ವಿಶ್ವ ಮಟ್ಟದಲ್ಲಿ ನವ ಭಾರತದ ಉದಯ: ಸದ್ಗುರು

By Kannadaprabha NewsFirst Published May 31, 2023, 9:57 AM IST
Highlights

ನಾವು ಇಂದು ನವ ಭಾರತ ನಿರ್ಮಾಣದ ಹೊಸ್ತಿಲಲ್ಲಿದ್ದೇವೆ. ಇಡೀ ವಿಶ್ವದ ಮೇಲೆ ತನ್ನದೇ ರೀತಿಯಲ್ಲಿ ಹೊಸ ಛಾಪು ಮರುಸ್ಥಾಪಿಸಿ ನವ ರಾಷ್ಟ್ರದ ನವೋದಯಕ್ಕೆ ಅದ್ಭುತವಾಗಿ ಸಜ್ಜಾಗಿದ್ದೇವೆ: ಸದ್ಗುರು, ಈಶ ಪ್ರತಿಷ್ಠಾನ 

ಅಂತಾರಾಷ್ಟ್ರೀಯ ರಂಗದಲ್ಲಿ ಯೋಗದ ಜೊತೆಗೆ, ನಮ್ಮ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯ ವೈಭವದ ಕೇಂದ್ರಗಳ ಪುನರುಜ್ಜೀವಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮುಂದಾಳತ್ವದಲ್ಲಿ ಕೈಗೊಳ್ಳಲಾಗುತ್ತಿರುವ ಪ್ರಯತ್ನಗಳ ಬಗ್ಗೆ ಅವಲೋಕನ ನಿಜಕ್ಕೂ ವಿಶೇಷವಾಗಿದೆ. ಇದು ಹೃದಯಸ್ಪರ್ಶಿಯೂ ಆಗಿದೆ. ನಾವು ಇಂದು ನವ ಭಾರತ ನಿರ್ಮಾಣದ ಹೊಸ್ತಿಲಲ್ಲಿದ್ದೇವೆ. ಇಡೀ ವಿಶ್ವದ ಮೇಲೆ ತನ್ನದೇ ರೀತಿಯಲ್ಲಿ ಹೊಸ ಛಾಪು ಮರುಸ್ಥಾಪಿಸಿ ನವ ರಾಷ್ಟ್ರದ ನವೋದಯಕ್ಕೆ ಅದ್ಭುತವಾಗಿ ಸಜ್ಜಾಗಿದ್ದೇವೆ.

ಭಾರತವು ಪ್ರಸ್ತುತ ವಿಶ್ವದಾದ್ಯಂತ ಎಲ್ಲ ಕಡೆಯಿಂದ ಗೌರವ, ಎಲ್ಲವನ್ನೂ ಒಳಗೊಳ್ಳುವ ದೃಷ್ಟಿಕೋನದಿಂದ ಹುಟ್ಟಿಕೊಂಡಿದೆ. ರಾಷ್ಟ್ರದ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಮಾತ್ರವಲ್ಲದೆ, ಭಾರತದ ಛಾಪನ್ನು, ನಮ್ಮ ಆಧ್ಯಾತ್ಮಿಕ ತತ್ವಗಳನ್ನು ಮರುಸ್ಥಾಪಿಸಲು ಮತ್ತು ಪುನರುಜ್ಜೀವಗೊಳಿಸಲು ಸಮಾನವಾಗಿ ಕೇಂದ್ರೀಕರಿಸಲಾಗಿದೆ. ಈ ಪ್ರಮುಖ ಅಂಶಗಳಲ್ಲಿ ಭಾರತವನ್ನು ಮುನ್ನಡೆಸುವಲ್ಲಿ ಸಮರ್ಪಿತ ಪ್ರಯತ್ನ ಮತ್ತು ಸಮರ್ಥ ನಾಯಕತ್ವಕ್ಕಾಗಿ ನಾನು ರಾಷ್ಟ್ರದ ನಾಯಕರು ಮತ್ತು ಗೌರವಾನ್ವಿತ ಪ್ರಧಾನಮಂತ್ರಿಯನ್ನು ಶ್ಲಾಘಿಸುತ್ತೇನೆ.

