ಪ್ರಧಾನಿ ಮೋದಿಗೆ 2020 ಟಾರ್ಗೆಟ್ ನೀಡಿದ್ದ ಡಾ. ಕಲಾಂ, ಸಂಬಂಧಿ ಬಿಚ್ಚಿಟ್ಟ ರೋಚಕ ಮಾಹಿತಿ!

By Suvarna NewsFirst Published Oct 15, 2022, 6:08 PM IST
Highlights

ಇಂದು ಮಿಸೈಲ್ ಮ್ಯಾನ್, ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಜನ್ಮದಿನ. ಕಲಾಂ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವಿನ ಸಂಬಂಧ ಹೇಗಿತ್ತು? 2009ರಲ್ಲಿ ಮೋದಿ ದಿಢೀರ್ ರಾಮೇಶ್ವರಂಗೆ ಬೇಟಿ ನೀಡಿ ಕಲಾಂ ಭೇಟಿ ಮಾಡಿದ್ದು ಯಾಕೆ? ಪ್ರಧಾನಿಯಾದ ಬಳಿಕ ಮೋದಿ ಕಲಾಂಗೆ ಕರೆ ಮಾಡಿದ್ದು ಯಾಕೆ? ಈ ಕುರಿತು ಹಲವು ರಹಸ್ಯ ಮಾಹಿತಿಗಳನ್ನು ಕಲಾಂ ಸಂಬಂಧಿ ಹೇಳಿದ್ದಾರೆ. 
 

ನವದೆಹಲಿ(ಅ.15): ಅಕ್ಟೋಬರ್ 15 ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಜನ್ಮದಿನ. ಭಾರತದ ಮಿಸೈಲ್ ಮ್ಯಾನ್ ಎಂದೇ ಗುರುತಿಸಿಕೊಂಡಿರುವ ಕಲಾಂ ಇಡೀ ಭಾರತ ಮೆಚ್ಚಿದ, ವಿಶ್ವವೇ ಹೊಗಳಿದ ರಾಷ್ಟ್ರಪತಿ. ಭಾರತದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಡಾ.ಎಪಿಜೆ ಅಬ್ದುಲ್ ಕಲಾಂ, ಕ್ಷಿಪಣಿಗಳ ಅಭಿವೃದ್ಧಿ ಹಾಗೂ ಉಡಾವಣೆ ತಂತ್ರಜ್ಞಾನದ ದಿಗ್ಗಜನಾಗಿದ್ದಾರೆ. ಇಂದು ದೇಶ ವಿದೇಶದಲ್ಲಿ ಕಲಾಂ ಸ್ಮರಣೆ ಮಾಡಲಾಗುತ್ತಿದೆ. ಕಲಾಂ ಜಯಂತಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಟ್ವೀಟ್ ಮೂಲಕ ಸ್ಮರಣೆ ಮಾಡಿದ್ದಾರೆ. ಇದರ ನಡುವೆ ಎಪಿಜೆ ಅಬ್ದುಲ್ ಕಲಾಂ ಸಂಬಂಧಿ ಎಪಿಜೆ ಎಂಜೆ ಶೇಕ್ ಸಲೀಮ್ ರಹಸ್ಯ ಹಾಗೂ ರೋಚಕ ಮಾಹಿತಿಗಳನ್ನು ಬಿಚ್ಟಿಟ್ಟಿದ್ದಾರೆ. ನರೇಂದ್ರ ಮೋದಿ ಹಾಗೂ ಕಲಾಂ ನಡುವಿನ ಸಂಬಂಧಗಳನ್ನು ವಿವರಿಸಿದ್ದಾರೆ. ಈ ವಿಡಿಯೋ ಇದೀಗ ಭಾರಿ ಸಂಚಲನ ಮೂಡಿಸಿದೆ. ಮೋದಿ ಪ್ರಧಾನಿಯಾದ ಬೆನ್ನಲ್ಲೇ ಕಲಾಂಗೆ ಫೋನ್ ಮಾಡಿ ಆಶೀರ್ವಾದ ಕೇಳಿದ್ದರು. ಈ ವೇಳೆ 2020ರ ವೇಳೆಗೆ ಅಭಿವೃದ್ಧಿ ಭಾರತ ನಿರ್ಮಿಸಲು ಕಲಾಂ ಹಲವು ಸಲಹೆಗಳನ್ನು ನೀಡಿದ್ದರು ಎಂದು ಶೇಕ್ ಸಲೀಮ್ ಹಳೆ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.

