ರತನ್ ಟಾಟಾ ಮುದ್ದಿನ ಸಾಕು ನಾಯಿಯಿಂದ ಅಂತಿಮ ದರ್ಶನ, ಮನಕಲುಕಿದ ದೃಶ್ಯ!

By Chethan Kumar  |  First Published Oct 10, 2024, 4:42 PM IST

ಉದ್ಯಮಿ ರತನ್ ಟಾಟಾಗೆ ನಾಯಿಗಳೆಂದರೆ ಪಂಚ ಪ್ರಾಣ. ನಾಯಿ ಆರೈಕೆಯಲ್ಲೇ ರತನ್ ಟಾಟಾ ಇಡೀ ದಿನ ಕಳೆಯುತ್ತಿದ್ದರು.  ಇದೀಗ ರತನ್ ಟಾಟಾ ಪ್ರೀತಿಯಿಂದ ಸಾಕಿದ್ದ ನಾಯಿಗಳು ಮಾಲೀಕನಿಲ್ಲದೆ ಅನಾಥವಾಗಿದೆ. ರತನ್ ಟಾಟಾ ಮುದ್ದಿನ ನಾಯಿ ಗೋವಾ ಟಾಟಾ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದೆ. ಈ ದೃಶ್ಯ ಮನಕಲುಕುವಂತಿದೆ.


ಮುಂಬೈ(ಅ.10) ರತನ್ ಟಾಟಾ ನಾಯಿಗಳಿಗಾಗಿ ಆಸ್ಪತ್ರೆ ಕಟ್ಟಿಸಿದ್ದಾರೆ. ಇಲ್ಲಿ ಬೀದಿ ನಾಯಿಯಿಂದ ಹಿಡಿದು ಎಲ್ಲಾ ನಾಯಿಗಳೂ ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ನಾಯಿಗೆ ರಕ್ತದ ಅವಶ್ಯಕತೆ ಇದ್ದರೆ, ರತನ್ ಟಾಟಾ ಖುದ್ದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದರು. ಈ ಮೂಲಕ ಹಲವು ನಾಯಿಗಳ ಪ್ರಾಣ ಉಳಿಸಿದ್ದಾರೆ, ಆರೈಕೆ ಮಾಡಿದ್ದರೆ. ಇನ್ನು ರತನ್ ಟಾಟಾ ಮನೆಯಲ್ಲೂ ಕೆಲ ನಾಯಿಗಳಿವೆ. ಆದರೆ ಮಾಲೀಕನಿಲ್ಲದೆ ಅನಾಥವಾಗಿದೆ. ರತನ್ ಟಾಟಾ ಮುದ್ದಿನ ಸಾಕು ನಾಯಿ ಗೋವಾ ಇದೀಗ ರತನ್ ಟಾಟಾ ಅಂತಿಮ ದರ್ಶನ ಪಡೆದಿದೆ.

ರತನ್ ಟಾಟಾ ಬಾಂಬೆ ಹೌಸ್‌ನಲ್ಲಿದ್ದ ಗೋವಾ ನಾಯಿಯನ್ನು ಸಂಬಂಧಿಕರು ಹಾಗೂ ಸಿಬ್ಬಂದಿಗಳು ಮುಂಬೈನ ನ್ಯಾಶನಲ್ ಸೆಂಟರ್ ಆಫ್ ಪರ್ಫಾಮಿಂಗ್ ಆರ್ಟ್ಸ್ ಕೇಂದ್ರಕ್ಕೆ ಕರೆ ತಂದಿದ್ದಾರೆ. ಇಲ್ಲಿ ರತನ್ ಟಾಟಾ ಪಾರ್ಥೀವ ಶರೀರ ಅಂತಿಮ ದರ್ಶನಕ್ಕೆ ಇಡಲಾಗಿದೆ. ಈ ಕೇಂದ್ರಕ್ಕೆ ಗೋವಾ ನಾಯಿಯನ್ನು ಕರೆದ ತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 

Tap to resize

Latest Videos

ಇಂಗ್ಲೆಂಡ್ ಆಯೋಜಿಸಿದ ಜೀವಮಾನ ಶ್ರೇಷ್ಠ ಪ್ರಶಸ್ತಿ ಸ್ವೀಕಾರಕ್ಕೆ ಗೈರಾಗಿದ್ದ ಟಾಟಾ, ಕಾರಣ ಮುದ್ದಿನ ನಾಯಿ!

