ಬಿಹಾರದ ಮಧಬನಿ ಜಿಲ್ಲೆಯ ಮಾಧೇಪುರದಲ್ಲಿ ಸೇತುವೆ ನೀರು ಪಾಲಾಗಿದೆ. ಕಳೆದ 10 ದಿನಗಳಲ್ಲಿ ಕುಸಿದ ಐದನೇ ಸೇತುವೆ ಇದಾಗಿದೆ. ಈ ಸೇತುವೆ ಕುಸಿತ ಕಾರಣ ಏನು ಎಂದು ಪತ್ತೆ ಮಾಡಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಪಟನಾ: ಕಳೆದ 10 ದಿನಗಲ್ಲಿ 5 ಸೇತುವೆಗಳ ಕುಸಿತಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ (RJD Leader Tejashwi Yadaw) ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದು, ಬಿಹಾರದ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಡಬಲ್ ಇಂಜಿನ್ ಸರ್ಕಾರದ ದ್ವಿಗುಣ ಶಕ್ತಿಯ ಪರಿಣಾಮದಿಂದ ಸೇತುವೆಗಳು ಕುಸಿತವಾಗುತ್ತಿವೆ ಎಂದು ತೇಜಸ್ವಿ ಯಾದವ್ ವ್ಯಂಗ್ಯ ಮಾಡಿದ್ದಾರೆ. ಬಿಹಾರದ ಮಧಬನಿ ಜಿಲ್ಲೆಯ ಮಾಧೇಪುರದಲ್ಲಿ ಸೇತುವೆ ನೀರು ಪಾಲಾಗಿದೆ. ಕಳೆದ 10 ದಿನಗಳಲ್ಲಿ ಕುಸಿದ ಐದನೇ ಸೇತುವೆ ಇದಾಗಿದೆ. ಈ ಸೇತುವೆ ಕುಸಿತ ಕಾರಣ ಏನು ಎಂದು ಪತ್ತೆ ಮಾಡಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಭೂತಿಯಾ ನದಿಗೆ ಅಡ್ಡಲಾಗಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಕಳೆದೊಂದು ವಾರದಿಂದ ಭೂತಿಯಾ ನದಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾತ್ತಿರುವ ಪರಿಣಾಮ ನೀರಿನ ಹರಿವು ಏರಿಕೆಯಾಗಿದೆ. ಈ ಕಾರಣದಿಂದ ಸೇತುವೆ ಕುಸಿತವಾಗಿದೆ ಎಂಬವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಸಾಲು ಸಾಲು ಸೇತುವೆಗಳ ಕುಸಿತ ಆಗ್ತಿರೋ ಹಿನ್ನೆಲೆ ಈ ವಿಷಯ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ವಿಪಕ್ಷ ನಾಯಕರು ಸಿಎಂ ನಿತೀಶ್ ಕುಮಾರ್ ನೇತೃತ್ವದ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ತೇಜಸ್ವಿ ಯಾದವ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಿರ್ಮಾಣ ಹಂತದ ಭಾರತದ ಅತಿದೊಡ್ಡ ಸೇತುವೆ ಕುಸಿದು 1 ಸಾವು , 9 ಮಂದಿ ಗಂಭೀರ
ಡಬಲ್ ಇಂಜಿನ್ ಸರ್ಕಾರದ ಡಬಲ್ ಶಕ್ತಿಯ ಪರಿಣಾಮ ಬಿಹಾರದಲ್ಲಿ ಕೇವಲ 9 ದಿನಗೊಳಗೆ 5 ಸೇತುವೆಗಳು ಬಿದ್ದಿವೆ. ಹಾಗಾಗಿ ಡಬಲ್ ಇಂಜಿನ್ ಸರ್ಕಾರಕ್ಕೆ ಶುಭಾಶಯಗಳು. ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನ ಮತ್ತು ನಿತೀಶ್ ಕುಮಾರ್ ನಾಯಕತ್ವದಲ್ಲಿ 9 ದಿನದೊಳಗೆ 5 ಸೇತುವೆ ಕುಸಿದಿವೆ. ಈ ಮೂಲಕ ಎನ್‌ಡಿಎ ಸರ್ಕಾರ ಬಿಹಾರದ ಜನತೆಗೆ ಮಂಗಲರಾಜನ ಕಲ್ಯಾಣಮಯ ಉಜ್ವಲದ ಶುಭಾಶಯಗಳನ್ನು ತಿಳಿಸುತ್ತಿದೆ. ಸೇತುವೆಗಳ ಕುಸಿತದಿಂದ ಸಾವಿರಾರು ಕೋಟಿ ರೂಪಾಯಿಗಳ ನಷ್ಟ ಅನುಭವಿಸುತ್ತಿರುವ ಸ್ವಯಂಘೋಷಿತ ಪ್ರಾಮಾಣಿಕರು ಇದನ್ನು "ಭ್ರಷ್ಟಾಚಾರ" ಎಂದು ಕರೆಯದೆ "ಸಭ್ಯತೆ" ಎಂದು ಕರೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ವಿರೋಧ ಪಕ್ಷಗಳಿಗೆ ಬಹುಬೇಗ ಭ್ರಷ್ಟಾಚಾರದ ಸರ್ಟಿಫಿಕೇಟ್ ನೀಡಲಾಗುತ್ತದೆ. ಈ ಬಗ್ಗೆ ಮಾಧ್ಯಮಗಳು ವರದಿ ಏಕೆ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಸೇತುವೆ ಕುಸಿತ ಸಂಬಂಧ ವಿಪಕ್ಷ ನಾಯಕರು ರಾಜೀನಾಮೆ ನೀಡಬೇಕೆ ಅಂತಾನೂ ವ್ಯಂಗ್ಯವಾಗಿ ಟೀಕಿಸಿದ್ದಾರೆ.