2009ರಲ್ಲಿ ಒಂದು ದಿನ ಅಬ್ದುಲ್ ಕಲಾಂ ನನಗೆ ಫೋನ್ ಮಾಡಿ, ಇವತ್ತು ನನ್ನ ಅತ್ಯುತ್ತಮ ಹಾಗೂ ಆತ್ಮೀಯ ಗೆಳೆಯ ಗುಜರಾತ್‌ನಿಂದ ಬರುತ್ತಿದ್ದಾರೆ ಎಂದು ತಿಳಿಸಿದರು. ಇದಕ್ಕಾಗಿ ಕೆಲ ತಯಾರಿ ಮಾಡಲು ಸೂಚಿಸಿದರು. ಗುಜರಾತ್‌ನಿಂದ ಅಬ್ದುಲ್ ಕಲಾಂ ಗೆಳೆಯ ಯಾರಿರಬಹುದು. ಅವರಿಗೆ ಯಾವ ರೀತಿ ತಯಾರಿ ಮಾಡಬೇಕು ಈ ರೀತಿಯ ಹಲವು ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಮೂಡಿತ್ತು. ಒಂದೇ ಸಮನೆ ಹಲವು ವಾಹನಗಳು ಬಂದವು. ಬೆಂಗಾವಲು ವಾಹನ, ಪೊಲೀಸ್, ಭದ್ರತಾ ಪಡೆ ಸೇರಿ ಹಲವು ವಾಹನಗಳು ಆಗಮಿಸಿತು. ಅದು ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ. ಎಲ್ಲಾ ವಾಹನಗಳನ್ನು ಮನೆಗೆಯ ಹೊರಗಿನ ಗೇಟ್ ಬಳಿ ನಿಲ್ಲಲು ಮೋದಿ ಸೂಚನೆ ನೀಡಿದರು. ಬಳಿಕ ಮೋದಿ ನಡೆದುಕೊಂಡು ಮನೆಗೆ ಆಗಮಿಸಿದರು. ಇದು ಸ್ಮರಣೀಯ ಕ್ಷಣವಾಗಿತ್ತು. ಕಾರಣ ಭಾರತದ ಅತ್ಯುತ್ತಮ ಮುಖ್ಯಮಂತ್ರಿ, ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ಮೋದಿ, ಕಲಾಂ ಭೇಟಿಯಾಗಲು ಮನೆಗೆ ಆಗಮಿಸಿದ್ದಾರೆ  ಅನ್ನೋದು ನಮ್ಮೆಲ್ಲರಿಗೂ ಸಂತಸ ಕ್ಷಣವಾಗಿತ್ತು ಎಂದು ಶೇಕ್ ಸಲೀಮ್ ಹೇಳಿದ್ದಾರೆ.

APJ Abdul Kalam Death Anniversary: ‘ಮಿಸೈಲ್‌ ಮ್ಯಾನ್‌’ ರವರ 10 ಸ್ಫೂರ್ತಿದಾಯಕ ಉಲ್ಲೇಖಗಳು ಇಲ್ಲಿವೆ..

ಕಲಾಂ ಯಾವಗಲೂ ಪ್ರಧಾನಿ ಮೋದಿಗೆ ಕೃತಜ್ಞರಾಗಿದ್ದರು. 2014ರಲ್ಲಿ ನರೇಂದ್ರ ಮೋದಿ ಭಾರತದ ಪ್ರಧಾನಿ ಮೋದಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಕಲಾಂಗೆ ಫೋನ್ ಮಾಡಿ ಆಶೀರ್ವಾದ ಪಡೆದಿದ್ದರು. ಹಲವು ಹೊತ್ತು ಫೋನ್ ಮೂಲಕ ಮಾತನಾಡಿದ್ದರು. ಈ ವೇಳೆ ಪ್ರಧಾನಿಯಾಗಿ ಭಾರತದಲ್ಲಿ ಮಾಡಲೇಬೇಕಾದ ಅಭಿವೃದ್ಧಿ ಕೆಲಸಗಳ ಕುರಿತು ಕಲಾಂ ವಿವರಿಸಿದ್ದರು. ಈ ವೇಳೆ 2020ರ ಅಭಿವೃದ್ಧಿ ಭಾರತ ಗುರಿ ಇಟ್ಟು ಕೆಲಸ ಮಾಡಲು ಸೂಚಿಸಿದ್ದರು.  ಈ ವೇಳೆ ಮೋದಿ ಕೂಡ ಭರವಸೆ ನೀಡಿದ್ದರು. ಭಾರತದ ಬಗ್ಗೆ ಕಲಾಂ ಇಟ್ಟುಕೊಂಡಿದ್ದ ಕನಸು ನನಸು ಮಾಡುವುದಾಗಿ ಹೇಳಿದ್ದರು. ಅದರಂತೆ ಮೋದಿ ಭಾರತದಲ್ಲಿ ಹೊಸ ಅಭಿವೃದ್ಧಿಯ ಶಕೆ ಆರಂಭಿಸಿದ್ದಾರೆ ಎಂದು ಶೇಕ್ ಸಲೀಮ್ ಹೇಳಿದ್ದಾರೆ.

 

Remembering Missile Man of India former President Dr.APJ Abdul Kalam on his birth anniversary..

Watch as his grand nephew shares memories of Dr.Kalam’s endearing bond with Narendra Modi and PM’s efforts to honour his legacy in today’s special !https://t.co/9iulCar3rR pic.twitter.com/MTx4RadQdP

— Modi Story (@themodistory)

 

2015ರಲ್ಲಿ ಎಜೆಪಿ ಅಬ್ದುಲ್ ಕಲಾಂ ನಿಧನರಾದರು. ಹಠಾತ್ ನಿಧನ ನಮ್ಮನ್ನು ವಿಚಲಿತರನ್ನಾಗಿ ಮಾಡಿತ್ತು. ಕಾರಣ ಕಲಾಂ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಇಷ್ಟೇ ಅಲ್ಲ ಇಡೀ ಭಾರತವೇ ಅತ್ಯಂತ ಗೌರವದಿಂದ ಕಾಣವು ವ್ಯಕ್ತಿ. ಹೀಗಾಗಿ ಕುಟುಂಬಸ್ಥರು ವಿಚಲಿತರಾಗಿದ್ದೆವು. ಏನು ಮಾಡಬೇಕು ಅನ್ನೋದೇ ತೋಚದಾಯಿತು. ಇದೇ ವೇಳೆ ಪ್ರಧಾನಿ ಮೋದಿ ಕಾರ್ಯಾಲದಿಂದ ಕರೆ ಬಂದಿತ್ತು. ಎಲ್ಲಾ ಜವಾಬ್ದಾರಿಯನ್ನು ಪ್ರಧಾನಿ ಮೋದಿ ಕಾರ್ಯಾಲ ಮಾಡುವುದಾಗಿ ಹೇಳಿತು. ಈ ವೇಳೆ ಕಲಾಂ ಸಹೋದರ ಪ್ರಧಾನಿ ಬಳಿ ಮನವಿ ಮಾಡಿದರು. ಕಲಾಂ ರಾಮೇಶ್ವರದಲ್ಲಿ ಹುಟ್ಟಿ ಬೆಳೆದ ಊರು. ಹೀಗಾಗಿ ಕಲಾಂ ಪಾರ್ಥಿವ ಶರೀರವನ್ನು ರಾಮೇಶ್ವರಗೆ ತಂದು ಇಲ್ಲಿ ಅಂತ್ಯ ಸಂಸ್ಕಾರ ಮಾಡುವುದು ನಮ್ಮ ಬಯಕೆ ಎಂದರು. ಇದಕ್ಕೆ ತಕ್ಷಣ ಸ್ಪಂದಿಸಿದ ಮೋದಿ, ಎಲ್ಲಾ ವ್ಯವಸ್ಥೆ ಮಾಡಿದರು. 

ಕಲಾಂ - ಲಕ್ಷ್ಮಣ್ ನಡುವೆ ‘ವಿಶಿಷ್ಟ’ ಸಂಬಂಧ; ಅದು ಕಲ್ಪನೆಗೂ ಮೀರಿದ ಬಂಧ!

ಅಂತಿಮ ನಮನಕ್ಕಾಗಿ ಮೋದಿ ರಾಮೇಶ್ವರಕ್ಕೆ ಆಗಮಿಸಿದರು. ಬಳಿಕ ಕಲಾಂ ಕುಟುಂಬ ಸದಸ್ಯರ ಜೊತೆ ಕುಳಿತು ಸಂಪೂರ್ಣ ಕಾರ್ಯದಲ್ಲಿ ಭಾಗಿಯಾಗಿದ್ದರು. ಕುಟುಂಬಕ್ಕೆ ಧೈರ್ಯ ತುಂಬಿದರು. ಇದೇ ವೇಳೆ ಇನ್ನು 9 ತಿಂಗಳಲ್ಲಿ ರಾಮೇಶ್ವರದಲ್ಲಿ ಕಲಾಂ ಮೇಮೋರಿಯಲ್ ಸ್ಥಾಪಿಸುವುದಾಗಿ ಭರವಸೆ ನೀಡಿದರು. ಇದರಂತೆ ಮೋದಿ ಸಂಸತ್ತಿನಲ್ಲಿ ಈ ಕುರಿತು ಮಾತನಾಡಿದರು. ಇದರ ಜವಾಬ್ದಾರಿಯನ್ನು ಡಿಆರ್‌ಡಿಒಗೆ ನೀಡಲಾಗಿತ್ತು. ಪ್ರತಿ ತಿಂಗಳು ಪ್ರಧಾನಿ ಮೋದಿ ಖುದ್ದು ಕಲಾಂ ಮೇಮೋರಿಯಲ್ ನಿರ್ಮಾಣದ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಈ ವೇಳೆ ಕಲಾಂ ಸೋಹದರ ಸೇರಿದಂತೆ ಕುಟುಂಬ ಪ್ರಮುಖ ಸದಸ್ಯರ ಸಲಹೆಯನ್ನು ಪಡೆದುಕೊಂಡಿದ್ದರು. ಮೋದಿ ಹೇಳಿದಂತೆ 9 ತಿಂಗಳಲ್ಲಿ ಮೇಮೋರಿಯಲ್ ಸ್ಥಾಪಿಸಿದರು. ಬಳಿಕ ರಾಮೇಶ್ವರಕ್ಕೆ ಆಗಮಿಸಿ ಕಲಾಂ ಮೇಮೋರಿಯಲ್ ಉದ್ಘಾಟಿಸಿದರು ಎಂದು ಶೇಕ್ ಸಲೀಮ್ ಹೇಳಿದ್ದಾರೆ

click me!