ಪೋರ್ನೋಗ್ರಾಫಿ ವಿರುದ್ಧ ಕೇಂದ್ರದ ಯುದ್ಧ: ರವಿಶಂಕರ್ ಪ್ರಸಾದ್!

By Suvarna NewsFirst Published Feb 5, 2020, 7:25 PM IST
Highlights

ಪೋರ್ನೋಗ್ರಾಫಿ  ದೇಶಕ್ಕೆ ಮಾರಿ ಎಂದ ಕೇಂದ್ರ ಸಚಿವ| ಪೋರ್ನೋಗ್ರಾಫಿ ತಡೆಗಟ್ಟಲು ಕೇಂದ್ರದ ಶತ ಪ್ರಯತ್ನ| ಲೋಕಸಭೆಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮಾಹಿತಿ| ಅಶ್ಲೀಲ ಚಿತ್ರ ಪ್ರಸಾರ ತಡೆಗೆ ಸಂಘಟಿತ ಪ್ರಯತ್ನ ಎಂದ ರವಿಶಂಕರ್ ಪ್ರಸಾದ್| ಪೋರ್ನೋಗ್ರಾಫಿ ಗಂಭೀರ ಸಾಮಾಜಿಕ ಸಮಸ್ಯೆ ಎಂದ ಕೇಂದ್ರ ಸರ್ಕಾರ|

ನವದೆಹಲಿ(ಫೆ.05): ಪೋರ್ನೋಗ್ರಾಫಿ(ಅಶ್ಲೀಲ ಚಿತ್ರ ವೀಕ್ಷಣೆ) ದೇಶಕ್ಕೆ ಮಾರಿಯಾಗಿ ಪರಿಣಮಿಸಿದ್ದು, ಇದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಇನ್ನಿಲ್ಲದ ಪ್ರಯತ್ನ ನಡೆಸಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಲೋಕಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ರವಿಶಂಕರ್ ಪ್ರಸಾದ್, ಅಶ್ಲೀಲ ಚಿತ್ರ ಪ್ರಸಾರವನ್ನು ತಡೆಯಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಪೊಲೀಸ್ ವ್ಯವಸ್ಥೆ ಒಟ್ಟಾಗಿ ಕೆಲಸ ಮಾಡುತ್ತಿದೆ ಎಂದು  ಸ್ಪಷ್ಟಪಡಿಸಿದರು.

ಕದ್ದುಮುಚ್ಚಿ ಪೋರ್ನ್ ನೋಡ್ತೀರಾ? ನಿಮ್ಮೇಲೆ ಕಣ್ಣಿಟ್ಟಿದ್ದಾರೆ ಇವ್ರು!

Union Minister Ravi Shankar Prasad in Lok Sabha: Pornography, particularly child pornography is a serious menace. Revenge pornography is rising in the country. We are taking a lot of measures. Central Government, State Governments and State police are working together to curb it. pic.twitter.com/iQgnkGBGWZ

— ANI (@ANI)

ಅಶ್ಲೀಲ ಚಿತ್ರ ಅದರಲ್ಲೂ ಪ್ರಮುಖವಾಗಿ ಮಕ್ಕಳ ಅಶ್ಲೀಲ ಚಿತ್ರ ಪ್ರಸಾರ ಹಾಗೂ ವೀಕ್ಷಣೆ ಗಂಭೀರ ಸಾಮಾಜಿಕ ಸಮಸ್ಯೆಯಾಗಿದ್ದು, ಇದನ್ನು ನಿರ್ಮುಲನೆ ಮಾಡಲು ಕೇಂದ್ರ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಪ್ರಸಾದ್ ನುಡಿದರು.

ವಾಟ್ಸಪ್, ಫೇಸ್ ಬುಕ್‌ನಲ್ಲಿ ಗ್ರೂಪ್ ಸೃಷ್ಟಿ ಮಾಡಿ ಅಶ್ಲೀಲ ವಿಡಿಯೋ ಶೇರ್!

click me!