'ದಿ ಕೇರಳ ಸ್ಟೋರಿ'ಯಲ್ಲಿ ಶಿವನನ್ನು ಗೇಲಿ ಮಾಡಿದ ಮಹಿಳೆ; ಸದ್ಗುರುವಿನ ಹಳೆಯ ಉತ್ತರ ವೈರಲ್

ಯೋಗದ ಪರಂಪರೆ

ಭಾರತವು ಸದಾ ಶ್ರೀಮಂತ ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿದೆ. ಧರ್ಮ, ನಂಬಿಕೆಗಳು, ಪಂಥಗಳು ಅಥವಾ ಸಮುದಾಯಗಳ ಗಡಿಗಳಿಗೆ ಈ ದೇಶ ಸೀಮಿತವಾಗಿಲ್ಲ. ಇದು ಅಸಂಖ್ಯಾತ ಸಂತರು, ಋುಷಿಗಳು ಸೃಷ್ಟಿಸಿದ ಸಂಸ್ಕೃತಿಯನ್ನು ಹೊಂದಿದೆ. ಮಾನವ ಪ್ರಜ್ಞೆಯ ಬಗ್ಗೆ ಅಪಾರವಾಗಿ ಇಲ್ಲಿ ಪರಿಶೋಧನೆ ನಡೆದಿದೆ. ಯೋಗ ವಿಜ್ಞಾನದ ಮೂಲಕ ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಅತ್ಯುನ್ನತ ಸಾಮರ್ಥ್ಯವನ್ನು ಕಂಡುಕೊಳ್ಳಲು ವಿವಿಧ ಮಾರ್ಗಗಳು ಮತ್ತು ವಿಧಾನಗಳನ್ನು ನಮ್ಮ ಪರಂಪರೆ ಒದಗಿಸಿದೆ. ಯೋಗದ ಪ್ರಾಮುಖ್ಯ ಮತ್ತು ಪ್ರಭಾವವನ್ನು ಹಿಂದೆಂದಿಗಿಂತಲೂ ಇಂದು ಹೆಚ್ಚಿನ ಮಟ್ಟದಲ್ಲಿ ಜಗತ್ತು ಅರ್ಥೈಸಿಕೊಳ್ಳುತ್ತಿದೆ. ಭಾರತವನ್ನು ಯೋಗದ ಪಿತಾಮಹ ಎಂದು ಜಾಗತಿಕ ಮಟ್ಟದಲ್ಲಿ ಒಪ್ಪಿಕೊಳ್ಳಲಾಗಿದೆ.

2014ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಸ್ತಾಪಿಸಿದಂತೆ ಮತ್ತು 177 ಸದಸ್ಯ ರಾಷ್ಟ್ರಗಳು ಒಪ್ಪಿಕೊಂಡ ನಂತರ ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಯೋಗ ದಿನವನ್ನು ಘೋಷಿಸಿದೆ. ಜೂನ್‌ 21ರಂದು ಇಡೀ ವಿಶ್ವ ಅಂತಾರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ವೈಭವವಾಗಿ ಹಾಗೂ ಆಸಕ್ತಿಯಿಂದ ಆಚರಿಸುತ್ತಿದೆ. ಇದೊಂದು ಬಹಳ ಮಹತ್ವದ ಹೆಜ್ಜೆಯಾಗಿದೆ. ಪ್ರತಿ ವರ್ಷ ಈ ದಿನ ಯೋಗದ ಪ್ರಯೋಜನಗಳನ್ನು ಪ್ರಚುರಪಡಿಸಲು, ಯೋಗಾಭ್ಯಾಸವನ್ನು ಉತ್ತೇಜಿಸಲು ಮತ್ತು ವ್ಯಕ್ತಿಗಳು ಮತ್ತು ಸಮುದಾಯಗಳಲ್ಲಿ ಆರೋಗ್ಯ, ಸಾಮರಸ್ಯ ಮತ್ತು ಶಾಂತಿಯನ್ನು ಹೆಚ್ಚಿಸಲು ಹಾಗೂ ಇದರ ಬಗ್ಗೆ ಸಂಪೂರ್ಣವಾಗಿ ಅರಿವು, ಜಾಗೃತಿ ಮೂಡಿಸಲು ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಆಧ್ಯಾತ್ಮಿಕ ನವೋದಯ

