ಸುನಕ್, ಕಮಲಾ ಹ್ಯಾರಿಸ್ ಮಾತ್ರವಲ್ಲ ಭಾರತೀಯರ ಕೈಯಲ್ಲಿದೆ ಹಲವು ದೇಶದ ಆಡಳಿತ!

Published : Oct 24, 2022, 08:31 PM IST
ಸುನಕ್, ಕಮಲಾ ಹ್ಯಾರಿಸ್ ಮಾತ್ರವಲ್ಲ ಭಾರತೀಯರ ಕೈಯಲ್ಲಿದೆ ಹಲವು ದೇಶದ ಆಡಳಿತ!

ಸಾರಾಂಶ

ಭಾರತೀಯ ಮೂಲದ ರಿಷಿ ಸುಮಕ್ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮೂಲ ಭಾರತ. ಇಷ್ಟೇ ಅಲ್ಲ ಹಲವು ದೇಶದ ಆಡಳಿತ ಚುಕ್ಕಾಣಿ ಭಾರತೀಯರ ಕೈಯಲ್ಲಿದೆ. ಯಾವ ದೇಶದಲ್ಲಿ ಭಾರತೀಯರು ಆಡಳಿತ ನಡೆಸುತ್ತಿದ್ದಾರೆ? ಇಲ್ಲಿದೆ ವಿವರ

ಬೆಂಗಳೂರು(ಅ.24): ಭಾರತದ ವಿಶ್ವಗುರುವಾಗಿತ್ತು. ಬಳಿಕ ರಾಜರ ಆಡಳಿತ, ಪರಕೀಯರ ದಾಳಿ, ಬ್ರಿಟಿಷರ ಕೈಗೆಳಗೆ ಭಾರತ ಶೂನ್ಯವಾಯಿತು. 1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆಯಿತು. ಇದೀಗ 75 ವರ್ಷದಲ್ಲಿ ಭಾರತ ಮತ್ತೆ ವಿಶ್ವಗುರುವಾಗುತ್ತ ಹೊರಟಿದೆ. ಇದೀಗ ಭಾರತೀಯ ಮೂಲದ ರಿಷಿ ಸುನಕ್ ಅತ್ಯಂತ ಬಲಿಷ್ಠ, ಸೂರ್ಯಮುಳುಗದ ದೇಶ ಎಂದೇ ಕರೆಯುವ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಅಂದು ಪರಕೀಯರು ಭಾರತವನ್ನು ಆಳಿದ್ದರೆ, ಇಂದು ಭಾರತೀಯರು ವಿಶ್ವದ ಹಲವು ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಕಾರ್ಪೋರೇಟ್, ಖಾಸಗಿ ಕಂಪನಿಗಳ ಮುಖ್ಯಸ್ಥರಾಗಿಯೂ ಭಾರತೀಯರೇ ತುಂಬಿದ್ದಾರೆ. ಬ್ರಿಟನ್ ಆಡಳಿತ ಭಾರತೀಯ ಮೂಲದ ರಿಷಿ ಸುನಕ್ ಕೈಯಲ್ಲಿದೆ. ಇದರೊಂದಿಗೆ ಭಾರತೀಯ ಮೂಲದ ಯಾರೆಲ್ಲಾ ಯಾವ ದೇಶದಲ್ಲಿ ಆಡಳಿತ ನಡೆಸುತ್ತಿದ್ದಾರೆ? ಅನ್ನೋ ವಿವರ ಇಲ್ಲಿದೆ.

ಕಮಲಾ ಹ್ಯಾರಿಸ್
ವಿಶ್ವದ ದೊಡ್ಡಣ್ಣ ಎಂದೇ ಗುರುತಿಸಿಕೊಂಡಿರುವ ಅಮೆರಿಕದ ಉಪಾಧ್ಯಕ್ಷೆ ಭಾರತೀಯ ಮೂಲದ ಕಮಲಾ ಹ್ಯಾರಿಸ್. ಅಮೆರಿಕ ಆಡಳಿತದಲ್ಲಿ ಉಪಾಧ್ಯಕ್ಷರ ಪಾತ್ರ ಪ್ರಮುಖವಾಗಿದೆ. ಕಮಲಾ ಹ್ಯಾರಿಸ್ ಅಮೆರಿದ ಮುಂದಿನ ಅಧ್ಯಕ್ಷೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಆದರೆ ಪ್ರಬಲ ದೇಶದ ಪ್ರಮುಖ ಹುದ್ದೆಯಲ್ಲಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಲಂಕರಿಸಿರುವುದು ಭಾರತೀಯರ ಸಂತಸ ಇಮ್ಮಡಿಗೊಳಿಸಿದೆ.

ಭಾರತೀಯನ ಕೈಗೆ ಬ್ರಿಟಿಷ್ ಆಡಳಿತ, ಯುಕೆ ಪ್ರಧಾನಿಯಾಗಿ ಇನ್ಫಿ ಮೂರ್ತಿ ಅಳಿಯ ರಿಷಿ ಸುನಕ್ ಆಯ್ಕೆ!

