ಐಟಿಬಿಪಿಯ ಯುದ್ಧ ಪಡೆಗೆ ಮೊದಲ ಮಹಿಳಾ ಅಧಿಕಾರಿ!

By Kannadaprabha NewsFirst Published Aug 9, 2021, 7:21 AM IST
Highlights

* ಅಸಿಸ್ಟಂಟ್‌ ಕಮಾಂಡೆಂಟ್‌ ಆಗಿ ಇಬ್ಬರು ಅಧಿಕಾರಿಗಳ ಸೇರ್ಪಡೆ

* ಐಟಿಬಿಪಿಗೆ ಮುಂಚೂಣಿ ಪಡೆಗೆ ಮೊದಲ ಬಾರಿ ಮಹಿಳಾ ಅಧಿಕಾರಿ

ಮಸ್ಸೂರಿ(ಆ.09): ಭಾರತ ಮತ್ತು ಚೀನಾದ ವಾಸ್ತವ ಗಡಿ ರೇಖೆ (ಎಲ್‌ಎಸಿ)ಯಲ್ಲಿ ಕಾವಲು ಕಾಯುತ್ತಿರುವ ಇಂಡೋ- ಟಿಬೆಟಿಯನ್‌ ಪಡೆಗೆ ಮೊದಲ ಬಾರಿಗೆ ಮಹಿಳಾ ಅಧಿಕಾರಿಗಳನ್ನು ಭಾನುವಾರ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಮಸ್ಸೂರಿಯಲ್ಲಿರುವ ತರಬೇತಿ ಅಕಾಡೆಮಿಯಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ 53 ಮಂದಿ ಅಧಿಕಾರಿಗಳ ಪೈಕಿ ಇಬ್ಬರು ಮಹಿಳಾ ಅಧಿಕಾರಿಗಳನ್ನು ಮುಂಚೂಣಿ ಸೇವೆಗೆ ನಿಯೋಜಿಸಲಾಗಿದೆ.

ಅಸಿಸ್ಟಂಟ್‌ ಕಮಾಂಡೆಂಟ್‌ ಅಧಿಕಾರಿಯಾಗಿ ಪ್ರಕೃತಿ ಹಾಗೂ ದೀಕ್ಷಾ ಪ್ರಮಾಣ ಸ್ವೀಕರಿಸಿದರು. ಇದೇ ವೇಳೆ ಐಟಿಬಿಪಿಯ ಇತಿಹಾಸವನ್ನು ಒಳಗೊಂಡ 680 ಪುಟಗಳ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರು ಮುಖ್ಯ ಅತಿಥಿ ಆಗಿ ಆಗಮಿಸಿದ್ದರು.

2016ರಲ್ಲಿ ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪರೀಕ್ಷೆಯ ಮೂಲಕ ಐಟಿಬಿಪಿ ಮಹಿಳಾ ಅಧಿಕಾರಿಗಳನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿತ್ತು. ಈ ಮುನ್ನ ತಳಮಟ್ಟದ ಶ್ರೇಣಿಗಳಿಗೆ ಮಾತ್ರ ಮಹಿಳೆಯರನ್ನು ನೇಮಿಸಿಕೊಳ್ಳಲಾಗುತ್ತಿತ್ತು.

click me!