Gadkari in J&K : ಭಾರತದ ರಸ್ತೆಗಳಿನ್ನು ಶೀಘ್ರದಲ್ಲಿಯೇ ಅಮೆರಿಕದಂತೆ!

By Suvarna News  |  First Published Nov 25, 2021, 3:37 PM IST

ಮುಂಬರುವ ವರ್ಷಗಳಲ್ಲಿ ಭಾರತದಲ್ಲಿನ ರಸ್ತೆಗಳನ್ನು ಅಮೆರಿಕಾದ ರಸ್ತೆಗಳಂತೆ ಮೂಲ ಸೌಕಾರ್ಯ ಒದಗಿಸಿ ಮಾಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ.


ಇದೇ ವೇಳೆ ಸಚಿವರು, ಮಾತಾ ವೈಷ್ಣೋದೇವಿ ದೇಗುಲ ಇರುವ ಜಮ್ಮುವಿನ ಕತ್ರಾದಲ್ಲಿ ಇಂಟರ್ ಮಾದರಿ ನಿಲ್ದಾಣವನ್ನು ನಿರ್ಮಿಸುವ ಯೋಜನೆಯನ್ನು ಘೋಷಿಸಿದರು. ಈ ನಿಲ್ದಾಣದಲ್ಲಿ ಬಸ್ ನಿಲ್ದಾಣ, ರೈಲು ನಿಲ್ದಾಣ ಮತ್ತು ಹೆಲಿಪ್ಯಾಡ್ ಕೂಡ ಇರುತ್ತದೆ. ಅಲ್ಲದೇ ಈ ನಿಲ್ದಾಣವು 650 ಕಿ.ಮೀ. ಉದ್ದದ ದೆಹಲಿ-ಕತ್ರಾ ಎಕ್ಸ್‌ಪ್ರೆಸ್‌ ವೇ(Delhi-Katra expressway)ಗೆ ಸಂಪರ್ಕ ಕಲ್ಪಿಸಲಿದೆ ಎಂದು ನಿತಿನ್‌ ಗಡ್ಕರಿ ಅವರು ಹೇಳಿದರು. 

ಮುಂದಿನ ಮೂರು ವರ್ಷಗಳಲ್ಲಿ ಜಮ್ಮು ಕಾಶ್ಮೀರದ ರಸ್ತೆಗಳು, ಸೇತುವೆಗಳು ಮತ್ತು ಸುರಂಗಗಳು ಪಶ್ಚಿಮ ಯುರೋಪ್ (western european)ಮಾದರಿಯ ಗುಣಮಟ್ಟವನ್ನು ಪಡೆಯಲಿವೆ. ಈ ರಸ್ತೆಗಳು ಜಮ್ಮು ಕಾಶ್ಮೀರವ(J&K)ನ್ನು ಅಭಿವೃದ್ಧಿಪಡಿಸಿ ಸಮೃದ್ಧಿ ತರುವುದು. ಜೊತೆಗೆ ಪ್ರವಾಸೋದ್ಯಮ, ಹೂಡಿಕೆ ಮತ್ತು ಉದ್ಯಮವನ್ನುರಾಜ್ಯಕ್ಕೆ ಕರೆ ತರಲಿದೆ. ಈ ರಸ್ತೆಗಳಿಂದ ಇಲ್ಲಿನ ರೈತರು ತಮ್ಮ ಉತ್ಪನ್ನಗಳನ್ನು ಸಮಯಕ್ಕೆ ಸರಿಯಾಗಿ ಮತ್ತು ಪರಿಣಾಮಕಾರಿಯಾಗಿ ರಫ್ತು ಮಾಡಬಹುದು. ಅಲ್ಲದೇ ಈ ಪ್ರದೇಶ ಸ್ವಾವಲಂಬಿಯಾಗಲಿದೆ ಎಂದು ಗಡ್ಕರಿ(Nitin Gadkari) ಭರವಸೆ ನೀಡಿದರು.

Latest Videos

undefined

Good News: ಶೀಘ್ರವೇ ಪೆಟ್ರೋಲ್, ಡಿಸೇಲ್ ವಾಹನಗಳ ಬೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಲಭ್ಯ

ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಗಿರುವ ಮನೋಜ್ ಸಿನ್ಹಾ(Manoj Sinha) ಅವರು ಮಂಡಿಸಿದ ಎಲ್ಲಾ ಯೋಜನೆಗಳನ್ನು ಈಗಾಗಲೇ ಅನುಮೋದಿಸಲಾಗಿದೆ. ಇದರಲ್ಲಿ ಜಮ್ಮುವಿನ ಏಳು ರಸ್ತೆ ಯೋಜನೆಗಳನ್ನು ರಾಷ್ಟ್ರೀಯ ಹೆದ್ದಾರಿ ಮತ್ತು ಭಾರತ್ ಮಾಲಾ ಯೋಜನೆಗೆ ಸೇರಿಸಲಾಗುತ್ತದೆ. ಮಾತಾ ವೈಷ್ಣೋದೇವಿ ದೇಗುಲ( Mata Vaishno Devi Shrine)ವೂ ನಮ್ಮ ಶ್ರದ್ಧಾಕೇಂದ್ರವಾಗಿದೆ. ಇಲ್ಲಿಂದ ದೆಹಲಿಗೆ ಕೇವಲ ಆರು ಗಂಟೆಯಲ್ಲಿ ತಲುಪುವಂತೆ ಹಾಗೂ ಜಮ್ಮು ಹಾಗೂ ಶ್ರೀನಗರ ನಡುವಿನ ದೂರವನ್ನು ಕೇವಲ 4 ಗಂಟೆಯಲ್ಲಿ ತಲುಪುವಂತಹ ರಸ್ತೆ ನಿರ್ಮಾಣವಾಗಲಿದೆ. 

ಇದೇ ವೇಳೆ ಗಡ್ಕರಿ, ತಾನು ಅಮೆರಿಕಾ(America)ದ ಮಾಜಿ ಅಧ್ಯಕ್ಷ ಜಾನ್‌ ಎಫ್‌ ಕೆನಡಿ(John F Kennedy) ಅವರ ತತ್ವಗಳನ್ನು ಅನುಸರಿಸುತ್ತೇನೆ ಎಂದರು. ಕೆನಡಿ ಅವರು ಅಮೆರಿಕಾ ಶ್ರೀಮಂತವಾಗಿದೆ ಏಕೆಂದರೆ ಅಮೆರಿಕಾದ ರಸ್ತೆಗಳು ಚೆನ್ನಾಗಿವೆ ಎಂದು  ಹೇಳಿದ್ದರು ಎಂದು ಗಡ್ಕರಿ ಹೇಳಿದರು.  ಮುಂಬರುವ ವರ್ಷಗಳಲ್ಲಿ ಭಾರತದ ರಸ್ತೆಗಳು ಅಮೆರಿಕಾದ ರಸ್ತೆಗಳಂತೆ ಮೂಲ ಸೌಕರ್ಯ ಹೊಂದಲಿವೆ. ದೆಹಲಿಯಿಂದ ಶ್ರೀನಗರ( Srinagar)ಕ್ಕೆ ನಾವು ಕೇವಲ 8 ಗಂಟೆಗಳಲ್ಲಿ ತಲುಪಲಿದ್ದೇವೆ. ದೆಹಲಿಯಿಂದ ಮುಂಬೈಗೆ 12 ಗಂಟೆ, ದೆಹಲಿಯಿಂದ ಚಂಢಿಗಡ, ಹರಿದ್ವಾರ(Haridwar), ಡೆಹ್ರಾಡೂನ್‌ ಹಾಗೂ ಜೈಪುರ(Jaipur)ದಂತಹ ಪ್ರದೇಶಗಳಿಗೆ ಕೇವಲ 2 ಗಂಟೆಯಲ್ಲಿ ತಲುಪುವಂತಹ ರಸ್ತೆ ಮೂಲ ಸೌಕರ್ಯವನ್ನು ನಾವು ಮಾಡಲಿದ್ದೇವೆ. ಇದು ನಾನು ನೀಡುತ್ತಿರುವ ಭರವಸೆ ಎಂದು ಗಡ್ಕರಿ ಹೇಳಿದರು. 

ಈಗಿನ ರಾಜಕಾರಣದಲ್ಲಿ ಅನಂತಕುಮಾರ್‌ ಕೊರತೆ ಎದ್ದು ಕಾಣುತ್ತಿದೆ: ನಿತಿನ್‌ ಗಡ್ಕರಿ

ಇದೇ ವೇಳೆ ಅವರು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌(J&K LG) ಅವರಿಗೆ ಸುಸ್ಥಿರ ಇಂಧನ(sustainable energy) ಆಯ್ಕೆಯನ್ನು ಬಳಸುವಂತೆ ಹಾಗೂ ಜಮ್ಮು ಕಾಶ್ಮೀರದ ಎಲ್ಲೆಡೆ ಇಲೆಕ್ಟ್ರಿಕ್‌ ಬಸ್‌(electric bus) ಬಳಸುವಂತೆ ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ 11,721 ಕೋಟಿ ರೂಪಾಯಿ ಹೂಡಿಕೆಯ ಒಟ್ಟು 259 ಕಿ.ಮೀ. ಉದ್ದದ 25 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ  ಸಚಿವರು ಶಂಕುಸ್ಥಾಪನೆ ಮಾಡಿದ್ದಾರೆ.

click me!