ದೀಪಾವಳಿಗೆ ಪಟಾಕಿ ಕೊಂಡೊಯ್ಯುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಪಟಾಕಿ ಸ್ಫೋಟಗೊಂಡು ಸ್ಕೂಟರ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದರೆ, ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ.
ಆಂಧ್ರ ಪ್ರದೇಶ(ನ.01) ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವಾಗ ಹಾಗೂ ಪಟಾಕಿ ಸಾಗಿಸುವಾಗ ಅತೀವ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಒಂದು ಸಣ್ಣ ತಪ್ಪಿಗೆ ದುಬಾರಿ ಬೆಲೆ ತೆರಬೇಕಾಗಬಹುದು. ಇದೀಗ ಸ್ಕೂಟರ್ ಮೂಲಕ ಈರುಳ್ಳಿ ಪಟಾಕಿ ಕೊಂಡೊಯ್ಯುತ್ತಿದ್ದ ವೇಳೆ ಸ್ಫೋಟಗೊಂಡಿದೆ. ಪರಿಣಾಮ ಸ್ಕೂಟರ್ ರೈಡರ್ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಇತ್ತ ಘಟನೆಯಲ್ಲಿ ಐವರಿಗೆ ಗಂಭೀರ ಗಾಯಗೊಂಡ ಘಟನೆ ಆಂಧ್ರ ಪ್ರದೇಶ ಎಲ್ಲೂರು ಜಿಲ್ಲೆಯಲ್ಲಿ ನಡೆದಿದೆ.
ಈರುಳ್ಳಿ ಪಟಾಕಿ ಅಥವಾ ಈರುಳ್ಳಿ ಬಾಂಬ್ ಎಂದೇ ಜನಪ್ರಿಯಗೊಂಡಿರುವ ಸ್ಫೋಟಕನ್ನು ಹೊಂಡಾ ಆ್ಯಕ್ಟೀವಾ ಮೂಲಕ ಕೊಂಡೊಯ್ಯಲಾಗುತ್ತಿತ್ತು. ಸುಧಾಕರ್ ಅನ್ನೋ ವ್ಯಕ್ತಿ ಸ್ಕೂಟರ್ ಮೂಲಕ ಈರುಳ್ಳಿ ಪಟಾಕಿಯನ್ನು ಸಾಗಿಸುತ್ತಿದ್ದರು. ಗುಂಡಿ ಬಿದ್ದ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಸ್ಕೂಟರ್ ಆಳವಾದ ಗುಂಡಿ ಮೇಲಿಂದ ಸಾಗಿದೆ. ಈ ವೇಳೆ ಸ್ಕೂಟರ್‌ನಲ್ಲಿಟ್ಟದ ಈರುಳ್ಳಿ ಬಾಂಬ್ ನೆಲಕ್ಕೆ ಬಿದ್ದು ಸ್ಫೋಟಗೊಂಡಿದೆ. ಈರುಳ್ಳಿ ಬಾಂಬ್ ನೆಲಕ್ಕೆ ಎಸೆದು ಸ್ಫೋಟಿಸುವ ಪಟಾಕಿಯಾಗಿದೆ. ಹೀಗಾಗಿ ಈ ಪಟಾಕಿ ಬಿದ್ದ ತಕ್ಷಣ ಭಾರಿ ಸ್ಫೋಟಗೊಂಡಿದೆ.
undefined
ದೀಪಾವಳಿ ಪಟಾಕಿಯಿಂದ ನಿಮ್ಮ ಕಾರನ್ನು ಸುರಕ್ಷಿತವಾಗಿಡುವುದು ಹೇಗೆ? ಇಲ್ಲಿದೆ ಸುಲಭ ಟಿಪ್ಸ್!
ಸ್ಫೋಟದ ತೀವ್ರತೆಗೆ ಸುಧಾರ್ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಬೆಲು ಸಾಯಿ, ಸುವರ ಶಶಿ, ಕೆ ಶ್ರೀನಿವಾಸ ರಾವ್, ಎಸ್‌ಕೆ ಸುಧಾಕರ್, ಸುರೇಶ್ ಹಾಗೂ ಸತೀಶ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ರಸ್ತೆ ಬದಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಬ್ಬರು ಸ್ಕೂಟರ್ ಮೂಲಕ ಸಾಗುತ್ತಿರುವ ದೃಶ್ಯ ಸೆರೆಯಾಗಿದೆ. ಸ್ಕೂಟರ್ ಗುಂಡಿಗೆ ಬಿದ್ದು ಸಾಗುತ್ತಿದ್ದಂತೆ ಪಟಾಕಿ ಕೆಳಕ್ಕೆ ಬಿದ್ದು ಸ್ಫೋಟಗೊಂಡಿದೆ. ಮುಖ್ಯ ರಸ್ತೆಯಲ್ಲೇ ಈ ಘಟನೆ ನಡೆದಿದೆ. ಹೀಗಾಗಿ ಅಕ್ಕ ಪಕ್ಕದಲ್ಲಿದ್ದವರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟ ಸಂಭವಿಸುತ್ತಿದ್ದಂತೆ ಜಂಕ್ಷನ್‌ನಲ್ಲಿದ್ದ ಹಲವರು ದಿಕ್ಕಾಪಾಲಾಗಿ ಓಡಿದ್ದಾರೆ. ಸುತ್ತಮುತ್ತ ಇದ್ದವರು ಗಾಯಗೊಂಡಿದ್ದರೆ ಕೆಲ ದೂರದಲ್ಲಿದ್ದವರ ಕಿವಿ ತಮಟೆಗೆ ತೀವ್ರ ಗಾಯವಾಗಿದೆ.
