ಯಾಕಮ್ಮಾ ಲೇಟ್ ಆಗ್ ಬಂದೇ ಎಂದು ಅಪ್ಪ ಕೇಳಿದ್ದೇ ತಪ್ಪಾಯ್ತು: ಸಾವಿಗೆ ಶರಣಾದ ವಿದ್ಯಾರ್ಥಿನಿ

By Suvarna News  |  First Published Aug 21, 2024, 2:24 PM IST

ಶಾಲೆಯಿಂದ ಲೇಟ್ ಆಗಿ ಬಂದ ಮಗಳನ್ನು ಏಕೆ ಲೇಟ್ ಎಂದು ಕೇಳಿದ್ದಕ್ಕೆ ತಾಳ್ಮೆ ಕಳೆದುಕೊಂಡ ಆಕೆ ಸಾವಿಗೆ ಶರಣಾಗಿದ್ದಾಳೆ. ಉತ್ತರ ಪ್ರದೇಶದ ಲಖನೌನಲ್ಲಿ ಈ ಘಟನೆ ನಡೆದಿದೆ. 


ಲಖನೌ: ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು, ಅವರ ತಪ್ಪನ್ನು ಪ್ರಶ್ನೆ ಮಾಡುವುದು ಕೂಡ ಪೋಷಕರ ಪಾಲಿಗೆ ದೊಡ್ಡ ತಲೆನೋವಾಗಿದೆ. ಶಾಲೆಯಿಂದ ಲೇಟ್ ಆಗಿ ಬಂದ ಮಗಳನ್ನು ಏಕೆ ಲೇಟ್ ಎಂದು ಕೇಳಿದ್ದಕ್ಕೆ ತಾಳ್ಮೆ ಕಳೆದುಕೊಂಡ ಆಕೆ ಸಾವಿಗೆ ಶರಣಾಗಿದ್ದಾಳೆ. ಉತ್ತರ ಪ್ರದೇಶದ ಲಖನೌನಲ್ಲಿ ಈ ಘಟನೆ ನಡೆದಿದೆ.  17 ವರ್ಷದ ಬಾಲಕಿಯೊಬ್ಬಳು ತನ್ನದೇ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಶಾಲೆಯಿಂದ ಮನೆಗೆ ತಡವಾಗಿ ಬಂದಿದ್ದಕ್ಕೆ ತಂದೆ ಬೈದಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ತಡವೇಕೆ ಎಂದು ತಂದೆ ಮಗಳನ್ನು ಬೈದಿದ್ದು, ಇದಾದ ನಂತರ ಬಾಲಕಿ ಮೌನವಾಗಿ ತನ್ನ ಕೋಣೆಗೆ ಹೋಗಿ ಬದುಕಿಗೆ ಗುಡ್‌ಬಾಯ್ ಹೇಳಿದ್ದಾಳೆ.. ಸ್ವಲ್ಪ ಹೊತ್ತಿನ ನಂತರ ಮಗಳ ಕೋಣೆಗೆ ಹೋದ ತಂದೆಗೆ ಆಘಾತ ಕಾದಿದೆ.

ಶಾಲೆಯಿಂದ ತಡವಾಗಿ ಬಂದಿದ್ದ ಬಾಲಕಿ

Tap to resize

Latest Videos

ವೃಂದಾವನ ಕಾಲೋನಿ ಸೆಕ್ಟರ್ 5 ರ ನಿವಾಸಿಯಾಗಿರುವ 17 ವರ್ಷದ ಬಾಲಕಿ 12 ನೇ ತರಗತಿಯಲ್ಲಿ ಓದುತ್ತಿದ್ದಳು. ಅವಳು ಶಾಲೆಯಿಂದ ತಡವಾಗಿ ಬಂದಿದ್ದಕ್ಕೆ ತಂದೆ ಕಾರಣ ಕೇಳಿದ್ದಾರೆ. ಆಕೆ ತಡವಾಗಲು ಕಾರಣ ಹೇಳದಿದ್ದಾಗ ತಂದೆ ಆಕೆಯನ್ನು ಬೈದಿದ್ದಾರೆ. ನಂತರ ಬಾಲಕಿ ತನ್ನ ಕೋಣೆಗೆ ಹೋಗಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ವಲ್ಪ ಹೊತ್ತಿನ ನಂತರ ತಂದೆ ಯೋಗೇಶ್ ಕೋಣೆಗೆ ಹೋಗಿ ನೋಡಿದಾಗ ಅವರಿಗೆ ಆಘಾತ ಎದುರಾಗಿದೆ. ಮಗಳು  ಫ್ಯಾನಿಗೆ ಕೊರಳೊಡಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಆಕೆ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಿದ್ದಾರೆ. ಈ ಘಟನೆಯಿಂದಾಗಿ ಕುಟುಂಬದಲ್ಲಿ ಶೋಕ ಆವರಿಸಿದೆ. ಯೋಗೇಶ್ ಅವರ ಪತ್ನಿ ಸಪ್ನಾ ಮತ್ತು ಕಿರಿಯ ಮಗಳು ಶ್ರೇಯಾ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನು ಓದಿ:ಇಂಥಾ ಮಕ್ಕಳು ಬೇಕಾ? ಅಪ್ಪ ಐ ಫೋನ್ ಕೊಡ್ಸಿಲ್ಲ ಅಂತ 18ರ ಬಾಲಕ ಆತ್ಮಹತ್ಯೆ
 
