* ಅಣ್ಣಾಮಲೈ ಮತ್ತು ಪಕ್ಷದ ಮುಖಂಡರ ನಡುವೆ ತಿಕ್ಕಾಟ
* ಬಿಜೆಪಿ ನಾಯಕನ ಅಶ್ಲೀಲ ವೀಡಿಯೋ ಬಿಡುಗಡೆಗೆ ಸೂಚಿಸಿದ್ದ ಅಣ್ಣಾಮಲೈ?
ಚೆನ್ನೈ(ಆ.29): ತಮಿಳುನಾಡು ಬಿಜೆಪಿ ಮುಖ್ಯಸ್ಥನಾಗಿ ನೇಮಕಗೊಂಡ ತಿಂಗಳಲ್ಲೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಮತ್ತು ಪಕ್ಷದ ಮುಖಂಡರ ನಡುವೆ ತಿಕ್ಕಾಟ ಶುರುವಾಗಿದೆ.
ಹಿರಿಯ ಬಿಜೆಪಿ ನಾಯಕ ಕೆ.ಟಿ. ರಾಘವನ್ ಇದ್ದ ಅಶ್ಲೀಲ ವಿಡಿಯೋವೊಂದನ್ನು ಬಿಡುಗಡೆ ಮಾಡುವಂತೆ ಅಣ್ಣಾಮಲೈ ಅವರೇ ಸೂಚಿಸಿದ್ದರು ಎನ್ನಲಾದ ಆಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ಇದು ಬಿಜೆಪಿಗೆ ಮುಜುಗರ ಉಂಟು ಮಾಡಿದೆ.
‘ವಿಡಿಯೋ ಬಿಡುಗಡೆ ಮಾಡಿದರೆ ಕೆಲವೇ ಗಂಟೆಗಳಲ್ಲಿ ಅವರನ್ನು ನಾನು ಹೊರಹಾಕುತ್ತೇನೆ. ವಿಡಿಯೋ ಬಿಡುಗಡೆಯಾಗದಿದ್ದರೆ ಅದು ನನಗೆ ದೊಡ್ಡ ತಲೆನೋವಾಗಲಿದೆ.
ನಾನು ಈ ವಿಡಿಯೋವನ್ನು ಎಲ್ಲರಿಗೂ ತೋರಿಸುತ್ತೇನೆ’ ಎಂದು ಅಣ್ಣಾಮಲೈ ಮಾತಾನಾಡಿರುವ ಆಡಿಯೋ ತುಣುಕು ವೈರಲ್ ಆಗಿದೆ. ವಿಡಿಯೋ ಬಿಡುಗಡೆಯಾದ ನಂತರ ರಾಘವನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.