ಪ್ರವಿಂದ್ ಜಗ್ನೌಥ್
ಪ್ರವಿಂದ್ ಜಗ್ನೌಥ್ ಮಾರಿಷಸ್ ಪ್ರಧಾನಿ. 2017ರಿಂದ ಮಾರಿಷಸ್ ಪ್ರಧಾನಿಯಾಗಿರುವ ಪ್ರವಿಂದ್ ಜಗ್ನೌಥ್ ಮೂಲ ಉತ್ತರ ಪ್ರದೇಶ. ಪ್ರವಿಂದ್ ಪೋಷಕರು ಪೂರ್ವಜರು ಉತ್ತರ ಪ್ರದೇಶದಿಂದ ಮಾರಿಷಸ್‌ಗೆ ತರೆಳಿದವರು. ಹಿಂದೂ ಧರ್ಮದ ಅಹೀರ್ ಸಮುದಾಯದಲ್ಲಿ ಹುಟ್ಟಿದ ಪ್ರವಿಂದ್ ಇದೀಗ ಮಾರಿಷಸ್ ಕಂಡ ಅತ್ಯುತ್ತಮ ಪ್ರಧಾನಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 

ಆ್ಯಂಟೋನಿಯಾ ಕೋಸ್ಟಾ
ಪೋರ್ಚುಗಲ್ ದೇಶದ ಪ್ರಧಾನಿ ಆ್ಯಂಟೋನಿಯಾ ಕೋಸ್ಟಾ ಮೂಲ ಭಾರತ. 2015ರಿಂದ ಪೋರ್ಚುಗಲ್ ಪ್ರಧಾನಿಯಾಗಿರುವ ಆ್ಯಂಟೋನಿಯಾ ಹುಟ್ಟಿ ಬೆಳೆದಿದ್ದು ಪೋರ್ಚುಗಲ್‌ನಲ್ಲಿ. ಆದರೆ ಆ್ಯಂಟೋನಿಯೋ ಪೂರ್ವಜರು ಗೋವಾ ಮೂಲದವರು. 

ಸುನಕ್ ಆಯ್ಕೆ ಬೆನ್ನಲ್ಲೇ ಆನಂದ್ ಮಹೀಂದ್ರ ಟ್ವೀಟ್, ಚರ್ಚಿಲ್ ಮಾತು ನೆನೆಪಿಸಿ ಬ್ರಿಟಿಷರಿಗೆ ಕಪಾಳಮೋಕ್ಷ!

ಪೃಥ್ವಿರಾಜ್‌ಸಿಂಗ್ ರೂಪನ್
2019ರಿಂದ ಮಾರಿಷಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಪೃಥ್ವಿರಾಜ್ ಸಿಂಗ್ ರೂಪನ್ ಭಾರತೀಯ ಮೂಲದವರು. ಹಿಂದೂ ಧರ್ಮದ ಆರ್ಯ ಸಮಾಜದಲ್ಲಿ ಹುಟ್ಟಿದ ಪೃಥ್ವಿರಾಜ್ ಸಿಂಗ್ ರೂಪನ್ ಮಾರಿಷಸ್‌ನ ಅತ್ಯುನ್ನತ ಹುದ್ದೆ ಅಲಂಕರಿಸಿದ್ದಾರೆ.  ಸಯುಕ್ತ ರೂಪನ್ ಅವರನ್ನು ವಿವಾಹವಾಗಿರುವ ಪೃಥ್ವಿರಾಜ್ ಸಿಂಗ್ ರೂಪನ್ ಅವರಿಗೆ ದಿವ್ಯ, ಜೋತ್ಸ್ನಾ, ಆದಿಷ್ಠ, ವೇದಿಶಾ ಅನ್ನೋ ಮಕ್ಕಳಿದ್ದಾರೆ.

ಚಾನ್ ಸಂತೋಖಿ
ಸೌತ್ ಅಮೆರಿಕದಲ್ಲಿರುವ ಸುರಿನೇಮ್ ಪುಟ್ಟ ದೇಶದ 9ನೇ ಅಧ್ಯಕ್ಷರಾಗಿರುವ ಚಾನ್ ಸಂತೋಖಿ ಭಾರತೀಯ ಮೂಲದವರು.  2020 ರಿಂದ ಸುರಿನಾಮ್‌ನ 9 ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1959 ರಲ್ಲಿ ಸುರಿನಾಮ್ ಜಿಲ್ಲೆಯ ಲೆಲಿಡಾರ್ಪ್‌ನಲ್ಲಿ ಇಂಡೋ-ಸುರಿನಾಮಿಸ್ ಹಿಂದೂ ಕುಟುಂಬದಲ್ಲಿ ಜನಿಸಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹಬೂಬಾ...ಹಾಡಿಗೆ ನೃತ್ಯದ ವೇಳೆ ಗೋವಾ ಪಬ್‌ ದುರಂತ!
₹500 ಕೋಟಿ ಕೊಟ್ರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ : ಸಿಧು ಪತ್ನಿ ಆರೋಪ