ಕಾರ್ಯನಿರ್ವಾಹಕ ಎಂಜಿನಿಯರ್‌ನನ್ನು ಅಮಾನತು
ಬಿಹಾರದ 1700 ಕೋಟಿ ರು. ವೆಚ್ಚದ ಚತುಷ್ಪಥ ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಣ ಕಂಪನಿಗೆ ರಾಜ್ಯ ಸರ್ಕಾರ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ನಿರ್ಮಾಣದ ಹೊಣೆ ಹೊತ್ತಿದ್ದ ಕಾರ್ಯನಿರ್ವಾಹಕ ಎಂಜಿನಿಯರ್‌ನನ್ನು ಅಮಾನತು ಮಾಡಿದೆ. ಸೇತುವೆಯ ನಿರ್ಮಾಣ ಹೊಣೆಯನ್ನು ಹರ್ಯಾಣ ಮೂಲದ ಕಂಪನಿ ವಹಿಸಿಕೊಂಡಿದ್ದು, 15 ದಿನದೊಳಗೆ ಉತ್ತರಿಸುವಂತೆ ಸೂಚಿಸಿ ರಸ್ತೆ ನಿರ್ಮಾಣ ಸಂಸ್ಥೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರತ್ಯಯ್ ಅಮೃತ್ ನೋಟಿಸ್ ನೀಡಿದ್ದಾರೆ. ಅಲ್ಲದೇ ಈ ದುರಂತಕ್ಕೆ ಸಂಬಂಧಿಸಿದಂತೆ ನಿಮ್ಮ ಕಂಪನಿಯನ್ನು ಸರ್ಕಾರ ಏಕೆ ಬ್ಲಾಕ್‌ಲಿಸ್ಟ್‌ಗೆ ಹಾಕಬಾರದು ಎಂದೂ ಸಹ ಪ್ರಶ್ನಿಸಲಾಗಿದೆ. ಹಾಗೆಯೇ ಉತ್ತಮ ಗುಣಮಟ್ಟದ ನಿರ್ಮಾಣ ಕಾರ್ಯದ ಮೇಲೆ ಗಮನ ನೀಡದ ಕಾರ್ಯ ನಿರ್ವಾಹಕ ಎಂಜಿನಿಯರ್‌ನನ್ನು ಅಮಾನತು ಮಾಡಲಾಗಿದೆ.
ಉದ್ಘಾಟನೆಗೆ ದಿನ ಮೊದಲು ಕುಸಿದು ಬಿತ್ತು 12 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಸೇತುವೆ
ಅರಾರಿ ಜಿಲ್ಲೆಯಲ್ಲಿ ಕುಸಿದ ಸೇತುವೆ ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿಯೇ ಕಿಶನ್‌ಗಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜೂನ್ 18ರಂದು ಅರಾರಿಯದಲ್ಲಿ ಕಾಮಗಾರಿ ಹಂತದ 12 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದ 183 ಮೀಟರ್ ಉದ್ದದ ಸೇತುವೆ ಕುಸಿದಿತ್ತು. ಜೂನ್ 23ರಂದು ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಕಾಲುವೆಗೆ ನಿರ್ಮಿಸಲಾಗುತ್ತಿದ್ದ ಕಾಮಗಾರಿ ಹಂತದ ಸೇತುವೆ ಕುಸಿದಿತ್ತು. ಜೂನ್ 22ರಂದು ಸಿವಾನ್ ಜಿಲ್ಲೆಯಲ್ಲಿ ಕಾಲುವೆಗೆ ನಿರ್ಮಿಸಿದ್ದ ಸೇತುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿತ್ತು
बधाई हो! बिहार में डबल इंजन सरकार की डबल ताकत से महज 𝟗 दिन में केवल और केवल मात्र 𝟓 पुल ही गिरे है।
प्रधानमंत्री नरेंद्र मोदी की रहनुमाई और मुख्यमंत्री नीतीश कुमार की अगुवाई में 𝟔 दलों वाली डबल इंजनधारी 𝐍𝐃𝐀 सरकार ने बिहारवासियों को 𝟗 दिन में 𝟓 पुल गिरने पर मंगलराज की… pic.twitter.com/Jj8cVPwKlY