
ಪ್ರಧಾನಿ ನರೇಂದ್ರ ಮೋದಿ ಅವರು ಹಿಂದುಳಿದ ವರ್ಗ OBC ಗುಂಪಿಗೆ ಸೇರಿರುವುದಾಗಿ ಹೇಳುತ್ತಲೇ ಬಂದಿದ್ದಾರೆ. ತಮ್ಮ ಚುನಾವಣಾ ಸಮಯದಲ್ಲಿಯೂ ಅವರು ಒಬಿಸಿ ವರ್ಗದವರು ಎಂದೇ ನಮೂದಿಸಿದ್ದಾರೆ. ಆದರೆ, ಪ್ರಧಾನಿ ಮೋದಿ ಅವರ ಜಾತಿಯ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ನೀಡಿರುವ ಶಾಕಿಂಗ್ ಹೇಳಿಕೆಯೊಂದು ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸುತ್ತಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ರೇವಂತ್ ರೆಡ್ಡಿ ಅವರು, ಹೈದರಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ವೇಳೆ ಸಿಎಂ ರೇವಂತ್ ರೆಡ್ಡಿ, ಅವರು ಪ್ರಧಾನಿ ಮೋದಿ ಹುಟ್ಟಿನಿಂದ ಮೇಲ್ಜಾತಿಯವರು, ಅವರು ಮಾನಸಿಕವಾಗಿ ಹಿಂದುಳಿದ ವರ್ಗದ ವಿರೋಧಿ ಎಂದು ಹೇಳಿದ್ದಾರೆ.
"ನಾನು ನಿಮಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ಪ್ರಧಾನಿ ಮೋದಿ ಅವರು ಹಿಂದುಳಿದ ಜಾತಿಗೆ ಸೇರಿದವರು ಎನ್ನುತ್ತಾರೆ. ಆದರೆ ಅದು ನಿಜವಲ್ಲ. ಹುಟ್ಟಿನಿಂದ ಅವರು ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ. ಅವರು ಕಾನೂನುಬದ್ಧವಾಗಿ OBC ಗೆ ಮತಾಂತರಗೊಂಡಿದ್ದಾರೆ. 2001 ರಲ್ಲಿ, ಮುಖ್ಯಮಂತ್ರಿಯಾಗುವ ಮೊದಲು, ಅವರ ಜಾತಿ ಗುಜರಾತ್‌ನಲ್ಲಿ ಮೇಲ್ವರ್ಗದವರಲ್ಲಿತ್ತು. ಮುಖ್ಯಮಂತ್ರಿಯಾದ ನಂತರ, ಅವರು ಆ ಜಾತಿಯನ್ನು BC ಗೆ ವಿಲೀನಗೊಳಿಸಿದರು. ಪ್ರಧಾನಿ ಮೋದಿ BC ಆಗಿ ಹುಟ್ಟಿಲ್ಲ. ಅವರು ಹುಟ್ಟಿನಿಂದಲೇ ಮೇಲ್ಜಾತಿಯಲ್ಲಿದ್ದರು. ಅವರ ಪ್ರಮಾಣಪತ್ರ BC ಆಗಿರಬೇಕು, ಆದರೆ ಅವರ ಮನಸ್ಥಿತಿ BC ವಿರೋಧಿಯಾಗಿದೆ ಎಂದಿದ್ದಾರೆ.
ಪ್ರಧಾನಿ ಮೋದಿ ಹತ್ಯೆಗೆ ಸ್ಕೆಚ್! ವಿಮಾನದ ಮೇಲೆ ಭಯೋತ್ಪಾದನಾ ದಾಳಿ ಎಚ್ಚರಿಕೆ... ಆಗಿದ್ದೇನು?
ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರಿ ಕದನಕ್ಕೆ ಕಾರಣವಾಗಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಕಲ್ಲಿದ್ದಲು ಸಚಿವ ಜಿ. ಕಿಶನ್ ರೆಡ್ಡಿ, ಈ ಹೇಳಿಕೆಗಳು ಮುಖ್ಯಮಂತ್ರಿ ಹುದ್ದೆಯಲ್ಲಿರುವ ವ್ಯಕ್ತಿಗೆ ತಕ್ಕದ್ದಲ್ಲ ಎಂದಿದ್ದಾರೆ. ಜೊತೆಗೆ, ಪ್ರಧಾನಿಯವರು ಯಾವ ಜಾತಿಗೆ ಸೇರಿದವರು ಎಂಬ ಬಗ್ಗೆ ಸಾರ್ವಜನಿಕ ಚರ್ಚೆಗೆ ಬರುವಂತೆ ಮುಖ್ಯಮಂತ್ರಿಗೆ ಸವಾಲು ಹಾಕಿದ್ದಾರೆ. ರಾಜ್ಯ ಮತ್ತು ದೇಶಾದ್ಯಂತ ಕಾಂಗ್ರೆಸ್ ಸಾರ್ವಜನಿಕ ಬೆಂಬಲವನ್ನು ಕಳೆದುಕೊಳ್ಳುತ್ತಿರುವಾಗ ರೇವಂತ್ ರೆಡ್ಡಿ ಅಸಹನೆಯಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದರು. ಮೋದಿ ಅವರಿಗೆ ರೇವಂತ್ ರೆಡ್ಡಿ ಅವರ ಪ್ರಮಾಣಪತ್ರದ ಅಗತ್ಯವಿಲ್ಲ ಎಂದ ಸಚಿವರು, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಮೋದಿ ಸರ್ಕಾರ ಕೈಗೊಂಡ ಕ್ರಮಗಳ ಪಟ್ಟಿಯನ್ನು ಪ್ರಸ್ತುತಪಡಿಸಬಹುದು ಎಂದು ಹೇಳಿದರು. ಇದರಲ್ಲಿ BC ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವುದು, 27 OBCಗಳು, 12 SCಗಳು, 8 STಗಳು ಮತ್ತು ಐದು ಅಲ್ಪಸಂಖ್ಯಾತ ನಾಯಕರನ್ನು ಕೇಂದ್ರ ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳುವುದು ಮತ್ತು NEET ನಲ್ಲಿ BCಗಳಿಗೆ ಶೇಕಡಾ 27 ರಷ್ಟು ಮೀಸಲಾತಿ ಒದಗಿಸುವುದು ಸೇರಿವೆ ಎಂದಿದ್ದಾರೆ.
ಆದರೆ, ಅದೇ ಇನ್ನೊಂದೆಡೆ, ಪ್ರಧಾನಿಯವರ ಜಾತಿಯ ಬಗ್ಗೆ ಗಲಾಟೆ ಹೆಚ್ಚುತ್ತಿದ್ದಂತೆಯೇ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಜಾತಿ ಮತ್ತು ಧರ್ಮ ಯಾವುದೆಂದು ಮುಖ್ಯಮಂತ್ರಿಗಳಿಗೆ ತಿಳಿದಿದೆಯೇ ಎಂದು ಸವಾಲು ಹಾಕಿದ್ದಾರೆ. ಪ್ರಧಾನಿಯವರ ಜಾತಿಯ ಬಗ್ಗೆ ಮಾತನಾಡುವುದು, ಕಾಂಗ್ರೆಸ್ ಪಕ್ಷದ BC ಗಳಿಗೆ ಶೇಕಡಾ 42 ರಷ್ಟು ಮೀಸಲಾತಿ ನೀಡುವ ಭರವಸೆಯಿಂದ ಗಮನವನ್ನು ಬೇರೆಡೆ ಸೆಳೆಯಲು ಮತ್ತೊಂದು ಹತಾಶ ತಂತ್ರವಾಗಿದೆ ಎಂದು ಕುಮಾರ್ ಹೇಳಿದರು. 1994 ರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮೋದಿಯವರನ್ನು ಒಬಿಸಿ ಪಟ್ಟಿಯಲ್ಲಿ ಸೇರಿಸಲಾಗಿತ್ತು ಎಂಬುದನ್ನು ಅವರು ಮರೆತಿದ್ದಾರೆ ಎನ್ನುವ ಮೂಲಕ ರಾಹುಲ್ ಗಾಂಧಿಯವರ ಬಗ್ಗೆ ಎಳೆದು ಬಂದಿದ್ದಾರೆ. ಫಿರೋಜ್ ಜಹಾಂಗೀರ್ ಗಾಂಧಿ ಅವರು ರಾಹುಲ್ ಗಾಂಧಿಯವರ ಅಜ್ಜ ಎಂದು ಗೊತ್ತಲ್ಲವೆ, ಹಾಗಿದ್ದರೆ ರಾಹುಲ್ ಗಾಂಧಿ ಯಾವ ಜಾತಿ? ಅವರ ಧರ್ಮ ಯಾವುದು? ಅವರಿಗೆ ತಿಳಿದಿದೆಯೇ ಅಥವಾ ನಾವು ಹೇಳಬೇಕೆ ಎಂದು ಪ್ರಶ್ನಿಸಿದ್ದಾರೆ.
ನಾನೂ ಖಿನ್ನತೆಗೆ ಜಾರಿದ್ದೆ... ಮಕ್ಕಳಿಗೆ ಪರೀಕ್ಷೆಯ ಟಿಪ್ಸ್ ಕೊಟ್ಟ ದೀಪಿಕಾ ಪಡುಕೋಣೆ: ಪಿಎಂ ಮೋದಿ ಶ್ಲಾಘನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