ಮೊದಲ ಕೆಲಸಕ್ಕೆ ಸೇರಿದ ಮೂರೇ ಗಂಟೆಯಲ್ಲಿ ರಾಜೀನಾಮೆ, ಅಚ್ಚರಿಗೊಳಿಸಿದ ಯುವಕನ ನಿರ್ಧಾರ

Published : Nov 17, 2025, 05:17 PM IST
Work from Home

ಸಾರಾಂಶ

ಮೊದಲ ಕೆಲಸಕ್ಕೆ ಸೇರಿದ ಮೂರೇ ಗಂಟೆಯಲ್ಲಿ ರಾಜೀನಾಮೆ, ಅಚ್ಚರಿಗೊಳಿಸಿದ ಯುವಕನ ನಿರ್ಧಾರ, ರೆಡ್ಡಿಟ್ ಪೋಸ್ಟ್‌ನಲ್ಲಿ ಕೆಲಸಕ್ಕ ರಿಸೈನ್ ಮಾಡಿದ ಕಾರಣವನ್ನು ಹೇಳಿದ್ದಾರೆ. ಹಲವರು ಯುವಕನ ನಿರ್ಧಾರ ಬೆಂಬಲಿಸಿದ್ದಾರೆ.

ನವದೆಹಲ (ನ.17) ಕಾಲೇಜು, ವೃತ್ತಿಪರ ಕೋರ್ಸ್ ಸೇರಿದಂತೆ ಶಿಕ್ಷಣ ಮುಗಿಸಿ ಮೊದಲ ಕೆಲಸಕ್ಕೆ ಸೇರುವ ಬಹುತೇಕರು ಎಕ್ಸ್‌ಪೀರಿಯೆನ್ಸ್ ಬೇಕು ಎಂದು ಕಷ್ಟವಾದರೂ, ಇಷ್ಟವಿಲ್ಲದಿದ್ದರೂ ತಾಳ್ಮೆಯಿಂದ ಕನಿಷ್ಠ ಒಂದು ವರ್ಷ ಮಾಡುತ್ತಾರೆ. ಆಗಷ್ಟೇ ಶಿಕ್ಷಣ ಮುಗಿಸಿ ಬರುವ ಹಲವರು ಅತೀ ಕಡಿಮೆ ವೇತನ, ಹೆಚ್ಚು ಕೆಲಸ, ಹೆಚ್ಚುವರಿ ಸಮಯ ದುಡಿಯುತ್ತಾರೆ. ಈ ಮೂಲಕ ಉತ್ತಮ ಕರಿಯರ್ ಎದುರುನೋಡುತ್ತಾರೆ. ಆದರೆ ಇಲ್ಲೊಬ್ಬ ಯುವಕ, ಆಗಷ್ಟೇ ಶಿಕ್ಷಣ ಮುಗಿಸಿ ಬಂದಿದ್ದಾನೆ. ಎಲ್ಲಾ ರೌಂಡ್ ಇಂಟರ್‌ವ್ಯೂವ್ ಮುಗಿಸಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ವಿಶೇಷ ಅಂದರೆ ಹೇಳಿದ ದಿನ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಆದರೆ ಆತ ಕೇವಲ ಮೂರೇ ಗಂಟೆ ಕೆಲಸ ಮಾಡಿದ್ದಾನೆ. ಬಳಿಕ ಈ ಕಂಪನಿಯಲ್ಲಿ ಇದ್ದರೆ ಕತೆ ಮುಗೀತು ಎಂದು ರಾಜೀನಾಮೆ ನೀಡಿ ಹೊರಬಂದಿದ್ದಾನೆ. ಇದೀಗ ಯುವಕನ ನಿರ್ಧಾರಕ್ಕೆ ಹಲವರು ಬೆಂಬಲ ಸೂಚಿಸಿದ್ದಾರೆ.