ಸಣ್ಣಪುಟ್ಟ ವಿಚಾರಕ್ಕೂ ದುಡುಕುವ ಮಕ್ಕಳು

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ತಾಳ್ಮೆಯ ಕೊರತೆ ಹೆಚ್ಚುತ್ತಿದೆ. ಅವರು ಯಾರ ಬೈಗುಳಗಳನ್ನು ಸಹಿಸಿಕೊಳ್ಳುವ ಸ್ಥಿತಿಯಲ್ಲಿರುವುದಿಲ್ಲ.  ಪೋಷಕರು ಬೈದರೆ ತನ್ನ ಒಳ್ಳೆಯದ್ದಕ್ಕೆ  ಬೈಯುತ್ತಾರೆ ಎಂಬ ವಿವೇಚನೆ ಮಕ್ಕಳಲ್ಲಿ ಇಲ್ಲ. ಬುದ್ಧಿ ಮಾತು ಕೇಳುವುದೇ ತಮ್ಮ ಪಾಲಿನ ದೊಡ್ಡ ಅವಮಾನ ಎಂದು ಭಾವಿಸುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ ಇದೇ ಕಾರಣಕ್ಕೆ ಮಕ್ಕಳು ಸಾವಿನ ಹಾದಿ ಹಿಡಿಯುವ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಪೋಷಕರು ಮಕ್ಕಳನ್ನು ಬೈಯುವ ಮುನ್ನ ಅವರ ತಾಳ್ಮೆ, ಸಹನಾಗುಣವನ್ನು ಅರಿಯುವುದು ಮುಖ್ಯ. ಅವರಲ್ಲಿ ಬೈಗುಳಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯವಿಲ್ಲದಿದ್ದರೆ, ಅವರೊಂದಿಗೆ ಪ್ರೀತಿಯಿಂದ ಮಾತನಾಡಿ ವಿಷಯ ತಿಳಿಸುವ ಪ್ರಯತ್ನ ಮಾಡಿ. ಶಿಕ್ಷಕರು, ಅವರ ಸ್ನೇಹಿತರ ಮೂಲಕ ಅವರಿಗೆ ತಿಳುವಳಿಕೆ ನೀಡಿ, ಇದರಿಂದ ಅವರು ಯಾವುದೇ ತಪ್ಪು ಹೆಜ್ಜೆ ಇಡುವುದಿಲ್ಲ. ಕೆಲವು ಪೋಷಕರು ಮೊದಲು ಮಕ್ಕಳನ್ನು ತುಂಬಾ ಮುದ್ದು ಮಾಡಿ ಅವರು ಕೇಳಿದ್ದೆಲ್ಲವನ್ನು ತಮಗೆ ಕಷ್ಟವೆನಿಸಿದರು ಕೊಟ್ಟು ಹಾಳು ಮಾಡುತ್ತಾರೆ. ಇದಾದ ನಂತರ ಅವರು ತಪ್ಪು ಮಾಡಿದಾಗ ಬೈಯ್ಯಲು ಶುರು ಮಾಡುತ್ತಾರೆ. ಆದರೆ ಇದನ್ನು ಸಹಿಸುವ ಸ್ಥಿತಿಯಲ್ಲಿ ಮಕ್ಕಳಿರುವುದಿಲ್ಲ. ಹೀಗಾಗಿ ಪೋಷಕರು ಕೂಡ ಸ್ವಲ್ಪ ತಾಳ್ಮೆಯಿಂದ ಸಮಾಧಾನದಿಂದ ವರ್ತಿಸಿದರೆ ಉತ್ತಮ

ಇದನ್ನೂ ಓದಿ: ಬೇರೆಯವರು ಸೆರೆ ಹಿಡಿದ ತನ್ನ ವೈರಲ್ ವೀಡಿಯೋದಿಂದ ಮನನೊಂದು ಸಾವಿಗೆ ಶರಣಾದ ಸ್ವಾಭಿಮಾನಿ ವೃದ್ಧ

 

click me!