
ನವದೆಹಲಿ(ಜು.01): ಟ್ವೀಟರ್ ವೇದಿಕೆಯಲ್ಲಿರುವ ಎಲ್ಲಾ ಅಶ್ಲೀಲ ಮತ್ತು ಅಸಭ್ಯ ವಿಚಾರಗಳನ್ನು ಒಳಗೊಂಡಿರುವ ವಿಷಯಗಳನ್ನು ಮುಂದಿನ ಒಂದು ವಾರದಲ್ಲಿ ತೆಗೆದು ಹಾಕುವಂತೆ ಟ್ವೀಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ ನೀಡಿದೆ.
ಲ್ಲದೆ ಈ ಕುರಿತಾಗಿ ಟ್ವೀಟರ್ ಕೈಗೊಂಡಿರುವ ಕ್ರಮದ ಬಗ್ಗೆ 10 ದಿನಗಳ ಒಳಗಾಗಿ ಮಾಹಿತಿ ಸಲ್ಲಿಸುವಂತೆಯೂ ಸೂಚಿಸಿದೆ. ಜೊತೆಗೆ ಈ ಸಂಬಂಧ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸ್ ಆಯುಕ್ತರಿಗೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಪತ್ರ ಮುಖೇನ ಕೋರಿದ್ದಾರೆ.
ಮತ್ತೊಂದೆಡೆ ಟ್ವೀಟರ್ ವೇದಿಕೆಯಲ್ಲಿ ಮಕ್ಕಳ ಅಶ್ಲೀಲ ಅಂಶಗಳನ್ನು ಪ್ರಸಾರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ವಿವರ ನೀಡುವಂತೆ ಟ್ವೀಟರ್ ಇಂಡಿಯಾಗೆ ದೆಹಲಿ ಪೊಲೀಸರು ಸಹ ಪ್ರತ್ಯೇಕ ನೋಟಿಸ್ ನೀಡಿದ್ದಾರೆ. ಈ ಕುರತು ಮಂಗಳವಾರವೇ ಎಫ್‌ಐಆರ್ ದಾಖಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