Gen Z Future: 'ಹಿಜಾಬ್ ತೆಗೆಯಬೇಕಾ? ಗಡ್ಡಕ್ಕೆ ಕತ್ತರಿ ಹಾಕಬೇಕಾ? ನಿಮ್ಮಿಷ್ಟ', ಮುಸ್ಲಿಂ ಯುವ ಜನತೆಗೆ ಓವೈಸಿ ಕರೆ

Published : Oct 08, 2026, 04:36 PM IST
Akbaruddin Owaisi

ಸಾರಾಂಶ

ಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ ಯುವಜನತೆಗೆ ಭಯವಿಲ್ಲದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಂತೆ ಕರೆ ನೀಡಿದ್ದಾರೆ. ಹಿಜಾಬ್ ಧರಿಸುವುದು ಅಥವಾ ಗಡ್ಡ ಬಿಡುವುದು ಅವರವರ ವೈಯಕ್ತಿಕ ಇಷ್ಟ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮಹಿಳೆಯರು ಶಿಕ್ಷಣ ಪಡೆದು ಮುನ್ನುಗ್ಗಬೇಕು ಮತ್ತು ಯಾರಿಗೂ ಹೆದರುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಇಂದಿನ ಯುವ ಜನತೆ, ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ಅಭಿಪ್ರಾಯಗಳನ್ನು ಧೈರ್ಯವಾಗಿ ವ್ಯಕ್ತಪಡಿಸಿಬೇಕು ಎಂದು ಕರೆ ನೀಡಿದ್ದಾರೆ. ಹಿಜಾಬ್ ತೆಗೆಯಬೇಕಾ? ಗಡ್ಡ ಕತ್ತರಿಸಬೇಕಾ? ಬೇಡ್ವಾ? ಎಂಬುವುದು ನಿಮ್ಮ ಇಷ್ಟ ಎಂದು ಮುಸ್ಲಿಂ ಸಮುದಾಯದ ಯುವಜನತೆಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಶಿಕ್ಷಣದೊಂದಿಗೆ ನಿಮ್ಮ ಹಕ್ಕುಗಳು, ವೈಯುಕ್ತಿಕ ನಿರ್ಧಾರಗಳಲ್ಲಿ ಯಾರು ಹಿಂದೆಜ್ಜೆ ಹಾಕಬೇಡಿ ಎಂದು ಸೂಚನೆ ನೀಡಿದ್ದಾರೆ. ಹಿಜಾಬ್ ಧರಿಸುವುದು, ಬಿಡುವುದು ಸಂಪೂರ್ಣವಾಗಿ ಮಹಿಳೆಯರ ಇಷ್ಟಕ್ಕೆ ಸಂಬಂಧಿಸಿದೆ. ಮಹಿಳೆಯರು ಹಿಜಾಬ್ ಧರಿಸಬೇಕಾ? ಬೇಡ್ವಾ? ಯುವಕರು ಸೇವ್ ಮಾಡಿಕೊಳ್ಳಬೇಕಾ? ಬೇಡ್ವಾ ಎಂದು ಯಾರು ಹೇಳುವಂತೆ ಇಲ್ಲ ಎಂದು ತಿಳಿಸಿದ್ದಾರೆ.

ಧೈರ್ಯವಾಗಿ ಮಾತನಾಡಿ, ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ!

ವಿದ್ಯಾರ್ಥಿಗಳೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಕ್ಬರುದ್ದೀನ್ ಓವೈಸಿ, ತಮ್ಮ ಶಿಕ್ಷಣದ ಬಗ್ಗೆ ತಿಳಿಸಿದರು. ನಾನು ಕೇವಲ 12ನೇ ತರಗತಿ ವರೆಗೂ ಮಾತ್ರ ಶಿಕ್ಷಣ ಪಡೆದುಕೊಂಡಿದ್ದೇನೆ. ಆದರೆ ನಾನು ವಿಧಾನಸಭೆಯಲ್ಲಿ ಭಯವಿಲ್ಲದೆ, ಸ್ಪಷ್ಟವಾಗಿ ನನ್ನ ಅಭಿಪ್ರಾಯಗಳನ್ನು ಹೇಳುತ್ತೇನೆ. ನಾನು ಹೇಳುವ ವಿಚಾರಗಳು ಮುಖ್ಯಮಂತ್ರಿಗಳು ಕೂಡ ಉತ್ತರ ನೀಡಲೇಬೇಕಾದ ಸ್ಥಿತಿ ಇದೆ. ಆದ್ದರಿಂದ ಯುವಕರು ಯಾವುದ ಭಯವಿಲ್ಲದೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು ಎಂದು ಹೇಳಿದ್ದಾರೆ.