ಅಂತಾರಾಷ್ಟ್ರೀಯ ರಂಗದಲ್ಲಿ ಯೋಗದ ಜೊತೆಗೆ, ನಮ್ಮ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯ ವೈಭವದ ಕೇಂದ್ರಗಳ ಪುನರುಜ್ಜೀವಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮುಂದಾಳತ್ವದಲ್ಲಿ ಕೈಗೊಳ್ಳಲಾಗುತ್ತಿರುವ ಪ್ರಯತ್ನಗಳ ಬಗ್ಗೆ ಅವಲೋಕನ ನಿಜಕ್ಕೂ ವಿಶೇಷವಾಗಿದೆ. ಇದು ಹೃದಯಸ್ಪರ್ಶಿಯೂ ಆಗಿದೆ. ಕಾಶಿ ವಿಶ್ವನಾಥ ಕಾರಿಡಾರ್‌ ಸ್ಥಾಪನೆಯೊಂದಿಗೆ ಕಾಶಿಯ ಪುನರ್‌ ಅಭಿವೃದ್ಧಿ, ಪರಿವರ್ತನೆ, ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳ ಅಭಿವೃದ್ಧಿಯನ್ನು ಒಳಗೊಂಡಿರುವ ಮೆಗಾ ಚಾರ್‌ ಧಾಮ… ಯೋಜನೆ, ಗುಜರಾತಿನ ಪ್ರಸಿದ್ಧ ಸೋಮನಾಥ ದೇವಾಲಯ ಮತ್ತು ಉಜ್ಜಯಿನಿಯ ಮಹಾಕಾಲ… ದೇವಾಲಯದ ಜೀರ್ಣೋದ್ಧಾರವು ದಿಟ್ಟಯೋಜನೆಗಳಾಗಿವೆ. ಜತೆಗೆ ಜಗತ್ತಿನಲ್ಲಿ ನಮ್ಮ ದೇಶವನ್ನು ವಿಶೇಷ ಸ್ಥಾನಕ್ಕೆ ಕೊಂಡೊಯ್ಯುವ ಮಹಾತ್ವಾಕಾಂಕ್ಷೆ ಹೆಜ್ಜೆಯಾಗಿದೆ. ಇದು ದೇಶದ ನಾಗರಿಕರು ಮತ್ತು ಜಾಗತಿಕ ಮಟ್ಟದಲ್ಲಿ ಆಧ್ಯಾತ್ಮಿಕ ಕಲಿಕೆ ಮತ್ತು ಬೆಳವಣಿಗೆಗೆ ಭಾರತವನ್ನು ಅತ್ಯಂತ ಪ್ರಮುಖ ಕೇಂದ್ರ ಸ್ಥಾನದಲ್ಲಿ ತಂದು ನಿಲ್ಲಿಸಿದೆ.

