
ನವದೆಹಲಿ, (ಆ.17): ಭಾರತದಲ್ಲಿ ಕೊರೋನಾ ಸೋಂಕಿತರ ಚೇತರಿಕೆಯ ಪ್ರಮಾಣದಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.
ಇದಕ್ಕೆ ಪೂರಕವೆಂಬಂತೆ ಕಳೆದ 24 ಗಂಟೆಗಳಲ್ಲಿ 57,584 ಕೊರೋನಾ ಸೋಂಕಿತರ ಗುಣಮುಖವಾಗಿದ್ದಾರೆ. ಈ ಮೂಲಕ ಚೇತರಿಕೆ ಪ್ರಮಾಣದಲ್ಲಿ ದಾಖಲೆ ನಿರ್ಮಾಣವಾಗಿದ್ದು, ಇದು ಹೊಸ ಆಶಾಭಾವನೆ ಮೂಡಿಸಿದೆ.
ಪುಂಡರ ವಿರುದ್ಧ ಕ್ರಮಕ್ಕೆ ಮುಂದಾದ ಸಿಎಂ, ಕಂಗನಾ ಮಾತಿಗೆ ಸೊನಾಕ್ಷಿ ಗರಂ: ಆ.17ರ ಟಾಪ್ 10 ಸುದ್ದಿ!
ಒಂದೇ ದಿನದಲ್ಲಿ 57,584 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ನಿತ್ಯ ಗುಣಮುಖರ ಸಂಖ್ಯೆಯಲ್ಲಿ ಇದುವರೆಗಿನ ಗರಿಷ್ಠವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಸೋಂಕಿತರ ಪ್ರಮಾಣಕ್ಕಿಂತ ಗುಣಮುಖರ ಪ್ರಮಾಣವೇ ಎರಡು ಪಟ್ಟು ಹೆಚ್ಚಳವಿದ್ದು, ಮರಣ ಪ್ರಮಾಣ ಶೇ.1.93ಕ್ಕೆ ಹಾಗೂ ಸೋಂಕಿತರ ಪ್ರಮಾಣ ಶೇ.25.16 ಇಳಿಮುಖವಾಗಿದೆ. ಇನ್ನು ಸದ್ಯ ಚೇತರಿಕೆ ಪ್ರಮಾಣ 72%ರಷ್ಟು ಹೆಚ್ಚಿದೆ. ಇನ್ನು ಕೊರೊನಾದಿಂದ ಚೇತರಿಸಿಕೊಂಡವರ ಪ್ರಮಾಣ 2 ಮಿಲಿಯನ್ ದಾಟಲಿದೆ. ಎಂದು ಮಾಹಿತಿ ನೀಡಿದೆ.
ಒಟ್ಟು 26,47,664 ಕೊರೊನಾ ವೈರಸ್ ಸೋಂಕಿತರ ಪೈಕಿ ಈವರೆಗೂ 19,19,843 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಹಾಗೂ 50,921 ಮಂದಿ ಸಾವಿಗೀಡಾಗಿದ್ದಾರೆ. ಪ್ರಸ್ತುತ ಭಾರತದಲ್ಲಿ 6,76,900 ಸಕ್ರಿಯ ಪ್ರಕರಣಗಳಿವೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