ಜೆನ್‌ ಝೀ ಯುವಜನತೆಯ ಕುರಿತು ಮಾತನಾಡಿದ ಓವೈಸಿ, ಇಂದಿನ ಜಗತ್ತು ಸ್ಪಷ್ಟವಾಗಿ ಹಾಗು ಧೈರ್ಯವಾಗಿ ಮಾತನಾಡುವ ಯುವಕ ಕುರಿತು ಚರ್ಚೆ ನಡೆಸುತ್ತಿದೆ. ನೀವು ನಿಜ ಎಂದು ನಂಬಿರುವ ವಿಚಾರಗಳನ್ನು ತಿಳಿಸಲು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಇಂತಹ ಕೆಲಸಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ!

ಶಾಸಕರು, ಮಂತ್ರಿಗಳು, ಪ್ರಧಾನ ಮಂತ್ರಿಗಳನ್ನು ಖುಷಿಪಡಿಸಲು ಕೆಲಸ ಮಾಡಬಾರದು, ಕೆಲಸ ಮಾಡಬೇಕು ಎಂದರೆ ದೇವರು ಸಂತೋಷ ಪಡುವ ಕೆಲಸಗಳನ್ನು ಮಾಡಬೇಕು. ನಮ್ಮ ಎದುರಿಗೆ ಇರುವ ವ್ಯಕ್ತಿ ನಮ್ಮ ಏನು ಅಂದುಕೊಳ್ಳುತ್ತಾರೆ ಎಂಬ ವಿಚಾರವನ್ನು ದೂರ ಮಾಡಿಬೇಕು. ತನ್ನ ಗೌರವಕ್ಕೆ ಧಕ್ಕೆ ತರುವ, ನಿಮ್ಮನ್ನು ಅವಮಾನಿಸಲು ಕೆಲವರು ಮುಂದಾಗುತ್ತಾರೆ. ಆದರೆ ಹಿಜಾಬ್ ಹಾಕಿಲ್ಲ ಎಂದು ಯಾರನ್ನು ನೋಡಿ ಹೆದರುವ ಅಗತ್ಯವಿಲ್ಲ. ಇದು ಮಹಿಳೆಯ ಆಯ್ಕೆ ಎಂದು ಅವರು ಹೇಳಿದ್ದಾರೆ.

ಮಹಿಳೆಯರು ಶಿಕ್ಷಣ ಪಡೆದು ಮುನ್ನುಗ್ಗಬೇಕು, ಇದಕ್ಕಾಗಿ ಓರ್ವ ತಂದೆಯಾಗಿ, ಸಹೋದರನಾಗಿ, ಮಗನಾಗಿ ಮಹಿಳೆಯರ ಹಕ್ಕುಗಳ ಪರ ನಿಲ್ಲುತ್ತೇನೆ ಎಂದು ಹೇಳಿದ್ದಾರೆ. ನಾನು ಈ ರೀತಿ ಹೇಳಿದರೆ ಕೆಲವು ನನ್ನನ್ನು ಅವಮಾನಿಸಲು ಮುಂದಾಗುತ್ತಾರೆ. ಆದರೆ ನಾನು ಇಂತಹ ಕೆಲಸಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ನನ್ನ ಗೌರವವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುವುದು ಗೊತ್ತಿದೆ. ಯಾರ ಬಗ್ಗೆಯೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ, ಇದಕ್ಕಾಗಿ ನಾನು ಅಜ್ಞಾತವಾಗಿ ಜೀವಿಸಲು ಸಿದ್ಧ. ಕಾಡಿಗೆ ಹೋಗಿ ಸೊಪ್ಪು, ಸೊದೆ ತಿನ್ನುವ ಸ್ಥಿತಿ ಬಂದರೂ ಹಿಂಜ್ಜೆ ಹಾಕುವುದಿಲ್ಲ ಎಂದು ಹೇಳಿದ್ದು, ಈ ಹೇಳಿಕೆಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

SIR ಅಕ್ರಮ ಆರೋಪ ನಡುವೆ ಬಿಗ್ ಟ್ವಿಸ್ಟ್, CEC ನಡೆ ಕುರಿತು 42 ನಿವೃತ್ತ ಜಡ್ಜಸ್ ಬಹಿರಂಗ ಪತ್ರ
1996ರಲ್ಲಿ ವಿಧವೆಯಾದ ವೃದ್ಧೆಗೆ ಹೈಕೋರ್ಟ್ ಛೀಮಾರಿ ಹಾಕಿದೆ! ಅಸಲಿಗೆ ಆಗಿದ್ದೇನು ಗೊತ್ತಾ?