ಸ್ಟಾರ್ ಹೊಟೆಲ್‌ನಲ್ಲಿ ರಾಜೀನಾಮೆ ಪಾರ್ಟಿ ವಿಡಿಯೋ, ಕಾಕ್ರೋಚ್ ಫಂಡಿಂಗ್ ಪ್ರಶ್ನಿಸಿದ ವಕೀಲ ಜೇಠ್ಮಲಾನಿ

Published : Jul 27, 2026, 01:33 PM IST
Mahesh Jethmalani Questions CJP Funding

ಸಾರಾಂಶ

ಸಿಜೆಪಿ ಪ್ರತಿಭಟನೆ, ಇಡೀ ಹೋರಾಟ, ಬಳಿಕ ಫೈವ್ ಸ್ಟಾರ್ ಹೊಟೆಲ್‌ನಲ್ಲಿ ಪಾರ್ಟಿ. ಇದಕ್ಕೆಲ್ಲಾ ಹಣದ ಮೂಲ ಎಲ್ಲಿಂದ? ಖ್ಯಾತ ವಕೀಲ ಮಹೇಶ್ ಜೇಠಲ್ಮಾನಿ ಪ್ರಶ್ನಿಸಿದ್ದಾರೆ. ವಿಡಿಯೋ ಪೋಸ್ಟ್ ಮಾಡಿರುವ ವಕೀರಲು ಹಲವು ಪ್ರಶ್ನೆ ಎತ್ತಿದ್ದಾರೆ.

ನವದೆಹಲಿ (ಜು.27) ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ದ ವಿದ್ಯಾರ್ಥಿಗಳ ಧ್ವನಿಯಾಗಿ ಕಾಣಿಸಿಕೊಂಡ ಕಾಕ್ರೋಜ್ ಜನತಾ ಪಾರ್ಟಿ ಫಂಡಿಂಗ್ ಕುರಿತು ಖ್ಯಾತ ವಕೀಲ ಮಹೇಶ್ ಜೇಠ್ಮಲಾನಿ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬಳಿಕ ಕಾಕ್ರೋಚ್ ಜನತಾ ಪಾರ್ಟಿ ಫೈವ್ ಸ್ಟಾರ್ ಹೊಟೆಲ್‌ನಲ್ಲಿ ಪಾರ್ಟಿ ಮಾಡಿ ಕುಣಿದು ಕುಪ್ಪಳಿಸಿದೆ ಎಂದು ಮಹೇಶ್ ಜೇಠ್ಮಲಾನಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಕೇವಲ ಈ ಫೈವ್ ಸ್ಟಾರ್ ಪಾರ್ಟಿ ಮಾತ್ರವಲ್ಲ, ಇಷ್ಟು ದೊಡ್ಡ ಹೋರಾಟ, ಪ್ರಮುಖರಿಗೆ ಉಳಿದುಕೊಳ್ಳಲು ಹೊಟೆಲ್ ರೂಂ ಸೇರಿದಂತೆ ಇಡೀ ಪ್ರತಿಭಟನೆಗೆ ಯಾರು ಹಣ ಕೊಟ್ಟಿದ್ದಾರೆ ಎಂದು ಜೇಠ್ಮಲಾನಿ ಪ್ರಶ್ನಿಸಿದ್ದಾರೆ.

ಫೈವ್ ಸ್ಟಾರ್ ಪಾರ್ಟಿ

ಜೇಠ್ಮಲಾನಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಸಿಜೆಪಿ ವಕ್ತಾರ ಸೌರವ್ ದಾಸ್, ಆಶುತೋಷ್ ರಂಕಾ ಸೇರಿದಂತೆ ಹಲವರು ಫೈವ್ ಬಾಲಿವುಡ್ ಹಾಡಿಗೆ ಕುಣಿದು ಕುಪ್ಪಳಿಸುತ್ತಿರುವ ದೃಶ್ಯವಿದೆ. ಫೈವ್ ಸ್ಟಾರ್ ಹೊಟೆಲ್‌ನಲ್ಲಿ ಅದ್ಧೂರಿ ಪಾರ್ಟಿ ಆಯೋಜಿಸಲು ಹಣ ಎಲ್ಲಿಂದ ಬಂತು? ಎಲ್ಲರು ತಮ್ಮ ತಮ್ಮ ಕೈಯಿಂದ ಹಾಕಿ ಪಾರ್ಟಿ ಮಾಡಿದ್ದಾರೋ, ಇಲ್ಲಾ ಬೇರೆ ಮೂಲಗಳಿಂದ ಹಣ ಪಡೆದಿದ್ದಾರೋ ಎಂದು ಜೇಠ್ಮಲಾನಿ ಪ್ರಶ್ನಿಸಿದ್ದಾರೆ.