ಪ್ರಕೃತಿಯೊಂದಿಗೆ ಸಾಮರಸ್ಯ

ಭಾರತೀಯ ಆಧ್ಯಾತ್ಮಿಕ ಸಂಪ್ರದಾಯವು ವ್ಯಕ್ತಿ ಮತ್ತು ಬ್ರಹ್ಮಾಂಡದ ನಡುವಿನ ಸಂಬಂಧದ ಬಗ್ಗೆ ಒಂದು ಅನನ್ಯ ದೃಷ್ಟಿಕೋನವನ್ನು ಹೊಂದಿದೆ. ಇವುಗಳನ್ನು ಪ್ರತ್ಯೇಕವಾಗಿ ನೋಡುವ ಬದಲು, ಸಂಪ್ರದಾಯವು ಯಾವಾಗಲೂ ಎಲ್ಲ ವಸ್ತುಗಳ ಪರಸ್ಪರ ಸಂಬಂಧ ಮತ್ತು ಅಸ್ತಿತ್ವದ ಮೂಲಭೂತ ಏಕತೆಗೆ ಒತ್ತು ನೀಡಿದೆ. ಇದರ ಪರಿಣಾಮವಾಗಿ ಎಲ್ಲ ಜೀವಗಳಿಗೆ ಗೌರವವನ್ನು ತರುತ್ತದೆ ಹಾಗೂ ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ ಆಧಾರವಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧಿಕಾರಾವಧಿಯಲ್ಲಿ ಹಲವಾರು ಪರಿಸರ ಸಂರಕ್ಷಣೆಯ ಉಪಕ್ರಮಗಳು ಇಂದು ಪ್ರವರ್ಧಮಾನಕ್ಕೆ ಬಂದಿವೆ. 13 ನದಿಗಳ ಪುನರುಜ್ಜೀವಕ್ಕಾಗಿ 19,000 ಕೋಟಿ ರುಪಾಯಿಗಳ ವಿನಿಯೋಗ, ಕಾವೇರಿ ಕರೆ ಚಳವಳಿಯ ಪರಿಣಾಮ, ಭಾರತದ ಜನಸಂಖ್ಯೆಯ ನೀರಿನ ಭದ್ರತೆಗೆ ಅತ್ಯಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಗಂಗಾನದಿಯನ್ನು ಸ್ವಚ್ಛಗೊಳಿಸುವ ನಮಾಮಿ ಗಂಗೆ ಕಾರ್ಯಕ್ರಮದಡಿ ಮಾಲಿನ್ಯವನ್ನು ನಿವಾರಿಸುವ ಒತ್ತು ನದಿಯ ಸಂರಕ್ಷಣೆಗೆ ನೀಡುವುದರೊಂದಿಗೆ, ಭಾರತದ ಅತ್ಯಂತ ಪವಿತ್ರ ನದಿಯನ್ನು ಸಂರಕ್ಷಿಸುವ ಬದ್ಧತೆಯನ್ನು ಪ್ರದರ್ಶಿಸಲಾಗಿದೆ. ಇದು ನಿಜಕ್ಕೂ ಜಗಮೆಚ್ಚುವ ಕಾರ್ಯವಾಗಿದೆ. ನಾವೆಲ್ಲರೂ ಎದ್ದುನಿಂತು ಪರಿಸರವನ್ನು ಸಂರಕ್ಷಿಸಲು ಮತ್ತು ಭಾರತದ ಹಸಿರು ಕ್ಷೇತ್ರವನ್ನು ಇನ್ನಷ್ಟುವಿಸ್ತರಿಸಲು ಕೈಜೋಡಿಸಬೇಕು.

ಅಂತರ್ಗತ ಅಭಿವೃದ್ಧಿ

ಅಸಂಖ್ಯಾತ ವಿವಿಧ ಸ್ತರಗಳನ್ನು ಹೊಂದಿರುವ ವಿಶಾಲವಾದ ನಮ್ಮ ಪ್ರೀತಿಯ ಭಾರತ ದೇಶದಲ್ಲಿ, ಏಕಕಾಲದಲ್ಲಿ ಎಲ್ಲರನ್ನು ಒಳಗೊಂಡ, ಎಲ್ಲೆಡೆಗೂ ಅನುವಾಗುವ ಮತ್ತು ಸುಸ್ಥಿರವಾಗಿರುವ ಅಭಿವೃದ್ಧಿಯ ಬಹು ಆಯಾಮಗಳು ಅತ್ಯಗತ್ಯ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಉಪಕ್ರಮಗಳನ್ನು ಕೈಗೊಳ್ಳುವ ಮೂಲಕ ವಿಶ್ವಾದಾದ್ಯಂತ ತಮ್ಮ ಹೆಗ್ಗುರುತು ಹೊಂದಿದ್ದಾರೆ. ಮತ್ತು ಎಲ್ಲರ ಸಮಗ್ರ ಸಕ್ಷೇಮಕ್ಕೆ ಒತ್ತು ನೀಡುತ್ತಿದ್ದಾರೆ. ಒಂದು ಕಡೆಯ ಉಪಕ್ರಮ ಯೋಜನೆಗಳು ಭಾರತವನ್ನು ಡಿಜಿಟಲ್‌ ಯುಗಕ್ಕೆ ಕೊಂಡೊಯ್ದಿವೆ. ಅಂತರ್ಗತ ಬೆಳವಣಿಗೆ ಮತ್ತು ಪಾರದರ್ಶಕ ಆಡಳಿತಕ್ಕಾಗಿ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವ ಉದ್ದೇಶ ಇದರ ಹಿಂದಿದೆ. ಮತ್ತೊಂದೆಡೆ ಸಮಾಜದ ಎಲ್ಲ ವರ್ಗಗಳನ್ನು ರಾಷ್ಟ್ರದ ಆರ್ಥಿಕ ಬೆಳವಣಿಗೆಯಲ್ಲಿ ಸೇರಿಸುವುದಕ್ಕೂ ಒತ್ತು ನೀಡಲಾಗುತ್ತಿದೆ. ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳು, ಸ್ವಚ್ಛ ಭಾರತ ಅಭಿಯಾನದಂತಹ ಸಾಮೂಹಿಕ ಜಾಗೃತಿ ಯೋಜನೆಗಳು ದೇಶಾದ್ಯಂತ ಜನರ ಜೀವನವನ್ನು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಹೆಚ್ಚಿಸುವ ಗುರಿಯನ್ನು ಹೊಂದಿವೆ.