ಮಾಲೀಕನ ಕಳೆದುಕೊಂಡ ಮುದ್ದಿನ ನಾಯಿಯ ರೋಧನೆ ಹೇಳತೀರದು. ಈ ದೃಶ್ಯಗಳು ಮನಕಲುಕುವಂತಿದೆ. ಅಂತಿಮ ದರ್ಶನ ಪಡೆದ ಗೋವಾ ನಾಯಿ ಮಾಲೀಕ ಕಳೆದುಕೊಂಡ ನೋವಿನಲ್ಲಿದೆ. ಈಗಾಗಲೇ ಹಲವು ಗಣ್ಯರು ರತನ್ ಟಾಟಾ ಅಂತಿಮ ದರ್ಶನ ಪಡೆದಿದ್ದರೆ. ಇದರ ನಡುವೆ ರತನ್ ಟಾಟಾ ಸಾಕಿದ ಮುದ್ದಿನ ನಾಯಿಗೆ ವಿಶೇಷ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿತ್ತು.  

 

 

ರತನ್ ಟಾಟಾ ಈ ನಾಯಿಗೆ ಗೋವಾ ಹೆಸರಿಟ್ಟಿದ್ದೇಕೆ?
ರತನ್ ಟಾಟಾಗೆ ನಾಯಿ ಮೇಲಿನ ಪ್ರೀತಿ, ಕಾಳಜಿ, ಆರೈಕೆ ತುಸು ಹೆಚ್ಚು. ಕಪ್ಪು ಬಳಿಯ ಗೋವಾ ನಾಯಿಯನ್ನು ರತನ್ ಟಾಟಾ ಕೆಲ ವರ್ಷಗಳ ಹಿಂದೆ ಗೋವಾದಿಂದ ರಕ್ಷಿಸಿದ್ದರು.ಗಾಯಗೊಂಡಿದ್ದ ಬೀದಿ ನಾಯಿಯನ್ನು ರಕ್ಷಿಸಿ ಮುಂಬೈಗೆ ತಂದಿದ್ದ ರತನ್ ಟಾಟಾ ಆರೈಕೆ ಮಾಡಿದ್ದರು. ಗೋವಾದಿಂದ ಈ ನಾಯಿಯನ್ನು ರಕ್ಷಿಸಿ ತಂದ ಕಾರಣ ಇದಕ್ಕೆ ಗೋವಾ ಎಂದು ಹೆಸರಿಟ್ಟಿದ್ದರು.

ರತನ್ ಟಾಟಾ ಅಸಿಸ್ಟೆಂಟ್ ಆಗಿ ಗುರುತಿಸಿಕೊಂಡಿರುವ ಶಂತನು ನಾಯ್ದು ಕೂಡ ನಾಯಿ ಮೇಲೆ ಪ್ರೀತಿ ಹೆಚ್ಚು. ಈ ಕಾರಣದಿಂದೇ ಶಂತನು ನಾಯ್ಡು ಎಂದರೇ ರತನ್ ಟಾಟಾಗೆ ಅಚ್ಚುಮೆಚ್ಚು. ಟಾಟಾ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಶಂತನು ನಾಯ್ಡು ಬಳಿಕ ಬೀದಿ ನಾಯಿಗಳ ಅಪಘಾತ ತಪ್ಪಿಸಲು ಸಣ್ಣ ಕಂಪನಿ ಆರಂಭಿಸಿ ರೇಡಿಯೋ ಕಾಲರ್ ಉತ್ಪಾದನೆ ಆರಂಭಿಸಿದ್ದ. ಈ ವೇಳೆ  ಕಂಪನಿಗೆ ಆರ್ಥಿಕತೆಯ ಅವಶ್ಯಕತೆ ಇತ್ತು. ಈ ಮಾಹಿತಿ ತಿಳಿದ ರತನ್ ಟಾಟಾ ನೇರವಾಗಿ ಸಂಪೂರ್ಣ ಫಂಡಿಂಗ್ ಮಾಡಿದ್ದರು. ಇಷ್ಟೇ ಅಲ್ಲ ತನ್ನ ಅಸಿಸ್ಟೆಂಟ್ ಆಗಿ ನೇಮಿಸಿಕೊಂಡಿದ್ದರು. ಬಳಿಕ ಶಂತನು ನಾಯ್ಡು ಹಾಗೂ ರತನ್ ಟಾಟಾ ಗೆಳೆತನ ಎಷ್ಟು ಆತ್ಮೀಯವಾಗಿತ್ತು ಅನ್ನೋದು ಜಗತ್ತೆ ನೋಡಿದೆ.

ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಿ ಭಾವುಕರಾದ ವಿವಾದಿತ ಉದ್ಯಮಿ ವಿಜಯ್ ಮಲ್ಯ!
 

click me!