
ದೆಹಲಿ(ಏ.25): ಕೊರೋನಾ ಭೀಕರತೆಗೆ ದೇಶ ನಲುಗಿದೆ. ಪ್ರತಿ ದಿನ ಕೊರೋನಾ ಕಣ್ಣೀರ ಕತೆಗಳು ದೇಶವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಇದೀಗ ಇದೇ ಕೊರೋನಾ ಸೋಂಕಿನಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ರಾಜನ್ ಮಿಶ್ರಾ ಇಂದು(ಏ.25) ನಿಧನರಾಗಿದ್ದಾರೆ. 70 ವರ್ಷದ ರಾಜನ್ ಮಿಶ್ರಾ ದೆಹಲಿಯ ಸೇಂಟ್ ಸ್ಟೀಫನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
2 ದಿನದಲ್ಲಿ ಡಿಸ್ಚಾರ್ಜ್, ಐಯಾಮ್ ಪರ್‌ಫೆಕ್ಟ್ಲಿ ಆಲ್‌ರೈಟ್: ಎಸ್‌ಪಿಬಿ ಕೊನೆಯ ಮಾತು!
ರಾಜನ್ ಮಿಸಅರಾ ನಿಧನ ಕುರಿತು ಕಲಾವಿದ ಸಲೀಮ್ ಮರ್ಚೆಂಟ್ ಟ್ವೀಟ್ ಮಾಡಿದ್ದಾರೆ. ಇದು ಹೃದಯ ವಿದ್ರಾವಕ ಸುದ್ದಿ. ಪದ್ಮಭೂಷನ್ ರಾಜನ್ ಮಿಶ್ರಾ ಜಿ ನಮ್ಮನ್ನು ಅಗಲಿದ್ದಾರೆ. ಕೋವಿಡ್ ಸೋಂಕಿನಿಂದ ಬಳಲಿದ ರಾಜನ್, ಬೆನಾರಸ್ ಘರನಾದ ಶಾಸ್ತ್ರೀಯ ಗಾಯಕರಾಗಿದ್ದರು. ರಾಜನ್ ಕುಟುಂಬಕ್ಕೆ ನನ್ನ ಸಂತಾಪ. ಓಂ ಶಾಂತಿ. ಎಂದು ಸಲೀಮ್ ಮರ್ಚೆಂಟ್ ಟ್ವೀಟ್ ಮಾಡಿದ್ದಾರೆ.
ಕೊರೋನಾ ಸೋಂಕು ಕಾಣಿಸಿಕೊಂಡ ರಾಜನ್ ಮಿಶ್ರಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೋನಾ ಸೋಂಕಿನ ಕಾರಣ ಹೃದಯದಲ್ಲಿ ಸಮಸ್ಯೆ ಉಲ್ಬಣಿಸಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಿಶ್ರಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಹಿಂದೂಸ್ತಾನಿ ಶಾಸ್ತ್ರೀಯ ಗಾಯಕರಾಗಿರುವ ರಾಜನ್ ಮಿಶ್ರಾ, ತಮ್ಮ ಸಹೋದರ ಸಾಜನ್ ಮಿಶ್ರಾ ಜೊತೆ ದೇಶ ವಿದೇಶಗಳಲ್ಲಿ ಹಲವು ಸಂಗೀತ ಕಚೇರಿ ನಡೆಸಿಕೊಟ್ಟಿದ್ದಾರೆ. ಜರ್ಮನಿ, ಫ್ರಾನ್ಸ್, ಸ್ವಿಟ್ಜರ್ಲೆಂಡ್, ಆಸ್ಟ್ರಿಯಾ, ಯುಎಸ್ಎ, ಯುಕೆ, ನೆದರ್ಲೆಂಡ್, ಯುಎಸ್ಎಸ್ಆರ್, ಸಿಂಗಾಪುರ್, ಕತಾರ್, ಬಾಂಗ್ಲಾದೇಶ , ಮಸ್ಕತ್ ಸೇರಿದಂತೆ ಹಲವು ದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಂಗೀತ ಕ್ಷೇತ್ರಕ್ಕೆ ಕೊಡುಗೆಯನ್ನು ಪರಿಗಣಿಸಿ 2007ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. 1998ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 1994-94ರಲ್ಲಿ ಗಂಧರ್ವ ರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರೀಯ ತಾನ್ಸೇನ ಸಮ್ಮಾನ ಪ್ರಶಸ್ತಿ ಪಡೆದಿರುವ ರಾಜನ್ ಮಿಶ್ರಾ ಅಪಾರ ಸಂಗೀತ ಆರಾಧಕರನ್ನು ಹೊಂದಿದ್ದಾರೆ.
ರಾಜನ್ ಮಿಶ್ರಾ ನಿಧನಕ್ಕೆ ಪ್ರದಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಶಾಸ್ತ್ರೀಯ ಸಂಗೀತ ಜಗತ್ತಿನಲ್ಲಿ ಛಾಪು ಮೂಡಿಸಿದ ಪಂಡಿತ್ ರಾಜನ್ ಮಿಶ್ರಾ ಜಿ ಅವರ ನಿಧನ ತುಂಬಾ ದುಃಖಕರವಾಗಿದೆ. ಬನಾರಸ್ ಘರಾನಾದೊಂದಿಗೆ ಮಿಶ್ರಾಜಿಯ ಒಡನಾಟ ಹೊಂದಿದ್ದಾರೆ. ರಾಜನ್ ಮಿಶ್ರಾ ನಿಧನ ಕಲೆ ಮತ್ತು ಸಂಗೀತ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ. ಶೋಕಾಚರಣೆಯ ಈ ಗಂಟೆಯಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪ. ಓಮ್ ಶಾಂತಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ರಾಜನ್ ಮಿಶ್ರಾ 1951ರಲ್ಲಿ ವಾರಣಾಸಿಯಲ್ಲಿ ಜನಿಸಿದರು. 1977ರಲ್ಲಿ ರಾಜನ್ ಮಿಶ್ರಾ ಹಾಗೂ ಸಾಜನ್ ಮಿಶ್ರಾ ದೆಹಲಿಗೆ ತೆರಳಿ ತಮ್ಮ ಸಂಗೀತ ಕಚೇರಿಗಳಿಗೆ ಮತ್ತಷ್ಟು ವೇಗ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