ಹಣದ ಮೂಲ ಯಾವುದು

ದೆಹಲಿಯ ಜಂತರ್ ಮಂತರ್‌ನಿಂದ ಹಿಡಿದು ಇಡೀ ಪ್ರತಿಭಟನೆ ಹಾಗೂ ಇದೀಗ ಅದ್ಧೂರಿ ಪಾರ್ಟಿಗೆ ಹಣ ಎಲ್ಲಿಂದ. ಸಿಜೆಪಿ ಪ್ರತಿಭಟನೆ, ಹೋರಾಟಗಾರರು, ಪ್ರಮುಖರಿಗೆ ವಾಹನ ವ್ಯವಸ್ಥೆ, ಸಮಯಕ್ಕೆ ಸರಿಯಾಗಿ ಆಹಾರ, ತಂಗಲು ಹೊಟೆಲ್ ರೂಂ ಸೇರಿದಂತೆ ಇಡೀ ಹೋರಾಟಕ್ಕೆ ಹಣದ ಮೂಲ ಯಾವುದು ಎಂದು ಮಹೇಶ್ ಜೇಠ್ಮಲಾನಿ ಪ್ರಶ್ನಿಸಿದ್ದಾರೆ.ದೆಹಲಿ ಬೆಂದು ಹೋಗುವಂತೆ ಮಾಡಿದ ಹೋರಾಟಕ್ಕೆ ಹಣದ ಮೂಲ ಯಾವುದು ಎಂದು ಪ್ರಶ್ನಿಸಿದ್ದಾರೆ.

ಪಾರ್ಟಿ ವಿಡಿಯೋ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ. ಈ ವಿಡಿಯೋಗ ಪರ ವಿರೋಧ ಕಮೆಂಟ್‌ಗಳು ವ್ಯಕ್ತವಾಗಿದೆ. ತಮ್ಮ ಹೋರಾಟಕ್ಕೆ ಸಿಕ್ಕ ಗೆಲುವನ್ನು ಸಂಭ್ರಮಿಸಿದ್ದಾರೆ. ಇದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ವಿದ್ಯಾರ್ಥಿಗಳು, ಸಿಜೆಪಿ ಸದಸ್ಯರು ಹಗಲಿರುಳು ಹೋರಾಟ ಮಾಡಿ ಕೊನೆಗೆ ಗೆಲುವು ಸಿಕ್ಕಾಗ ಮೌನವಾಗಿರುಬೇಕು ಎಂದರೆ ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಗೆಲುವು ಸಂಭ್ರಮಿಸಬೇಡಿ ಎಂದು ಯಾರು ಹೇಳಿಲ್ಲ, ಆದರೆ ಹಣ ಮೂಲ ಎಲ್ಲಿಂದ ಅನ್ನೋ ಪ್ರಶ್ನೆ ಎಂಬ ಕಮೆಂಟ್‌ಗಳು ವ್ಯಕ್ತವಾಗಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜೀವಾವಧಿ ಶಿಕ್ಷೆ ಪ್ರಸ್ತಾಪ, 10 ಕೋಟಿ ದಂಡ! Anti-Paper Leak ಮಸೂದೆಯಲ್ಲಿ 6 ಪ್ರಮುಖ ಬದಲಾವಣೆ!
ಬೆಂಗಳೂರಿಗರಿಗೆ ಭರ್ಜರಿ ಸುದ್ದಿ: ಉದಯಪುರ ಬಳಿಕ ಪಿಂಕ್ ಸಿಟಿ ಜೈಪುರಕ್ಕೂ ನೇರ ವಿಮಾನ, ಟಿಕೆಟ್ ಬುಕ್ಕಿಂಗ್ ಆರಂಭ