*ರಿಸರ್ವ್ ಬ್ಯಾಂಕ್‌ನ ಹೊಸ ಹೂಡಿಕೆ ಯೋಜನೆಗೆ ಪ್ರಧಾನಿ ಮೋದಿ ಚಾಲನೆ
*ಸಣ್ಣ ಹೂಡಿಕೆದಾರರೂ ಸುಲಭವಾಗಿ ಬಾಂಡ್‌ಗಳಲ್ಲಿ ಹೂಡಲು ಅವಕಾಶ
*‘ಒಂದು ದೇಶ ಒಂದು ಓಂಬುಡ್ಸ್‌ಮನ್’ ಯೋಜನೆಯೂ ಲೋಕಾರ್ಪಣೆ
ನವದೆಲಿ(ನ.13) : ಸಣ್ಣ ಪ್ರಮಾಣದ ಚಿಲ್ಲರೆ ಹೂಡಿಕೆದಾರರೂ (Retail Investors) ಸರ್ಕಾರಿ ಬಾಂಡ್ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವುದಕ್ಕೆ ಅವಕಾಶ ಕಲ್ಪಿಸಲು ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ಗೆ (RBI) ಸಂಬಂಧಿಸಿದ ದೂರು ನಿರ್ವಹಣಾ ವ್ಯವಸ್ಥೆಯನ್ನು ಸುಧಾರಿಸಲು ಎರಡು ಗ್ರಾಹಕ ಕೇಂದ್ರಿತ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಶುಕ್ರವಾರ ಚಾಲನೆ ನೀಡಿದ್ದಾರೆ.
ರಿಸವ್‌ರ್ ಬ್ಯಾಂಕ್‌ನ ರೀಟೇಲ್ ಡೈರೆಕ್ಟ್ ಸ್ಕೀಮ್ (ಚಿಲ್ಲರೆ ನೇರ ಹೂಡಿಕೆ - Retail Direct Scheme) ಯೋಜನೆಯಡಿ ಶ್ರೀಸಾಮಾನ್ಯರು ಅತ್ಯಂತ ಸುಲಭವಾಗಿ ಬಂಡವಾಳ ಪೇಟೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಜನರ ಈ ಹೂಡಿಕೆ ಹಣಕ್ಕೆ ತಕ್ಕ ಪ್ರತಿಫಲ ಸಿಗುವುದಲ್ಲದೆ ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೂ ಹಣ ದೊರೆಯುತ್ತದೆ.
undefined
ಒಂದು ದೇಶ ಒಂದು ಓಂಬುಡ್ಸ್‌ಮನ್ ಯೋಜನೆಯೂ ಲೋಕಾರ್ಪಣೆ
ಮತ್ತೊಂದೆಡೆ, ರಿಸವ್‌ರ್ ಬ್ಯಾಂಕ್ ಅಧೀನದಲ್ಲಿ ಬರುವ ಬ್ಯಾಂಕುಗಳು, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಹಾಗೂ ಹಣ ಪಾವತಿ ಸೇವೆ ಒದಗಿಸುವ ಕಂಪನಿಗಳ ವಿರುದ್ಧ ದೂರು ನೀಡಲು ಆಯಾ ಕಂಪನಿಗಳಿಗೆ ಗ್ರಾಹಕರು ಅಲೆದಾಡುವುದನ್ನು ತಪ್ಪಿಸಲು ‘ಒಂದು ದೇಶ ಒಂದು ಓಂಬುಡ್ಸ್‌ಮನ್ - Integrated Ombudsman Scheme’ ಯೋಜನೆಯನ್ನು ಮೋದಿ ಅನಾವರಣಗೊಳಿಸಿದ್ದಾರೆ.
ರೀಟೇಲ್ ಡೈರೆಕ್ಟ್ ಯೋಜನೆಯಿಂದ ಪ್ರತಿಯೊಬ್ಬರೂ ಆರ್ಥಿಕತೆಗೆ ಸೇರ್ಪಡೆಯಾಗುವುದಕ್ಕೆ ಬಲ ಸಿಗಲಿದೆ. ಮಧ್ಯಮ ವರ್ಗ, ನೌಕರರು, ಸಣ್ಣ ಉದ್ದಿಮೆದಾರರು ಹಾಗೂ ಹಿರಿಯ ನಾಗರಿಕರು ತಮ್ಮಲ್ಲಿರುವ ಅಲ್ಪ ಪ್ರಮಾಣದ ಹೂಡಿಕೆಯನ್ನು ನೇರವಾಗಿ ಹಾಗೂ ಸುರಕ್ಷಿತವಾಗಿ ಸರ್ಕಾರಿ ಸೆಕ್ಯುರಿಟಿಗಳಲ್ಲಿ (Government Securities) ಹೂಡಿಕೆ ಮಾಡಬಹುದಾಗಿದೆ. ಸರ್ಕಾರಿ ಬಾಂಡ್‌ಗಳಿಂದ ಸಣ್ಣ ಹೂಡಿಕೆದಾರರಿಗೆ ಸುರಕ್ಷತೆಯ ಭಾವ ಮೂಡುತ್ತದೆ ಎಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಯೋಜನೆಗಳಿಗೆ ಚಾಲನೆ ನೀಡಿದ ಮೋದಿ ಹೇಳಿದರು.