ವರ್ಕ್ ಫ್ರಮ್ ಹೋಮ್ ಇದ್ದರೂ ರಾಜೀನಾಮೆ

ರೆಡ್ಡಿಟ್ ಬಳಕೆದಾರ ಈ ಮಾಹಿತಿ ಹಂಚಿಕೊಂಡಿದ್ದಾರೆ. ಮೊದಲ ಕೆಲಸಕ್ಕೆ ಸೇರಿದ ಮೂರು ಗಂಟೆಯಲ್ಲಿ ರಾಜೀನಾಮೆ ಎಂದು ಈ ಯುವಕ ಬರೆದುಕೊಂಡಿದ್ದಾನೆ. ಸಂದರ್ಶನದಲ್ಲಿ ಕೆಲಸದ ಕುರಿತು ಹೇಳಿದ್ದರು. ಮನೆಯಿಂದಲೇ ಕೆಲಸ (ವರ್ಕ್ ಫ್ರಮ್ ಹೋಮ್) ಉತ್ತಮ ಕೆಲಸ, ಹೆಚ್ಚಿನ ಒತ್ತಡವಿಲ್ಲ. ಆದರೆ 9 ಗಂಟೆ ಕೆಲಸ, ವೇತನ ತಿಂಗಳಿಗೆ 12 ಸಾವಿರ ರೂಪಾಯಿ. ಸಂದರ್ಶನದ ವೇಳೆ ಕೆಲಸದ ರೂಪುರೇಶೆ ಹೇಳಿದ್ದರು. ಅವರು ಹೇಳಿದಾಗ, ಈ ಕೆಲಸ ನಾನು ನಿಭಾಯಿಸಬಲ್ಲೆ. ಸ್ವಲ್ಪ ಕಷ್ಟವಾದರೂ ಪರ್ವಾಗಿಲ್ಲ ಎಂದುಕೊಂಡು ಕೆಲಸ್ಕೆ ಸೇರಿಕೊಂಡೆ ಎಂದು ರೆಡ್ಡಿಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಮೂರೇ ಗಂಟೆಯಲ್ಲಿ ಈ ನಿರ್ಧಾರವೇಕೆ?

ಎಲ್ಲಾ ಪ್ರಕ್ರಿಯೆ ಮುಗಿಸಿದ್ದ ಯುವಕ, ಹೇಳಿದ ದಿನಾಂಕ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಆದರೆ ಕೇವಲ ಮೂರೇ ಮೂರು ಗಂಟೆಯಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾನೆ. ಈತ ಹೇಳುವ ಪ್ರಕಾರ, ಮೂರು ಗಂಟೆ ಕೆಲಸ ಮಾಡಿದ ಮೇಲೆ ನನಗೆ ಅನಿಸಿತು, ಈ ಕಂಪನಿಯಲ್ಲಿ ನಾನು ನನ್ನ ಎಲ್ಲಾ ಸಮಯ ಕೆಲಸ ಮಾಡಬೇಕಾದಿತು. ಈ ಕಂಪನಿಯಲ್ಲಿ ನಾನು ಬೆಳೆಯಲು ಸಾಧ್ಯವಿಲ್ಲ. ಕಂಪನಿಗಾಗಿ ಕೆಲಸ ಮಾಡಿ ಸುಸ್ತಾಗಬಹುದಷ್ಟೇ. ಹೀಗಾಗಿ ನಾನು ರಾಜೀನಾಮೆ ನೀಡಿದೆ ಎಂದು ರೆಡ್ಡಿಟ್‌ನಲ್ಲಿ ಹೇಳಿಕೊಂಡಿದ್ದಾನೆ.

ಸರಿಯಾದ ನಿರ್ಧಾರ ಎಂದು ಹಲವರ ಪ್ರತಿಕ್ರಿಯೆ

ಫ್ರೆಶರ್ಸ್ ಕೆಲಸಕ್ಕೆ ಸೇರಿಕೊಳ್ಳುವಾಗ ಬಹುತೇಕರು ಭಯದಿಂದಲೇ ಹಾಜರಾಗುತ್ತಾರೆ. ಕರಿಯರ್ ಬಿಲ್ಡ್ ಮಾಡೋ ಅನಿವಾರ್ಯ,ಉತ್ತಮ ಕಂಪನಿಯಲ್ಲಿ ಕೆಲಸ ಗಿಟ್ಟಿಸಬೇಕಾದರೆ ಅನುಭವ ಇರಬೇಕು, ಇವತ್ತು ಸ್ವಲ್ಪ ಕಷ್ಟವಾದರೂ ಪರ್ವಾಗಿಲ್ಲ, ನಾಳೆ ಉತ್ತಮ ವೇತನ, ಉತ್ತಮ ಸ್ಥಾನ ಸಿಗಬೇಕು ಅನ್ನೋ ಕಾರಣದಿಂದ ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ. ಹೀಗೆ ಸಹಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ. ನಿಮ್ಮಲ್ಲಿ ಪ್ರತಿಭೆ ಇದ್ದರೆ ಕೆಲಸ ಸಿಗುತ್ತದೆ, ಸುಮ್ಮನೆ ನಿಮ್ಮ ಅಮೂಲ್ಯ ಸಮಯವನ್ನು ಕಂಪನಿಗಾಗಿ ದುಡಿದು ಸವೆಸುವುದಕ್ಕಿಂತ, ನೀವೂ ಬೆಳೆಯುವಂತೆ, ಕಂಪನಿಯೂ ಬೆಳೆಯುವ ವಾತಾವವರಣದಲ್ಲಿ ಕೆಲಸ ಮಾಡಿ ಎಂದು ಹಲವರು ಸಲಹೆ ನೀಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