ಉ. ಪ್ರ ಚುನಾವಣೆಗೆ ಇನ್ನೊಂದೇ ವರ್ಷ: ಮಾಯಾವತಿಗೆ ಸಂಕಟ!

Published : Jun 16, 2021, 11:28 AM IST
ಉ. ಪ್ರ ಚುನಾವಣೆಗೆ ಇನ್ನೊಂದೇ ವರ್ಷ: ಮಾಯಾವತಿಗೆ ಸಂಕಟ!

ಸಾರಾಂಶ

* 9 ಬಿಎಸ್ಪಿ ಶಾಸ​ಕರು ಸಮಾ​ಜ​ವಾದಿ ಪಕ್ಷ​ಕ್ಕೆ ಜಿಗಿ​ತ? * ಚುನಾ​ವ​ಣೆಗೆ 1 ವರ್ಷ ಬಾಕಿ​ಯಿ​ರು​ವಾ​ಗಲೇ ಈ ಬೆಳ​ವ​ಣಿ​ಗೆ *  ಉತ್ತರ ಪ್ರದೇಶ ರಾಜ​ಧಾನಿ ಲಖ​ನೌನಲ್ಲಿರುವ ಎಸ್‌ಪಿ ಕಚೇ​ರಿ​ಯಲ್ಲಿ ನಡೆದ ಸಭೆ​

ಲಖ​ನೌ(ಜೂ.16): ಉತ್ತರ ಪ್ರದೇ​ಶ ವಿಧಾ​ನ​ಸಭೆ ಚುನಾ​ವ​ಣೆಗೆ ಇನ್ನೂ ಒಂದು ವರ್ಷ ಬಾಕಿ​ಯಿ​ರು​ವಾ​ಗಲೇ, ಆಡ​ಳಿ​ತಾ​ರೂಢ ಬಿಜೆಪಿ ಸೇರಿ​ದಂತೆ ಎಲ್ಲಾ ಪಕ್ಷ​ಗ​ಳಲ್ಲೂ ರಾಜ​ಕೀಯ ಚಟು​ವ​ಟಿ​ಕೆ​ಗಳು ಗರಿ​ಗೆ​ದ​ರಿವೆ.

ಕಳೆದ ವರ್ಷ​ವಷ್ಟೇ ಬಿಎ​ಸ್‌​ಪಿ​ಯಿಂದ ಅಮಾ​ನತು ಆಗಿದ್ದ ಐವರು ಸೇರಿ​ದಂತೆ ಒಟ್ಟು 9 ಶಾಸ​ಕರು ಸಮಾ​ಜ​ವಾದಿ ಪಕ್ಷ​(​ಎಸ್‌​ಪಿ)ದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವ​ರನ್ನು ಭೇಟಿ​ಯಾ​ಗಿ​ದ್ದಾರೆ. ಉತ್ತರ ಪ್ರದೇಶ ರಾಜ​ಧಾನಿ ಲಖ​ನೌನಲ್ಲಿರುವ ಎಸ್‌ಪಿ ಕಚೇ​ರಿ​ಯಲ್ಲಿ ನಡೆದ ಈ ಸಭೆ​ಯಲ್ಲಿ ಮಾತು​ಕ​ತೆ​ ನಡೆ​ದಿದ್ದು, ಈ ಎಲ್ಲಾ ಶಾಸ​ಕರು ಸೈಕಲ್‌ ಪಕ್ಷಕ್ಕೆ ಸೇರುವ ಸಾಧ್ಯತೆ ದಟ್ಟ​ವಾ​ಗಿದೆ.

2017ರ ವಿಧಾ​ನ​ಸಭೆ ಚುನಾ​ವ​ಣೆ​ಯಲ್ಲಿ ಬಿಎ​ಸ್‌ಪಿ 19 ಕ್ಷೇತ್ರ​ಗ​ಳಲ್ಲಿ ಜಯ ಸಾಧಿ​ಸಿತ್ತು. ಈ ಪೈಕಿ 11 ಶಾಸ​ಕ​ರನ್ನು ಬಿಎ​ಸ್‌ಪಿ ಅಧಿ​ನಾ​ಯಕಿ ಮಾಯಾ​ವತಿ ಅವ​ರು ಉಚ್ಚಾ​ಟನೆ ಮಾಡಿ​ದ್ದಾರೆ. ಇನ್ನು ಓರ್ವ ಶಾಸಕ ಲೋಕ​ಸಭೆ ಪ್ರವೇ​ಶಿ​ಸಿ​ದ್ದಾರೆ. ಹೀಗಾಗಿ ಬಿಎ​ಸ್‌​ಪಿ​ಯ ಶಾಸ​ಕರ ಸಂಖ್ಯಾ​ಬಲ ಕೇವಲ 7ಕ್ಕೆ ಸೀಮಿ​ತ​ವಾ​ಗಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಂಚ ರಾಜ್ಯದಲ್ಲಿ ಯಾರಿಗೆ ಗೆಲುವು: ಇಂದು ಸಮೀಕ್ಷೆ ಪ್ರಕಟ, ಬಂಗಾಳದಲ್ಲಿಂದು ಕಡೆಯ ಹಂತದ ಮತದಾನ
India Latest News Live: ಪ್ಲೀಸ್ ಒಂದು ಸಹಿ ಮಾಡಿ ಪುಣ್ಯ ಕಟ್ಕೊಳ್ಳಿ - ಭಾರತದ ಮುಂದೆ ಮತ್ತೆ ಕೈ ಚಾಚಿದ ಪಾಕಿಸ್ತಾನ