿಳಿಯಲಿದ್ದಾರೆ. ಅವರು ಒಂದೆರಡು ಪಾರಂಪರಿಕ ತಾಣಗಳ ಪ್ರವಾಸ ಮತ್ತು ರೋಡ್‌ಶೋಗಾಗಿ ಪ್ರಧಾನಿ ನರೇಂದ್ರ ಮೋದಿ ರೊಂದಿಗೆ ಸೇರಿಕೊಳ್ಳಲಿದ್ದಾರೆ.

ದಿನವಿಡೀ ರಾಜಸ್ಥಾನದಲ್ಲಿ ಇಮ್ಯಾನುಯೆಲ್ ಮ್ಯಾಕ್ರನ್ ಅಮೇರ್ ಕೋಟೆಗೆ ಭೇಟಿ ನೀಡಲಿದ್ದು, ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಜಂತರ್ ಮಂತರ್ ಪ್ರವಾಸದಲ್ಲಿ ಪ್ರಧಾನಿ ಮೋದಿ ರೊಂದಿಗೆ ಮ್ಯಾಕ್ರನ್‌ ಪ್ರವಾಸ ಕೈಗೊಳ್ಳಲಿದ್ದಾರೆ. ನಂತರ ಉಭಯ ನಾಯಕರು ಜಂತರ್ ಮಂತರ್‌ನಿಂದ ಸಂಗನೇರಿ ಗೇಟ್‌ವರೆಗೆ ಹವಾ ಮಹಲ್‌ನಲ್ಲಿ ಸ್ವಲ್ಪ ಸಮಯ ಕಳೆಯಲಿದ್ದು, ನಂತರ ಜಂಟಿ ರೋಡ್‌ಶೋನಲ್ಲಿ ಭಾಗವಹಿಸಲಿದ್ದಾರೆ.

Tap to resize

Latest Videos

ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶ್ವದ ದೊಡ್ಡಣ್ಣ ಗೈರು: ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಮುಖ್ಯ ಅತಿಥಿಯಾಗಿ ಭಾಗಿ!

ಅಲ್ಲದೆ, ಹವಾ ಮಹಲ್‌ನಲ್ಲಿ ಜೈಪುರದ ವಿಶೇಷ ಮಸಾಲಾ ಚಾಯ್ ಅನ್ನು ಉಭಯ ನಾಯಕರು ಸವಿಯಲಿದ್ದು,ಮತ್ತು ನೀಲಿ ಕುಂಬಾರಿಕೆ ಹಾಗೂ ಪ್ರಸಿದ್ಧ ಕೆತ್ತನೆಯ ಕೆಲಸದಂತಹ ಕರಕುಶಲ ವಸ್ತುಗಳನ್ನು ತೆಗೆದುಕೊಳ್ಳುತ್ತಾರೆ, ಅದಕ್ಕಾಗಿ ಅವರು BHIM UPI ಮೂಲಕ ಪಾವತಿಸುತ್ತಾರೆ ಎಂದು ಮೂಲಗಳು ತಿಳಿಸಿವೆ. ಗಣ್ಯರು ನೋಡಲು ಹವಾ ಮಹಲ್‌ನ ಪಕ್ಕದಲ್ಲಿ ಕರಕುಶಲ ಕಿಯೋಸ್ಕ್‌ಗಳನ್ನು ಸ್ಥಾಪಿಸಲಾಗಿದೆ. ಈ ಮಧ್ಯೆ, ರಾಂಬಾಗ್ ಅರಮನೆಯಲ್ಲಿ ಇಮ್ಯಾನುಯೆಲ್‌ ಮ್ಯಾಕ್ರನ್‌ಗೆ ಖಾಸಗಿ ಭೋಜನವನ್ನು ಸಹ ಯೋಜಿಸಲಾಗಿದೆ.

ಕೇಂದ್ರ ಸರ್ಕಾರ ಮತ್ತು ಫ್ರೆಂಚ್ ಸರ್ಕಾರವು ಫ್ರೆಂಚ್ ಫೈಟರ್ ಜೆಟ್‌ಗಳು ಮತ್ತು ಸೈನ್ಯಕ್ಕಾಗಿ ಜಲಾಂತರ್ಗಾಮಿ ನೌಕೆಗಳ ಬಹು-ಶತಕೋಟಿ ಡಾಲರ್ ವ್ಯವಹಾರಗಳ ಮಾತುಕತೆಯನ್ನು ಮುಂದುವರೆಸುತ್ತಿರುವಾಗ ಈ ಭೇಟಿ ನಡೆಯಲಿದೆ. ಹಾಗೂ, ದ್ವಿಪಕ್ಷೀಯ ಮಾತುಕತೆಯಲ್ಲಿ ಭಾರತದ 26 ರಫೇಲ್ ಯುದ್ಧ ವಿಮಾನಗಳು ಮತ್ತು ಮೂರು ಸ್ಕಾರ್ಪಿಯನ್ ಜಲಾಂತರ್ಗಾಮಿ ನೌಕೆಗಳ ಖರೀದಿಯ ಪ್ರಸ್ತಾಪವೂ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಫ್ರಾನ್ಸ್ ಭಾರತದ ಎರಡನೇ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರನ ಎನಿಸಿಕೊಂಡಿದ್ದು ಮತ್ತು ದಶಕಗಳಿಂದ ಯುರೋಪ್‌ನಲ್ಲಿ ಅತ್ಯಂತ ಹಳೆಯ ಮತ್ತು ಹತ್ತಿರದ ಪಾಲುದಾರರಲ್ಲಿ ಒಂದಾಗಿದೆ. 

ಗಣರಾಜ್ಯೋತ್ಸವಕ್ಕೆ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಭಾಗಿ, ಚರ್ಚೆ ಆಗಲಿರುವ ವಿಚಾರಗಳೇನು?

ಇನ್ನೊಂದೆಡೆ, ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಲು ಕೊನೆಯ ಕ್ಷಣದಲ್ಲಿ ಆಹ್ವಾನ ನೀಡಿದರೂ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್ ಸ್ವೀಕರಿಸಿದ್ದರು. ಇದು ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಬಲದ ಗುರುತು ಎಂದು ಹೇಳಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಗೈರು ಹಾಜರಾಗೋ ಬಗ್ಗೆ ಮಾಹಿತಿ ನೀಡಿದ ನಂತರ ಕೇಂದ್ರ ಸರ್ಕಾರ ಫ್ರೆಂಚ್‌ ಅಧ್ಯಕ್ಷರನ್ನ ಸಂಪರ್ಕಿಸಿತ್ತು. ಕಳೆದ ವರ್ಷ ಜುಲೈನಲ್ಲಿ ಫ್ರಾನ್ಸ್‌ನ ಬಾಸ್ಟಿಲ್ ಡೇ ಆಚರಣೆಯಲ್ಲಿ ಪ್ರಧಾನಿ ಮೋದಿ ಗೌರವಾನ್ವಿತ ಅತಿಥಿಯಾಗಿದ್ದರು.

click me!