ವಶಪಡಿಸಿದ 200ಕೆಜಿ ಗಾಂಜಾ ಎಲ್ಲಿ? ಪೊಲೀಸ್ ಉತ್ತರಕ್ಕೆ ದಂಗಾಗಿ ಆರೋಪಿ ಖುಲಾಸೆಗೊಳಿಸಿದ ಕೋರ್ಟ್

Published : Dec 31, 2025, 08:33 PM IST
Ganja Case in Court Ranchi

ಸಾರಾಂಶ

ವಶಪಡಿಸಿದ 200ಕೆಜಿ ಗಾಂಜಾ ಎಲ್ಲಿ? ಪೊಲೀಸ್ ಉತ್ತರಕ್ಕೆ ದಂಗಾಗಿ ಆರೋಪಿ ಖುಲಾಸೆಗೊಳಿಸಿದ ಕೋರ್ಟ್, ಪೊಲೀಸ್ ಒಂದೇ ವಾಕ್ಯದ ಉತ್ತರಿಂದ ಇಡೀ ಪ್ರಕರಣವೇ ಬಿದ್ದು ಹೋಗಿದೆ. ಆರೋಪಿಗಳು ಖುಲಾಸೆಗೊಂಡಿದ್ದಾರೆ. ಅಷ್ಟಕ್ಕೂ ಪೊಲೀಸ್ ಉತ್ತರವೇನು? 

ರಾಂಚಿ (ಡಿ.31) ಪೊಲೀಸರು ವಾಹನ ತಡದು ಪರಿಶೀಲನೆ ನಡೆಸಿ ಬರೋಬ್ಬರಿ 200 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದರು. ಇದರ ಮೌಲ್ಯ ಬರೋಬ್ಬರಿ 1 ಕೋಟಿ ರೂಪಾಯಿ. ಈ ಪ್ರಕರಣದಲ್ಲಿ ಮೂವರು ಆರೋಪಿಗಳ ವಿರುದ್ದ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು. ಪ್ರಕರಣದ ವಿಚಾರಣೆ ಕಳೆದ ಕೆಲ ವರ್ಷಗಳಿಂದ ನಡೆಯುತ್ತಿದೆ. ಈ ಪ್ರಕರಣ ಸಂಬಂಧ ವಿಚಾರಣೆಗಾಗಿ ಆರೋಪಿಗಳು, ಪೊಲೀಸರು ಕೋರ್ಟ್‌ಗೆ ಹಾಜರಾಗಿದ್ದರು. ವಿಚಾರಣೆ ವೇಳೆ ನ್ಯಾಯಾಧೀಶರು, ಆರೋಪಿಗಳ ವಾಹನದಿಂದ ವಶಪಡಿಸಿಕೊಂಡ ಗಾಂಜಾ ಎಲ್ಲಿ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಪೊಲೀಸ್ ನೀಡಿದ ಉತ್ತರಕ್ಕೆ ನ್ಯಾಯಾಧೀಶರು ದಂಗಾಗಿದ್ದಾರೆ. ಇಷ್ಟೇ ಅಲ್ಲ ಈ ಉತ್ತರದಿಂದ ಪ್ರಕರಣ ಅಂತ್ಯಗೊಂಡ ಆರೋಪಿಗಳು ಖುಲಾಸೆಗೊಂಡ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.

ಹಳ್ಳ ಹಿಡಿದ ತನಿಖೆ

2022ರಲ್ಲಿ ಓರ್ಮಾಂಜಿ ಠಾಣ ವ್ಯಾಪ್ತಿಯ ಪೊಲೀಸರು ಸಿಕ್ಕಿದ ಸುಳಿವು ಆಧರಿಸಿ ವಾಹನಗಳ ತಪಾಸಣೆ ನಡೆಸಿದ್ದಾರೆ. ಈ ವೇಳೆ ಮೂವರು ಪ್ರಯಾಣಿಸುತ್ತಿದ್ದ ಬಿಳಿ ಬೊಲೆರೋ ವಾಹನದಲ್ಲಿ ಬರೋಬ್ಬರಿ 200 ಕೆಜಿ ಗಾಂಜಾ ಪತ್ತೆಯಾಗಿತ್ತು. ಆದರೆ ತಾಪಸಣೆ ವೇಳೆ ಮೂವರು ಆರೋಪಿಗಳು ಪರಾರಿಯಾಗಿದ್ದರು. ಒಂದು ತಿಂಗಳ ಬಳಿಕ ಓರ್ವ ಆರೋಪಿಯನ್ನು ಪತ್ತೆ ಹಚ್ಚಿ ಅರೆಸ್ಟ್ ಮಾಡಲಾಗಿತ್ತು. ಇತ್ತ ವಾಹನ ಹಾಗೂ ಗಾಂಜಾ ವಶಪಡಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿ ಹೆಚ್ಚಿನ ತನಿಖ ನಡೆಸಿದ್ದರು. ಬಳಿಕ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದರು.

