
ನವದೆಹಲಿ: ಹಳೆಯ ಸಂಸತ್ ಭವನದಲ್ಲಿ ನಡೆದ ಕಟ್ಟಕಡೆಯ ಕಲಾಪದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸ್ಮರಿಸಿಕೊಂಡಿದ್ದಾರೆ.
5 ದಿನಗಳ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ ‘ಇದೇ ಸಂಸತ್ತಿನಲ್ಲಿ ವಸಾಹತುಶಾಹಿ ಆಡಳಿದಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಮಧ್ಯರಾತ್ರಿ ವೇಳೆ ನೆಹರುರವರು ಮಾಡಿದ ‘ಅದೃಷ್ಟದೊಂದಿಗೆ ಪ್ರಯತ್ನ’ದ ಭಾಷಣ ಎಲ್ಲರಿಗೂ ಪ್ರೇರಣೆಯಾಗಿದೆ’ ಜೊತೆಗೆ ‘ಸರ್ಕಾರಗಳು ಬರುತ್ತವೆ, ಹೋಗುತ್ತವೆ, ಸರ್ಕಾರಗಳು ರಚನೆಯಾಗುತ್ತವೆ, ಉರುಳುತ್ತವೆ, ಆದರೆ ರಾಷ್ಟ್ರ ಜೀವಂತವಾಗಿರುತ್ತದೆ’ ಎಂಬ ಅಟಲ್ ಬಿಹಾರಿ ವಾಜಪೇಯಿ ಅವರ ಮಾತುಗಳು ಇಂದಿಗೂ ಮಾರ್ಧನಿಸುತ್ತಿವೆ’ ಎಂದು ಹೇಳಿದರು.
ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ತಂದೆಯೂ ಭಾರತ ವಿರೋಧಿ
ಈ ಹಳೆಯ ಕಟ್ಟಡಕ್ಕೆ ಬೀಳ್ಕೊಡುಗೆ ನೀಡುವುದು ಒಂದು ಭಾವನಾತ್ಮಕ ಸನ್ನಿವೇಶವಾಗಿದೆ. ಈ ಕಟ್ಟಡ ನಮಗೆ ಅನೇಕ ಭಾವನೆಗಳು ಮತ್ತು ಸ್ಮೃತಿಗಳನ್ನು ನೀಡಿದೆ’ ಎಂದು ಹೇಳಿದ ಮೋದಿ ಸಂಸತ್ತಿನ 75 ವರ್ಷಗಳ ಪಯಣವನ್ನು ಸ್ಮರಿಸಿದರು. ಹಳೆಯ ಸಂಸತ್ ಕಟ್ಟಡದ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ ಮೋದಿ, ಸಂಸದರು ನೂತನ ಸಂಸತ್ ಭವನಕ್ಕೆ ಹೊಸ ಭರವಸೆ ಮತ್ತು ವಿಶ್ವಾಸದೊಂದಿಗೆ ಧಾವಿಸಲಿದ್ದಾರೆ ಎಂದು ಹೇಳಿದರು. ಸಂಸತ್ ಭವನದಲ್ಲಿ ನೆಹರು, ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಎಲ್ಲ ಪ್ರಧಾನಿಗಳ ಆಡಳಿತದ ಚಹರೆ ಮತ್ತು 75 ವರ್ಷಗಳು ಸಂಸತ್ತು ಸಾಗಿ ಬಂದ ಹಾದಿಯನ್ನು ಮೆಲುಕು ಹಾಕಿದರು.
ಕೆನಡಾದ ಮತ್ತೊಂದು ಅಧಿಕಪ್ರಸಂಗ, ಭಾರತದಲ್ಲಿನ ಕೆನಡಾ ಪ್ರಜೆಗಳಿಗೆ ಪ್ರಯಾಣ ಸಲಹೆ ಕಳಿಸಿದ ಸರ್ಕಾರ!
ತಮ್ಮ 52 ನಿಮಿಷಗಳ ಭಾಷಣದಲ್ಲಿ, ಹಳೆಯ ಸಂಸತ್ತು ಕಟ್ಟಡವು ತುರ್ತು ಪರಿಸ್ಥಿತಿ ಮತ್ತು ಕೆಲವು ಹಗರಣಗಳಿಗೆ ಸಾಕ್ಷಿಯಾಗಿದ್ದನ್ನು ಹೇಳಿದರು. ಹಿಂದಿನ ಪ್ರಧಾನಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ ಮತ್ತು ಪಿ.ವಿ.ನರಸಿಂಹ ರಾವ್ ಅವರನ್ನು ಬಣ್ಣಿಸಿದ ಪ್ರಧಾನಿ ಮೋದಿ, ಭಾರತದ ಪ್ರಜಾಪ್ರಭುತ್ವ ಸಾಗಿ ಬಂದ ಹಾದಿಯನ್ನು ನೆನಪಿಸಿಕೊಂಡರು. ಅಲ್ಲದೆ 1947ರಿಂದ ಇಲ್ಲಿಯ ವರೆಗೆ ಹಳೆಯ ಸಂಸತ್ ಕಟ್ಟಡದಲ್ಲಿ ಸೇವೆ ಸಲ್ಲಿಸಿದ ಸುಮಾರು 7,500 ಸಂಸದರಿಗೆ ಧನ್ಯವಾದ ಸಲ್ಲಿಸಿದರು. ತಮ್ಮ ಭಾಷಣದಲ್ಲಿ ಹಲವು ವಿಚಾರ ಪ್ರಸ್ತಾಪಿಸಿದ ಮೋದಿ, ಸ್ವಾತಂತ್ರ್ಯ ಹೋರಾಟಗಾರರು, ಸಂವಿಧಾನ ರಚನೆ, ಪ್ರಧಾನಿಗಳ ಕೊಡುಗೆ ಮೊದಲಾದವುಗಳ ಬಗ್ಗೆ ಮಾತನಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