ಮಹಿಳೆ, ಪುರುಷ ಎನ್ನೋದು ಬಾತ್‌ರೂಮ್‌ಗೆ ಸೀಮಿತವಾಗಲಿ ಸಾಕು ಎಂದ Sadhguru

75 ವರ್ಷ: ಮಿಂಚುತ್ತಿರುವ ಭಾರತ

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75ನೇ ವರ್ಷದಲ್ಲಿ ನಾವು ವಿಶ್ವ ವೇದಿಕೆಯಲ್ಲಿ ವಿಶೇಷ ಸ್ಥಾನದಲ್ಲಿ ನಿಂತಿದ್ದೇವೆ ಎಂಬುದು ಪ್ರತಿ ಭಾರತೀಯನಿಗೆ ಅಗಾಧ ಹೆಮ್ಮೆ ಮತ್ತು ಸಂತೋಷದ ವಿಷಯ. ತವರು ರಾಷ್ಟ್ರವನ್ನು ಇಡೀ ವಿಶ್ವಮಟ್ಟದಲ್ಲಿ ಮರುಸ್ಥಾಪನೆ ಮಾಡುವ ಮತ್ತು ಹವಾಮಾನ ಬದಲಾವಣೆಯಂತಹ ನಿರ್ಣಾಯಕ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸುವ ಹಾಗೂ ನಾಯಕತ್ವವನ್ನು ವಹಿಸಿಕೊಳ್ಳುವ ಮಟ್ಟಕ್ಕೆ ಭಾರತ ಬಂದು ನಿಂತಿದೆ. ಇದರ ಜೊತೆಗೆ ವಿಶೇಷವಾಗಿ ಅಮೃತ ಕಾಲದ ವರ್ಷದಲ್ಲಿ ಜಿ20 ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಒಂದು ಅದ್ಭುತ ಅವಕಾಶವಾಗಿದೆ.

ನಾವು ಸಾಮೂಹಿಕ ಯಶಸ್ಸನ್ನು ಹೆಚ್ಚು ಚರ್ಚೆಗೆ ಒಳಪಡಿಸುತ್ತವೆ, ವೈಯಕ್ತಿಕ ಯಶಸ್ಸನ್ನು ಅಲ್ಲ. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರದಲ್ಲಿ ಆದ ಪ್ರಗತಿಯನ್ನು ಯಾರೂ ಅಲ್ಲಗಳೆಯುವಂತಿಲ್ಲ. ಪ್ರತಿ ಕ್ಷೇತ್ರದಲ್ಲಿ ನವೋತ್ಸಾಹ ಮತ್ತು ಚೈತನ್ಯಶೀಲವಾಗಿ ಭಾರತದ ದೃಷ್ಟಿಕೋನವನ್ನು ಉತ್ತೇಜಿಸುವ ಕೆಲಸ ನಡೆಯುತ್ತಿದೆ. ಇದು ನಿಸ್ಸಂದೇಹವಾಗಿ ಶತಕೋಟಿಗೂ ಹೆಚ್ಚು ಜನರ ಮೇಲೆ ಭಾರಿ ಪ್ರಭಾವ ಬೀರಿದೆ. ಅದಕ್ಕಿಂತಲೂ ಹೆಚ್ಚು ಮುಖ್ಯವಾಗಿ, ದೇಶ ಮತ್ತು ಪ್ರಪಂಚದಾದ್ಯಂತ ಅನೇಕರಿಗೆ ಸ್ಫೂರ್ತಿ ನೀಡಿದೆ. ಒಂದು ಭೂಮಿ. ಒಂದು ಕುಟುಂಬ. ಒಂದು ಭವಿಷ್ಯ.

click me!