ಈರುಳ್ಳಿ ಪಟಾಕಿ ಹೆಚ್ಚು ಕಡಿಮೆ ತೀವ್ರವಾದ ಸ್ಫೋಟಕವೇ ಆಗಿದೆ. ಈರುಳ್ಳಿ ಆಕಾರದಲ್ಲಿ ಇರುವುದರಿಂದ ಇದಕ್ಕೆ ಈರುಳ್ಳಿ ಬಾಂಬ್ ಎಂದು ಜನಪ್ರಿಯವಾಗಿದೆ. ಈ ಸ್ಫೋಟಕದಲ್ಲಿ ಸಾವು ಹಾಗೂ ಗಾಯದ ಪ್ರಮಾಣ ಹೆಚ್ಚು. ಸ್ಫೋಟಕವಾಗಿಯೂ ಈರುಳ್ಳಿ ಬಾಂಬ್ ಬಳಕೆ ಮಾಡಲಾಗುತ್ತದೆ. ಈರುಳ್ಳಿ ಬಾಂಬ್ ಬಳಕೆಗೆ ಅನುಮತಿ ಬೇಕು. ಇದು ದೀಪಾವಳಿಗೆ ಬಳಸುವ ಪಟಾಕಿ ಅಲ್ಲ. ಆದರೆ ಇದೀಗ ಸಂಭವಿಸಿರುವ ಸ್ಫೋಟ ದೀಪಾವಳಿಗಾಗಿ ಅನಧಿಕೃತವಾಗಿ ಈ ಬಾಂಬ್ ತಯಾರಿಸಿ ಸಾಗಿಸಲಾಗುತ್ತಿತ್ತಾ ಅಥವಾ ಬೇರೆ ಉದ್ದೇಶಕ್ಕೆ ಈರುಳ್ಳಿ ಬಾಂಬ್ ಸಾಗಾಟ ನಡೆದಿತ್ತಾ ಅನ್ನೋದು ತನಿಖೆಯಿಂದ ಸತ್ಯ ಹೊರಬರಬೇಕಾಗಿದೆ.
ನಿಗದಿತ ಉದ್ದೇಶಗಳಿಗಾಗಿ ಮಾತ್ರ ಈ ಸ್ಫೋಟಕ ಬಳಕೆ ಮಾಡಲು ಅನುಮತಿ ಇದೆ. ಇದಕ್ಕೆ ಪೂರ್ವ ಅನುಮತಿ, ಪರವಾನಗೆ ಅತೀ ಅಗತ್ಯವಾಗಿದೆ. ಎಲ್ಲೂರು ಜಿಲ್ಲೆಯಲ್ಲಿ ನಡೆದ ಈ ಘಟನೆ ಕುರಿತು ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಿಗದಿತ ಉದ್ದೇಶಗಳಿಗಾಗಿ ಮಾತ್ರ ಈ ಸ್ಫೋಟಕ ಬಳಕೆ ಮಾಡಲು ಅನುಮತಿ ಇದೆ. ಇದಕ್ಕೆ ಪೂರ್ವ ಅನುಮತಿ, ಪರವಾನಗೆ ಅತೀ ಅಗತ್ಯವಾಗಿದೆ. ಎಲ್ಲೂರು ಜಿಲ್ಲೆಯಲ್ಲಿ ನಡೆದ ಈ ಘಟನೆ ಕುರಿತು ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದೇಶಾದ್ಯಂತ ಪಟಾಕಿ ಸ್ಫೋಟ ಘಟನೆಗಳು ವರದಿಯಾಗಿದೆ. ಇತ್ತೀಚೆಗೆ ಕೇರಳದ ದೇವಸ್ಥಾನದ ಉತ್ಸವದ ವೇಳೆ ಪಟಾಕಿ ಸ್ಫೋಟಗೊಂಡು ಬಾರಿ ದುರಂತ ಸಂಭವಿಸಿತ್ತು. ದೇವಸ್ಥಾನದ ಆವರಣದಲ್ಲಿ ಪಟಾಕಿ ಸಂಗ್ರಹಿಸಿಟ್ಟ ಸಂಗ್ರಹಾರದಲ್ಲಿ ಸ್ಫೋಟ ಸಂಭವಿಸಿತ್ತು. ಹೀಗಾಗಿ ಸಿಡಿ ಮದ್ದುಗಳು ಭೀಕರವಾಗಿ ಸ್ಫೋಟಗೊಂಡಿತ್ತು. ದೇವಸ್ಥಾನಕ್ಕೆ ಆಗಮಿಸಿದ ಭಕ್ತರು, ಸಿಬ್ಬಂದಿಗಳು ಸೇರಿದಂತೆ ಹಲವರು ಮೃತಪಟ್ಟಿದ್ದರು.
ಬೈಕ್ ಟ್ಯಾಂಕ್‌ಗೆ ಪಟಾಕಿ ಇಟ್ಟು ಸಿಡಿಸಿದ ಯುವಕ; ಬೈಕ್ ಗತಿ ಏನಾಯ್ತು ನೋಡಿ!