ರತನ್ ಟಾಟಾ ವಿಲ್‌ ಪ್ರಕಾರ 588 ಕೋಟಿ ರೂ ಆಸ್ತಿ ಪಡೆಯಲು ಕೊನೆಗೂ ಒಪ್ಪಿದ ಆಪ್ತ ಗೆಳೆಯ ದತ್ತಾ

Published : May 20, 2025, 07:14 PM IST
ರತನ್ ಟಾಟಾ ವಿಲ್‌ ಪ್ರಕಾರ 588 ಕೋಟಿ ರೂ ಆಸ್ತಿ ಪಡೆಯಲು ಕೊನೆಗೂ ಒಪ್ಪಿದ ಆಪ್ತ ಗೆಳೆಯ ದತ್ತಾ

ಸಾರಾಂಶ

ಕೊನೆಗೂ ರತನ್ ಟಾಟಾ ಆಪ್ತ ಮೋಹಿನಿ ಮೋಹನ್ ದತ್ತಾ 588 ಕೋಟಿ ರೂಪಾಯಿ ಆಸ್ತಿ ಸ್ವೀಕರಿಸಲು ಒಪ್ಪಿದ್ದಾರೆ. ಆಸ್ತಿಯಲ್ಲಿ ಪಾಲು ಪಡೆದಿದ್ದ ರತನ್ ಟಾಟಾ ಕುಟುಂಬದ ಹೊರತಾಗಿದ್ದ ಏಕೈಕ ವ್ಯಕ್ತಿ ಈ ಮೋಹಿನಿ ಮೋಹನ್ ದತ್ತಾ. ಆದರೆ ವಿಲ್ ಪ್ರಕಾರ ದತ್ತಾ ಆಸ್ತಿ ಸ್ವೀಕರಿಸಲು ನಿರಾಕರಿಸಿದ್ದೇಕೆ

ಮುಂಬೈ(ಮೇ.20) ರತನ್ ಟಾಟಾ ಅಗಲಿ ತಿಂಗಳುಗಳೇ ಉರುಳಿದೆ. ಭಾರತದ ಕಂಡ ಅತ್ಯನ್ನತ ಉದ್ಯಮಿ, ಕೊಡುಗೈ ದಾನಿ, ಸಾಮಾಜಿಕವಾಗಿ,ಶೈಕ್ಷಣಿಕವಾಗಿ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರದಲ್ಲಿ ಕೊಡುಗೆ ಸಲ್ಲಿಸಿದ್ದಾರೆ. ರತನ್ ಟಾಟಾ ನಿಧನಕ್ಕೂ ಮುನ್ನವೇ ತಮ್ಮ ಸಾವಿರಾರು ಕೋಟಿ ರೂಪಾಯಿ ಆಸ್ತಿಗೆ ವಾರಸುದಾರ ಯಾರು? ಯಾರಿಗೆ ಎಷ್ಟು ಪಾಲು ಅನ್ನೋದನ್ನು ಅಚ್ಚುಕಟ್ಟಾಗಿ ಹಂಚಿಕೆ ಮಾಡಿದ್ದಾರೆ. ಈ ಕುರಿತು ವಿಲ್(ಉಯಿಲು) ಬರೆದಿದ್ದರು. ಈ ವಿಲ್‌ನಲ್ಲಿ ಟಾಟಾ ಕುಟುಂಬಸ್ಥರೇ ತುಂಬಿದ್ದಾರೆ. ಇನ್ನು ಒಂದಷ್ಟು ಮೊತ್ತವನ್ನು ಕೆಲ ಸಿಬ್ಬಂದಿಗಳಿಗೆ ಹಂಚಿದ್ದಾರೆ. ಆದರೆ ಅಸ್ತಿ ಸಂಪೂರ್ಣ ತಮ್ಮ ಕುಟುಂಬಸ್ಥರಿಗೆ ಹಂಚಿಕೆ ಮಾಡಿದ್ದಾರೆ. ಆದರೆ  ಪೈಕಿ ಟಾಟಾ ಕುಟುಂಬದ ಹೊರತಾಗಿದ್ದ ಏಕೈಕ ವ್ಯಕ್ತಿ ಎಂದರೆ ಅದು ಮೊಹಿನಿ ಮೋಹನ್ ದತ್ತಾ. ರತನ್ ಟಾಟಾ ಬರೆದಿದ್ದ ಬರೋಬ್ಬರಿ 588 ಕೋಟಿ ರೂಪಾಯಿ ಆಸ್ತಿಯನ್ನು ಸ್ವೀಕರಿಸಲು ಇದೀಗ ಮೊಹಿನಿ ಮೊಹನ್ ದತ್ತಾ ಒಪ್ಪಿದ್ದಾರೆ.

