ರಾಮ ಮಂದಿರ ಟ್ರಸ್ಟ್ ಅಧ್ಯಕ್ಷ ನೃತ್ಯಗೋಪಾಲ ದಾಸ್‌ಗೆ ಕೊರೋನಾ!

By Suvarna News  |  First Published Aug 13, 2020, 1:18 PM IST

ರಾಮ ಮಂದಿರ ಟ್ರಸ್ಟ್ ಅಧ್ಯಕ್ಷ ನೃತ್ಯಗೋಪಾಲ ದಾಸ್‌ಗೆ ಉಸಿರಾಟ ಸಮಸ್ಯೆ| ಕೊರೋನಾ ಟೆಸ್ಟ್‌ ವರದಿಯಲ್ಲಿ ಸೋಂಕು ತಗುಲಿರುವುದು ಖಚಿತ| ಎಂಟು ದಿನದ ಹಿಂದೆ ಮೋದಿ ಜೊತೆ ಅಯೋಧ್ಯೆಯಲ್ಲಿ ವೇದಿಕೆ ಹಂಚಿಕೊಂಡಿದ್ದ ನೃತ್ಯಗೋಪಾಲ ದಾಸ್‌


ಲಕ್ನೋ(ಆ.13): ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷ ಮಹಾಂತ ನೃತ್ಯಗೋಪಾಲ ದಾಸ್‌ರವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. 

ಸದ್ಯ ಮಥುರಾದಲ್ಲಿರುವ ನೃತ್ಯಗೋಪಾಲ ದಾಸ್‌ರಿಗೆ ಉಸಿರಾಡುವ ಸಮಸ್ಯೆ ಕಂಡು ಬಂದಿದೆ, ಇದರ ಬೆನ್ನಲ್ಲೇ ಅವರಿಗೆ ಕೊರೋನಾ ಟೆಸ್ಟ್ ಮಾಡಲಾಗಿದೆ. ಸದ್ಯ ಅವರರಿಗೆ ಆಮ್ಲಜನಕ ಪೂರೈಸಲಾಗುತ್ತಿದೆ. ಆಗ್ರಾದ ಸಿಎಂಒ ಹಾಗೂ ವೈದ್ಯರು ಇವರ ಚಿಕಿತ್ಸೆಗೆ ದೌಡಾಯಿಸಿದ್ದಾರೆ.

Tap to resize

Latest Videos

ರಾಮಮಂದಿರ 1000 ವರ್ಷ ಆದರೂ ಗಟ್ಟಿಯಾಗಿರುತ್ತೆ!

ಇನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ರವರು ನೃತ್ಯಗೋಪಾಲ ದಾಸ್‌, ಅವರ ಸಮರ್ಥಕರು ಹಾಗೂ ಮಥುರಾದ ಜಿಲ್ಲಾಧಿಕಾರಿಗಲನ್ನು ಸಂಪರ್ಕಿಸಿ ಆರೋಗ್ಯದ ಕುರಿತು ಮಾತುಕತೆ ನಡೆಸಿದ್ದಾರೆ. ಜೊತೆಗೆ ಸಿಎಂ ಯೋಗಿ ಮೆದಾಂತ ಆಸ್ಪತ್ರೆಯ ವೈದ್ಯ ನರೇಶ್ ತ್ರೆಹನ್‌ರವರನ್ನೂ ಮಾತನಾಡಿದ್ದಾರೆ ಹಾಗೂ ನೃತ್ಯಗೋಪಾಲ ದಾಸ್‌ರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲು ಎಲ್ಲಾ ತಯಾರಿ ನಡೆಸಿದ್ದಾರೆ.

ಮಥುರಾದಲ್ಲಿದ್ದಾರೆ ನೃತ್ಯಗೋಪಾಲ ದಾಸ್‌

ನೃತ್ಯಗೋಪಾಲ ದಾಸ್‌ ಸದ್ಯ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಮಥುರೆಗೆ ತೆರಳಿದ್ದರು. ಆದರೆ ಈ ವೇಳೆ ಅವರ ಆರೋಗ್ಯ ಅಚಾನಕ್ಕಾಗಿ ಬಿಗಡಾಯಿಸಿದೆ. ಕೊರೋನಾ ಟೆಸ್ಟ್ ನಡೆಸಿದಾಗ ಸೋಂಕು ತಗುಲಿರುವುದು ದೃಢವಾಗಿದೆ.

ಕೆಲ ದಿನಗಳ ಹಿಂದಷ್ಟೇ ಅಯೋಧ್ಯೆಯಲ್ಲಿ ರಾಮಲಲ್ಲಾನ ಇಬ್ಬರು ಅರ್ಚಕರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅಲ್ಲದೇ ಅನೇಕ ಪೊಲೀಸ್ ಸಿಬ್ಬಂದಿಗೂ ಸೋಂಕು ತಗುಲಿತ್ತು. ಕೊರೋನಾ ಸಂಕಷ್ಟ ಪರಿಗಣಿಸಿ ರಾಮ ಮಂದಿರ ಭೂಮಿ ಪೂಜೆಗೆ ವಿಶೇಷ ತಯಾರಿ ನಡೆದಿತ್ತು. ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿತ್ತು.

ರಾಮಮಂದಿರಕ್ಕಾಗಿ ಹಿಂದು, ಮುಸ್ಲಿಮರಿಂದ 2100 ಕೆ.ಜಿ ತೂಕದ ಹಿತ್ತಾಳೆ ಗಂಟೆ!

8 ದಿನದ ಹಿಂದಷ್ಟೇ ಮೋದಿ ಜೊತೆ ವೇದಿಕೆ ಹಂಚಿಕೊಂಡಿದ್ದರು

ಇನ್ನು ಕಳೆದ ಎಂಟು ದಿನಗಳ ಹಿಂದೆ ಅಂದರೆ ಆಗಸ್ಟ್ 5 ರಂದು ನಡೆದಿದ್ದ ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ನೃತ್ಯಗೋಪಾಲ ದಾಸ್‌ ಕೂಡಾ ಭಾಗವಹಿಸಿದ್ದರು. ಭೂಮಿಪೂಜೆ, ಶಿಲಾನ್ಯಾಸ ಹಾಗೂ ವೇದಿಕೆ ಕಾರ್ಯಕ್ರಮ ಹೀಗೆ ಅಯೋಧ್ಯೆಯಲ್ಲಿ ನಡೆದಿದ್ದ ಕಾರ್ಯಕ್ರಮದುದ್ದಕ್ಕೂ ಅವರು ಪಿಎಂ ಮೋದಿ ಜೊತೆಗಿದ್ದರೆಂಬುವುದು ಉಲ್ಲೇಖನೀಯ. ಆದರೆ ಈ ವೇಳೆ ಸಾಮಾಜಿಕ ಅಂತರ ಕಾಪಾಡಲಾಗಿತ್ತು.

click me!