
ಎಲಾನ್ ಮಸ್ಕ್ 13 ನೇ ಮಗು: ಎಲಾನ್ ಮಸ್ಕ್ ಆಗಾಗ್ಗೆ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾದರು, ಭೇಟಿಗಾಗಿ ಪತ್ನಿ ಮಗುವಿನೊಂದಿಗೆ ಆಗಮಿಸಿದ್ದರು. ಪ್ರಧಾನಿ ಮೋದಿಯವರು ಮಗುವಿನೊಂದಿಗೆ ಮಾತನಾಡುತ್ತಿರುವ ಫೋಟೋ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ವೈರಲ್ ಆಗಿರುವ ವಿಡಿಯೋ ಚಿತ್ರಗಳಲ್ಲಿ ಎಲಾನ್ ಮಸ್ಕ್ ತಮ್ಮ ಮಕ್ಕಳೊಂದಿಗಿರುವುದು ಕಾಣಬಹುದು. ಅದ್ಯಾಗೂ ಫೋಟೋದಲ್ಲಿ ಕಾಣಿಸಿರುವ ಮಗು ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.
ಸಾಮಾಜಿಕ ಮಾಧ್ಯಮ ಪ್ರಭಾವಿ(Social media influencer) ಮತ್ತು ಬರಹಗಾರ್ತಿ ಆಶ್ಲೇ ಸೇಂಟ್ ಕ್ಲೇರ್(Ashley St. Clair) ಫೆಬ್ರವರಿ 15 ರಂದು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಐದು ತಿಂಗಳ ಹಿಂದೆ ಮಸ್ಕ್‌ನ ಮಗುವಿಗೆ ಜನ್ಮ ನೀಡಿದ್ದಾಗಿ ಹೇಳಿ ಜಗತ್ತನ್ನೇ ಬೆಚ್ಚಿಬಿಳಿಸಿದ್ದರು. ಆದರೆ ಈ ಬಗ್ಗೆ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಸಿಇಒಗಳಿಂದ ಇನ್ನೂವರೆಗೂ ಯಾವುದೇ ದೃಢೀಕರಣ ಬಂದಿಲ್ಲ. ಈ ಹೇಳಿಕೆ ನಿಜವೆಂದು ಸಾಬೀತಾದರೆ, ಇದು ವಿಶ್ವದ ಅತ್ಯಂತ ಪ್ರಸಿದ್ಧ ಬಿಲಿಯನೇರ್‌ಗಳಲ್ಲಿ ಒಬ್ಬರಾದ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರ 13 ನೇ ಮಗುವಾಗಿರುತ್ತದೆ. ಇನ್‌ಸ್ಟಾಗ್ರಾಮ್‌ನಲ್ಲಿ ಮಾಡಿದ ಟ್ವೀಟ್‌ನಲ್ಲಿ, ಆಶ್ಲೇ ಸೇಂಟ್ ಕ್ಲೇರ್,'ಐದು ತಿಂಗಳ ಹಿಂದೆ, ನಾನು ಈ ಜಗತ್ತಿಗೆ ಹೊಸ ಮಗುವಿಗೆ ಜನ್ಮ ನೀಡಿದೆ ಮತ್ತು ಎಲೋನ್ ಮಸ್ಕ್ ಈ ಮಗುವಿನ ತಂದೆ'ಯಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ ಅಮೆರಿಕದಲ್ಲಿ ಪ್ರಧಾನಿ ಮೋದಿಗೆ ಎಲಾನ್ ಮಸ್ಕ್ ನೀಡಿದ ಉಡುಗೊರೆ ಏನು?
ನಮ್ಮ ಮಗುವಿನ ಗೌಪ್ಯತೆ ಮತ್ತು ಸುರಕ್ಷತೆಗಾಗಿ ನಾನು ಇಲ್ಲಿಯವರೆಗೆ ಇದನ್ನು ಸಾರ್ವಜನಿಕಗೊಳಿಸಿರಲಿಲ್ಲ. ಆದರೆ ಕಳೆದ ಕೆಲವು ದಿನಗಳಿಂದ ಇದು ಮಾಧ್ಯಮಗಳಲ್ಲಿ ಹೈಲೈಟ್ ಆಗುತ್ತಿದೆ. ನಮ್ಮ ಮಗು ಸಾಮಾನ್ಯ ಮತ್ತು ಸುರಕ್ಷಿತ ವಾತಾವರಣದಲ್ಲಿ ಬೆಳೆಯಬೇಕೆಂದು ನಾನು ಬಯಸುತ್ತೇನೆ. ಆದ್ದರಿಂದ, ನಮ್ಮ ಮಗುವಿನ ವೈಯಕ್ತಿಕ ಜೀವನವನ್ನು ಗೌರವಿಸಿ ಮತ್ತು ಅನಗತ್ಯ ಹಸ್ತಕ್ಷೇಪವನ್ನು ತಪ್ಪಿಸುವಂತೆ ನಾನು ಮಾಧ್ಯಮವನ್ನು ವಿನಂತಿಸುತ್ತೇನೆ ಎಂದು ಆಶ್ಲೇ ಸೇಂಟ್ ಕ್ಲೇರ್ ಬರೆದುಕೊಂಡಿದ್ದಾರೆ.
ಆಶ್ಲೇ ಸೇಂಟ್. ಕ್ಲೇರ್ ಯಾರು?
ಆಶ್ಲೇ ಸೇಂಟ್ ಕ್ಲೇರ್ ಪ್ರಸಿದ್ಧ ಲೇಖಕಿಯಾಗಿದ್ದಾರೆ. ಅವರು ತಮ್ಮ 'ಎಲಿಫೆಂಟ್ಸ್ ಆರ್ ನಾಟ್ ಬರ್ಡ್ಸ್' ಪುಸ್ತಕದಿಂದ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಈ ಪುಸ್ತಕವನ್ನು ಬ್ರೇವ್ ಬುಕ್ಸ್ ಪ್ರಕಟಿಸಿದೆ. ಜೂನ್ 2021 ರಲ್ಲಿ ನ್ಯೂಯಾರ್ಕ್ ಪೋಸ್ಟ್‌ಗೆ ನೀಡಿದ ಹಿಂದಿನ ಸಂದರ್ಶನದಲ್ಲಿ, ಆಶ್ಲೇ ಸೇಂಟ್ ಕ್ಲೇರ್, 'ಈ ಪುಸ್ತಕವು ಟ್ರಾನ್ಸ್‌ಜೆಂಡರ್ ಸ್ವೀಕಾರ ಮತ್ತು ಟ್ರಾನ್ಸ್ ಐಡೆಂಟಿಟಿಗಳನ್ನು ಅಳವಡಿಸಿಕೊಳ್ಳುವ ಯುವಜನರ ಸಂಖ್ಯೆ ಹೆಚ್ಚುತ್ತಿರುವುದನ್ನು ಸ್ಪಷ್ಟವಾಗಿ ವಿರೋಧಿಸುತ್ತದೆ' ಎಂದು ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