ಆಸ್ತಿ ಸ್ವೀಕರಿಸಲು ಆರಂಭದಲ್ಲಿ ನಿರಾಕರಿಸಿದ್ದ ರತನ್ ಟಾಟಾ ಬಾಲ್ಯದ ಗೆಳೆಯ 
ರತನ್ ಟಾಟಾ ಆಸ್ತಿ ವಿಲ್‌ನಲ್ಲಿ ಯಾರಿಗೆ ಎಷ್ಟೆಷ್ಟು ಎಂದು ಬರೆದಿದ್ದರು. ಇದರಲ್ಲಿ ರತನ್ ಟಾಟಾ ಕುಟುಂಬದಿಂದ ಹೊರಗಿದ್ದ ಏಕೈಕ ವ್ಯಕ್ತಿ ಇದೇ ಮೋಹಿನಿ ಮೋಹನ್ ದತ್ತಾ. ರತನ್ ಟಾಟಾ ತಮ್ಮ ಎಸ್ಟೇಟ್‌ಗಳಲ್ಲಿ ಬರೋಬ್ಬರಿ 588 ಕೋಟಿ ರೂಪಾಯಿ ಆಸ್ತಿಯನ್ನು ಮೋಹಿನಿ ಮೋಹನ್ ದತ್ತಾಗೆ ಬರೆದಿದ್ದರು.ರತನ್ ಟಾಟಾ ಅವರು ವಿಲ್‌ನಲ್ಲಿ ಬರೆದಿರುವ ಎಸ್ಟೇಟ್ ಆಸ್ತಿಯ ಮೌಲ್ಯ 588 ಕೋಟಿ ರೂಪಾಯಿ ಅಲ್ಲ, ಅದು ಸಾವಿರಾರು ಕೋಟಿ ರೂಪಾಯಿ ಇದೆ. ಹೀಗಾಗಿ ಈ ಕುರಿತು ಕೋರ್ಟ್ ಸ್ಪಷ್ಟಪಡಿಸಬೇಕು. ತನಗೆ ಬರೆದಿರುವ ಆಸ್ತಿಯ ಮೌಲ್ಯ ಹೆಚ್ಚಿದೆ. ಆದರೆ ತನಗೆ 588 ಕೋಟಿ ರೂಪಾಯಿ ಎನ್ನಲಾಗುತ್ತಿದೆ ಎಂದು ಪ್ರಶ್ನೆ ಎತ್ತಿದ್ದರು. 

ರತನ್ ಟಾಟಾ ಆಸ್ತಿ ಹಂಚಲು ವಕೀಲರು ಹಾಗೂ ಕಾರ್ಯನಿರ್ವಾಹಕರನ್ನು ರತನ್ ಟಾಟಾ ನೇಮಿಸಿದ್ದರು. ಈ ಇವರ ಬಳಿಕ ದತ್ತಾ ಎತ್ತಿದ ಪ್ರಶ್ನೆಯಿಂದ ಇದುವರೆಗೂ ಯಾರಿಗೂ ವಿಲ್ ಹಂಚಿಕೆಯಾಗಲೇ ಇಲ್ಲ. ತಕರಾರು ಪೂರ್ಣಗೊಳ್ಳುವವರೆಗೆ ವಿಲ್ ಹಂಚಿಕೆ ಅಸಾಧ್ಯವಾಗಿತ್ತು. ಆದರೆ ರತನ್ ಟಾಟಾ ತಮ್ಮ ವಿಲ್‌ನಲ್ಲಿ ಈ ಹಂಚಿಕೆಯನ್ನು ಪ್ರಶ್ನಿಸಿದವರು ಎಲ್ಲಾ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಹೀಗಾಗಿ ಕೋರ್ಟ್ ಮೂಲಕ ಕಾನೂನು ಹೋರಾಟ ಮಾಡಲು ದತ್ತಾಗೆ ಸಾಧ್ಯವಾಗಿಲ್ಲ. ಇದೀಗ 588 ಕೋಟಿ ರೂಪಾಯಿ ಆಸ್ತಿಯನ್ನು ಕೊನೆಗೂ ದತ್ತಾ ಒಪ್ಪಿಕೊಂಡಿದ್ದಾರೆ. 

588 ಕೋಟಿ ರೂ ಆಸ್ತಿಗೆ ಒಂದು ರೂಪಾಯಿ ತೆರಿಗೆ ಪಾವತಿಸಬೇಕಿಲ್ಲ
ಮೋಹಿನಿ ಮೋಹನ್ ದತ್ತಾ 588 ಕೋಟಿ ರೂಪಾಯಿ ಆಸ್ತಿ ಪಡೆದಿದ್ದಾರೆ. ಆದರೆ ಒಂದು ರೂಪಾಯಿ ತೆರಿಗೆ ಪಾವತಿಸಬೇಕಿಲ್ಲ. ಕಾರಣ ವಿಲ್ ಮೂಲಕ ಪಡೆದ ಆಸ್ತಿಗೆ ಯಾವುದೇ ತೆರಿಗೆ ಪಾವತಿಸಬೇಕಿಲ್ಲ. ಈ ನಿಯಮದಿಂದ ಮೋಹಿನಿ ಮೋಹನ್ ದತ್ತಾ ತೆರಿಗೆ ಪಾವತಿಸಬೇಕಿಲ್ಲ.

ಮುಂಬೈಗೆ ಕರೆಸಿ ತಾಜ್ ನಿರ್ದೇಶಕ ಮಾಡಿದ್ದ ರತನ್ ಟಾಟಾ
ರತನ್ ಟಾಟಾ ಹಾಗೂ ಮೋಹಿನಿ ಮೋಹನ್ ದತ್ತಾ ಬಾಲ್ಯದ ಗೆಳೆಯರು. ಆದರೆ ಇದೇ ಕಾರಣದಿಂದ ಜೆಮ್‌ಶೆಡ್‌ಪುರದಲ್ಲಿದ್ದ ಮೋಹಿನಿ ಮೋಹನ್ ದತ್ತಾ ಅವರನ್ನು ಮುಂಬೈಗೆ ಕರೆಸಿದ್ದರು. ಬಳಿಕ ಮೋಹಿನಿ ಮೋಹನ್ ದತ್ತಾ ತಾಜ್ ಗ್ರೂಪ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. 2019ರ ವರೆಗೆ ಮೋಹಿನಿ ಮೋಹನ್ ದತ್ತಾ ತಾಜ್ ಗ್ರೂಪ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ರತನ್ ಟಾಟಾ ಆಪ್ತ ಸ್ನೇಹಿತನಾಗಿ, ಉದ್ಯಮದಲ್ಲಿ ಪ್ರಮುಖ ಹುದ್ದೆ ನಿರ್ವಹಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..
ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್