ಏನಿದು ಬಾಂಡ್ ಹೂಡಿಕೆ ಸ್ಕೀಂ?
ಶ್ರೀಸಾಮಾನ್ಯ ಜನರೂ ಸರ್ಕಾರಿ ಬಾಂಡ್‌ಗಳಲ್ಲಿ (Government Bonds) ಹೂಡಿಕೆ ಮಾಡುವಂತಾಗಲಿ ಎಂದು ಆರಂಭಿಸಿರುವ ಯೋಜನೆಯೇ ‘ರೀಟೇಲ್ ಡೈರೆಕ್ಟ್ ಸ್ಕೀಮ್. ಇಂತಹ ಹೂಡಿಕೆಯಿಂದ ಜನರಿಗೆ ಸುರಕ್ಷಿತ ಹೂಡಿಕೆ ವಿಧಾನವೊಂದು ಲಭಿಸುತ್ತದೆ. ಸರ್ಕಾರಕ್ಕೂ ಅಭಿವೃದ್ಧಿ ಯೋಜನೆಗಳಿಗೆ ಸುಲಭವಾಗಿ ಹಣ ಹರಿದುಬರುತ್ತದೆ. ಸರ್ಕಾರದ ಅಭಿವೃದ್ಧಿ ಬಾಂಡ್, ಗೋಲ್ಡ್ ಬಾಂಡ್‌ನಂಥ ವಿವಿಧ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು ನಾಗರಿಕರು ‘ರೀಟೇಲ್ ಡೈರೆಕ್ಟ್ ಗಿಲ್ಟ್ ಖಾತೆ (ಆರ್‌ಡಿಜಿ ಖಾತೆ -Retial Direct Gilt account) ತೆರೆಯಬೇಕು. ttps://rbiretaildirect.in/#/login/ ಮೂಲಕ ನೋಂದಣಿ (registration) ಮಾಡಿಸಿ ಖಾತೆ (Account) ತೆರೆಯಬಹುದು. ಈ ಖಾತೆಯನ್ನು ಎಸ್‌ಬಿ ಖಾತೆಯೊಂದಿಗೆ ಸಂಯೋಜಿಸಿ ಎಸ್‌ಬಿ ಖಾತೆ ಮೂಲಕ ಹಣ ಪಾವತಿಸಿ ಬಾಂಡ್ ಖರೀದಿಸಬಹುದು. ಅದೇ ವೆಬ್‌ಸೈಟ್‌ನಲ್ಲಿ ಖರೀದಿ, ಮಾರಾಟ ಪ್ರಕ್ರಿಯೆ ನಡೆಸಬಹುದು.
ಒಂದು ದೇಶ ಒಂದು ಓಂಬುಡ್ಸ್‌ಮನ್
ಬ್ಯಾಂಕು, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಹಾಗೂ ಹಣ ಪಾವತಿ ಸೇವೆಗಳಂತಹ ಆರ್‌ಬಿಐ ನಿಯಂತ್ರಣಕ್ಕೆ ಒಳಪಟ್ಟಿರುವ ಕಂಪನಿಗಳ ವಿರುದ್ಧ ಗ್ರಾಹಕರು ದೂರು ನೀಡಲು ಹೊಸ ವ್ಯವಸ್ಥೆ. ಇದರಿಂದ ದೂರು ನಿರ್ವಹಣಾ ಪ್ರಕ್ರಿಯೆಯಲ್ಲಿ ಭಾರಿ ಸುಧಾರಣೆಯಾಗಲಿದೆ. ದೂರು ದಾಖಲಾದ 30 ದಿನದೊಳಗೆ ಅದು ಪರಿಹಾರವಾಗದಿದ್ದರೆ ಆ ನಂತರ ಅದನ್ನು ಉನ್ನತ ಸ್ತರಕ್ಕೆ ಒಯ್ಯಲು ಅವಕಾಶವಿದೆ. ದೂರು ನಿರ್ವಹಣೆ ವಿಧಾನದಿಂದ ಗ್ರಾಹಕರು ತೃಪ್ತರಾಗದಿದ್ದರೆ ಓಂಬುಡ್ಸ್‌ಮನ್ ಮೊರೆ ಹೋಗಬಹುದು. ಇದು ಒಂದು ದೇಶ ಒಂದು ಓಂಬುಡ್ಸ್‌ಮನ್ ರೀತಿ ಕಾರ್ಯನಿರ್ವಹಿಸಲಿದೆ. ದೂರು ನೀಡಲು ಪ್ರತ್ಯೇಕ ವೆಬ್‌ಸೈಟ್ ರೂಪಿಸಲಾಗುತ್ತದೆ.