ಪೊಲೀಸಪ್ಪನ ಉತ್ತರವೇನು?

ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ಶುರುವಾಗಿದೆ. ಆರೋಪಿಯ ಹೇಳಿಕೆ, ಸಿಕ್ಕಿರುವ ಸಾಕ್ಷ್ಯಗಳು ಎಲ್ಲಾ ತದ್ವಿರುದ್ದವಾಗಿತ್ತು. ಆರೋಪಿ ಹಾಗೂ ಪೊಲೀಸರನ್ನು ಕೋರ್ಟ್ ವಿಚಾರಣೆಗಾಗಿ ಕೋರ್ಟ್‌ ಹಾಜರಿಗೆ ಸೂಚಿಸಿತ್ತು. ಇದರಂತೆ ಕೋರ್ಟ್ ಎಲ್ಲರೂ ಆಗಮಿಸಿದ್ದರು.ವಿಚಾರಣೆ ವೇಳೆ ಹೇಳಿಕೆಗೆ ತಾಳೆಯಾಗುತ್ತಿಲ್ಲ, ಸಾಕ್ಷ್ಯಗಳು ಲಭ್ಯವಿಲ್ಲ. ಹಲವು ಗೊಂದಲಗಳಿಂದ ಕೂಡಿತ್ತು. ಹೀಗಾಗಿ ವಶಪಡಿಸಿಕೊಂಡಿರುವ ಗಾಂಜಾ ಎಲ್ಲಿ ಎಂದು ನ್ಯಾಯಾಧೀಶರು ಕೇಳಿದ್ದಾರೆ. 200ಕೆಜಿ ಗಾಂಜಾವನ್ನು ಇಲಿಗಳು ತಿಂದಿದೆ ಎಂದು ಪೊಲೀಸ್ ಉತ್ತರಿಸಿದ್ದಾರೆ.

ಆರೋಪಿಗಳ ಖುಲಾಸೆಗೊಳಿಸಿದ ಕೋರ್ಟ್

ಪೊಲೀಸ್ ಉತ್ತರಕ್ಕೆ ಕೋರ್ಟ್ ದಂಗಾಗಿದೆ. ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ ಗಾಂಜಾ ಇಲ್ಲ ಎಂದರೆ ಹೇಗೆ. ಪ್ರತಿ ಅಪರಾಧ ಪ್ರಕರಣಗಳಲ್ಲಿ ಘಟನೆಗೆ ಬಳಸಿಕೊಂಡಿರುವ, ಘಟನೆಯ ಪ್ರಮುಖ ವಸ್ತುಗಳು ಪ್ರಧಾನ. ಈ ವಸ್ತುಗಳನ್ನು ಪೊೊಲೀಸರು ವಶಪಡಿಸಿಕೊಂಡ ಸಾಕ್ಷಿಯಾಗಿ, ದಾಖಲೆಯಾಗಿ ಸಲ್ಲಿಕೆ ಮಾಡಬೇಕು. ಆದರೆ ವಶಪಡಿಸಿಕೊಂಡ ಗಾಂಡ ಇಲಿ ತಿಂದಿದೆ ಎಂದರೆ, ಇತ ಸಾಕ್ಷ್ಯಗಳು ಲಭ್ಯವಿಲ್ಲ. ಹೀಗಾಗಿ ಕೋರ್ಟ್ ಈ ಪ್ರಕರಣವನ್ನು ರದ್ದುಗೊಳಿಸಿತು. ಆರೋಪಿಗಳನ್ನು ಖುಲಾಸೆಗೊಳಿಸಿತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

90's ಕಿಡ್ಸ್ ಹೊಸ ವರ್ಷದ ರೆಸಲ್ಯೂಶನ್ ಏನಿತ್ತು? ಬಾಯ್‌ ಫ್ರೆಂಡ್ಸ್ ಬೇಕು, ಜೀನ್ಸ್ ಪ್ಯಾಂಟ್ ಹಾಕಬೇಕು...!
India’s top searches of 2025: ಭಾರತೀಯರು ಸದಾ ಯೋಚಿಸೋದು ಏನನ್ನು? ಗೂಗಲ್​ನಿಂದ A to Z ಬಹಿರಂಗ!