ರಾಹುಲ್ ಗಾಂಧಿ ವೇಣುಗೋಪಾಲ್‌ ಅವರನ್ನು ಸಂಘಟನಾ ಪ್ರಧಾನ ಕಾರ್ಯದರ್ಶಿ ಮಾಡಿದ್ದೇಕೆ?

Suvarna News   | Asianet News
Published : Jul 24, 2020, 11:07 AM ISTUpdated : Jul 24, 2020, 11:12 AM IST
ರಾಹುಲ್ ಗಾಂಧಿ ವೇಣುಗೋಪಾಲ್‌ ಅವರನ್ನು ಸಂಘಟನಾ ಪ್ರಧಾನ ಕಾರ್ಯದರ್ಶಿ ಮಾಡಿದ್ದೇಕೆ?

ಸಾರಾಂಶ

ಮೊದಲೆಲ್ಲ ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಎಂದರೆ ಎಂಪಿ, ಎಂಎಲ…ಎಗಳು ಬಿಡಿ ಮಂತ್ರಿಗಳು, ಮುಖ್ಯಮಂತ್ರಿಗಳೂ ಹೆದರುತ್ತಿದ್ದರು. ಎಷ್ಟೆಂದರೆ ಟೆನ್‌ ಜನಪಥ್‌ನಲ್ಲಿ ಕೆಲಸ ಮಾಡುತ್ತಿದ್ದ ಸ್ಟೆನೋಗ್ರಾಫರ್‌ ವಿನ್ಸೆಂಟ್‌ ಜಾಜ್‌ರ್‍ ಮಗಳ ಮದುವೆಗೆ ಮುಖ್ಯಮಂತ್ರಿಗಳು ಬಂದು ಹಾಜರಿ ಹಾಕುತ್ತಿದ್ದರು. ಆದರೆ ಈಗ ನೋಡಿ ಜೈಪುರದಲ್ಲಿ ಸಚಿನ್‌ ಪೈಲಟ್‌, ಅಶೋಕ್‌ ಗೆಹ್ಲೋಟ್‌ ಬಿಡಿ, ವೇಣುಗೋಪಾಲ…, ಅವಿನಾಶ ಪಾಂಡೆ ಅಂಥವರನ್ನು ಕೂಡ ಶಾಸಕರೇ ಕ್ಯಾರೆ ಅನ್ನೋದಿಲ್ಲ.

ಮೊದಲೆಲ್ಲ ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಎಂದರೆ ಎಂಪಿ, ಎಂಎಲ…ಎಗಳು ಬಿಡಿ ಮಂತ್ರಿಗಳು, ಮುಖ್ಯಮಂತ್ರಿಗಳೂ ಹೆದರುತ್ತಿದ್ದರು. ಎಷ್ಟೆಂದರೆ ಟೆನ್‌ ಜನಪಥ್‌ನಲ್ಲಿ ಕೆಲಸ ಮಾಡುತ್ತಿದ್ದ ಸ್ಟೆನೋಗ್ರಾಫರ್‌ ವಿನ್ಸೆಂಟ್‌ ಜಾಜ್‌ರ್‍ ಮಗಳ ಮದುವೆಗೆ ಮುಖ್ಯಮಂತ್ರಿಗಳು ಬಂದು ಹಾಜರಿ ಹಾಕುತ್ತಿದ್ದರು. ಆದರೆ ಈಗ ನೋಡಿ ಜೈಪುರದಲ್ಲಿ ಸಚಿನ್‌ ಪೈಲಟ್‌, ಅಶೋಕ್‌ ಗೆಹ್ಲೋಟ್‌ ಬಿಡಿ, ವೇಣುಗೋಪಾಲ್ ಅವಿನಾಶ ಪಾಂಡೆ ಅಂಥವರನ್ನು ಕೂಡ ಶಾಸಕರೇ ಕ್ಯಾರೆ ಅನ್ನೋದಿಲ್ಲ.

ವಿಕಾಸ್ ದುಬೆ ಎನ್‌ಕೌಂಟರ್‌ ನಂತರ ಬದಲಾದ ಉ. ಪ್ರ ರಾಜಕೀಯ; ಬ್ರಾಹ್ಮಣರ ಓಲೈಕೆಯಲ್ಲಿ ಪ್ರಿಯಾಂಕ ಗಾಂಧಿ

ಇನ್ನು, ರಾಹುಲ್‌ ಗಾಂಧಿ ವೇಣುಗೋಪಾಲ್ ಅವರನ್ನು ಸಂಘಟನಾ ಪ್ರಧಾನ ಕಾರ್ಯದರ್ಶಿ ಮಾಡಿದ್ದೇಕೆ ಎಂಬುದೇ ಕಾಂಗ್ರೆಸ್‌ನ ಹಿರಿಯ ನಾಯಕರಲ್ಲಿ ಅನೇಕರಿಗೆ ಗೊತ್ತಿಲ್ಲ. ಏಕೆಂದರೆ ವೇಣು ಚುನಾವಣಾ ರಣತಂತ್ರಗಾರ ಅಲ್ಲ, ಒಳ್ಳೆಯ ಕೇಳುಗ ಅಲ್ಲ, ಅವರಿಗೆ ಹಿಂದಿ, ಇಂಗ್ಲಿಷ್‌ ಮೇಲೆ ಪ್ರಭುತ್ವ ಇಲ್ಲ. ಅಷ್ಟೇ ಅಲ್ಲ, ವೇಣುಗೆ ದಿಲ್ಲಿಯ ಅಳಿದುಳಿದ ಸಾಮ್ರಾಜ್ಯದ ಕಾರುಬಾರು ಕೂಡ ನಡೆಸಲು ಬರುವುದಿಲ್ಲ. ಈಗ ವೇಣು ಅವರನ್ನು ರಾಹುಲ… ರಾಜ್ಯಸಭೆಗೆ ತಂದಿದ್ದಾರೆ. ರಾಜನಿಗೆ ಕಳೆದುಹೋಗಿರುವ ಸಾಮ್ರಾಜ್ಯವನ್ನು ಪುನರಪಿ ಗಳಿಸುವ ಇಚ್ಛೆ ಇದ್ದರೆ, ಮೊದಲು ಒಳ್ಳೆಯ ಗುರಿ ಇಟ್ಟು ತಲುಪಬಲ್ಲ ಸೇನಾಪತಿಗಳನ್ನು ಹುಡುಕಿ ತರಬೇಕು. ಅಲ್ಲಿಗೆ ಅರ್ಧ ಕೆಲಸ ಮುಗಿದಂತೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಮಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು