‘ಮೀಸಲು ಎಂಬುದು ಮೂಲಭೂತ ಹಕ್ಕು ಅಲ್ಲ’ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ತಮಿಳುನಾಡಿನ ವೈದ್ಯ ಕಾಲೇಜುಗಳಲ್ಲಿ ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಮೀಸಲು ನೀಡಿಲ್ಲ. ಇದರಿಂದ ತಮ್ಮ ಮೂಲಭೂತ ಹಕ್ಕಿಗೆ ಚ್ಯುತಿ ಆಗಿದೆ ಎಂದು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾ ಎಲ್. ನಾಗೇಶ್ವರರಾವ್ ಅವರಿದ್ದ ಪೀಠ, ‘ಮೀಸಲು ಹಕ್ಕು ಎನ್ನುವುದು ಮೂಲಭೂತ ಹಕ್ಕು ಅಲ್ಲ. ಇದು ಇಂದಿನ ಕಾನೂನು’ ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿತು.
ನವದೆಹಲಿ (ಜೂ. 12): ‘ಮೀಸಲು ಎಂಬುದು ಮೂಲಭೂತ ಹಕ್ಕು ಅಲ್ಲ’ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ತಮಿಳುನಾಡಿನ ವೈದ್ಯ ಕಾಲೇಜುಗಳಲ್ಲಿ ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಮೀಸಲು ನೀಡಿಲ್ಲ. ಇದರಿಂದ ತಮ್ಮ ಮೂಲಭೂತ ಹಕ್ಕಿಗೆ ಚ್ಯುತಿ ಆಗಿದೆ ಎಂದು ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ಈ ಕುರಿತು ವಿಚಾರಣೆ ನಡೆಸಿದ ನ್ಯಾ ಎಲ್. ನಾಗೇಶ್ವರರಾವ್ ಅವರಿದ್ದ ಪೀಠ, ‘ಮೀಸಲು ಹಕ್ಕು ಎನ್ನುವುದು ಮೂಲಭೂತ ಹಕ್ಕು ಅಲ್ಲ. ಇದು ಇಂದಿನ ಕಾನೂನು’ ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿತು. ಅಲ್ಲದೆ, ಈ ಅರ್ಜಿಗಳನ್ನು ಮದ್ರಾಸ್ ಹೈಕೋರ್ಟ್‌ನಲ್ಲಿ ಸಲ್ಲಿಸಿ ಎಂದು ಸೂಚನೆ ನೀಡಿತು.
ವಲಸಿಗ ಕಾರ್ಮಿಕರ ನೆರವಿಗೆ ಧಾವಿಸಲು ರಾಜ್ಯಗಳಿಗೆ ಗಡುವು!
ಫೆಬ್ರವರಿಯಲ್ಲಿ ಉತ್ತರಾಖಂಡದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ‘ಸರ್ಕಾರಿ ಉದ್ಯೋಗದಲ್ಲಿ ಮೀಸಲು ಎಂಬುದು ಮೂಲಭೂತ ಹಕ್ಕು ಅಲ್ಲ. ಎಸ್‌ಸಿ-ಎಸ್‌ಟಿ ವರ್ಗದವರಿಗೆ ಮೀಸಲು ನೀಡಿ ಎಂದು ಕೋರ್ಟ್‌ಗಳಿಗೆ ಆದೇಶ ನೀಡಲು ಅಧಿಕಾರವಿಲ್ಲ’ ಎಂದಿತ್ತು. ಈ ತೀರ್ಪಿನ ಬಗ್ಗೆ ದೇಶದಲ್ಲಿ ವ್ಯಾಪಕ ಚರ್ಚೆ ನಡೆದಿದ್ದವು. ಇದರ ಬೆನ್ನಲ್ಲೇ ಈಗ ಶಿಕ್ಷಣದಲ್ಲಿ ಮೀಸಲಿಗೆ ಸಂಬಂಧಿಸಿದ ಕೋರ್ಟ್‌ನ ಈ ಅಭಿಪ್ರಾಯ ಹೊರಬಿದ್ದಿದೆ.