ರಾಮಮಂದಿರ ಪ್ರವೇಶ ದ್ವಾರದಲ್ಲಿ ಹನುಮಂತ, ಗರುಡ, ಸಿಂಹದ ಪ್ರತಿಮೆಯ ಮೆರಗು

By Sushma HegdeFirst Published Jan 5, 2024, 1:49 PM IST
Highlights

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಂತೆಯೇ ದೇಗುಲದ ಪ್ರವೇಶ ದ್ವಾರದಲ್ಲಿ ಆನೆ, ಸಿಂಹ ಹನುಮಂತ ಹಾಗೂ ಗರುಡನ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. 

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಂತೆಯೇ ದೇಗುಲದ ಪ್ರವೇಶ ದ್ವಾರದಲ್ಲಿ ಆನೆ, ಸಿಂಹ ಹನುಮಂತ ಹಾಗೂ ಗರುಡನ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಅಯೋಧ್ಯೆಯ ರಾಮಮಂದಿರಕ್ಕೆ ಹೋಗುವ ಮುಖ್ಯದ್ವಾರದಲ್ಲಿ ಆನೆಗಳು, ಸಿಂಹಗಳು, ಹನುಮಂತ ಮತ್ತು ಗರುಡನ ಅಲಂಕೃತ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ ಎಂದು ದೇವಸ್ಥಾನದ ಟ್ರಸ್ಟ್‌ನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.ರಾಜಸ್ಥಾನದ ಬನ್ಸಿ ಪಹಾರ್‌ಪುರ ಪ್ರದೇಶದಿಂದ ಬಂದ ಮರಳುಗಲ್ಲಿನಿಂದ ಈ ಪ್ರತಿಮೆಗಳನ್ನು ನಿರ್ಮಿಸಲಾಗಿದೆ.

ದೇವಸ್ಥಾನದ ಪ್ರವೇಶವು ಪೂರ್ವ ಭಾಗದಿಂದ ಮತ್ತು ದಕ್ಷಿಣ ಭಾಗದಿಂದ ನಿರ್ಗಮಿಸಲಾಗುತ್ತಿದೆ. ಇಡೀ ದೇವಾಲಯದ ಮೇಲ್ವಿಚಾರವು ಅಂತಿಮವಾಗಿ ಮೂರು ಅಂತಸ್ತಿನಾಗಿರುತ್ತದೆ. ಹಾಗೇ ದೇವಾಲಯವು 380 ಅಡಿ ಉದ್ದ (ಪೂರ್ವ-ಪಶ್ಚಿಮ), 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿದೆ ಎಂದು ತಿಳಿದು ಬಂದಿದೆ.

Latest Videos

ಇವುಗಳಲ್ಲದೆ, ದೇವಾಲಯವು ಮೂರು ಮಹಡಿಗಳನ್ನು ಹೊಂದಿರುತ್ತದೆ, ಪ್ರತಿ ಮಹಡಿಯು 20 ಅಡಿ ಎತ್ತರವಿದೆ. ದೇವಾಲಯವು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿರುತ್ತದೆ. ಮುಖ್ಯ ದೇವಾಲಯವನ್ನು ತಲುಪಲು ಪ್ರವಾಸಿಗರು ಪೂರ್ವ ಭಾಗದಿಂದ 32 ಮೆಟ್ಟಿಲುಗಳನ್ನು ಏರುತ್ತಾರೆ. ಟ್ರಸ್ಟ್ ಹಂಚಿಕೊಂಡ ಸಂದೇಶದಂತೆ, ದೇವಾಲಯದ ಮುಖ್ಯ ಗರ್ಭಗುಡಿಯಲ್ಲಿ, ರಾಮ್ ಲಲ್ಲಾನ ಬಾಲ್ಯ ವಿಗ್ರಹವಿರುತ್ತದೆ ಮತ್ತು ಮೊದಲ ಮಹಡಿಯಲ್ಲಿ ಶ್ರೀರಾಮ ದರ್ಬಾರ್ ಇರುತ್ತದೆ.

ಆನೆಗಳು, ಸಿಂಹಗಳು, ಹನುಮಂತ ಮತ್ತು ಗರುಡ ಪ್ರತಿಮೆಗಳನ್ನು ದೇವಾಲಯಕ್ಕೆ ಹೋಗುವ ಮೆಟ್ಟಿಲುಗಳ ಎರಡೂ ಬದಿಗಳಲ್ಲಿ ಜೋಡಿಸಲಾದ ಚಪ್ಪಡಿಗಳ ಮೇಲೆ ಜೋಡಿಸಲಾಗಿದೆ. ಪ್ರತಿ ಆನೆಯ ಪ್ರತಿಮೆಯು ಕೆಳಗಿನ ಕಲ್ಲುಗಳಲ್ಲಿ ಅಲಂಕರಿಸುತ್ತದೆ, ಪ್ರತಿ ಸಿಂಹದ ಪ್ರತಿಮೆಯು ಎರಡನೇ ಹಂತದಲ್ಲಿನ ಕಲ್ಲನು ಮತ್ತು, ಮೇಲಿನ ಕಲ್ಲಿನಲ್ಲಿ ಹನುಮಂತನ ಪ್ರತಿಮೆಯು ಇರುತ್ತದೆ.

ಇತರ ವೈಶಿಷ್ಟ್ಯಗಳು
ಇತರ ವೈಶಿಷ್ಟ್ಯಗಳ ಪೈಕಿ, ದೇವಾಲಯವು ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನಾ ಮತ್ತು ಕೀರ್ತನ ಮಂಟಪಗಳ ಹೆಸರಿನ ಐದು ಸಭಾಂಗಣಗಳನ್ನು ಹೊಂದಿರುತ್ತದೆ. ಹಲವಾರು ದೇವತೆಗಳು, ದೇವರುಗಳು  ವಿಗ್ರಹಗಳು ಕಂಬಗಳು ಮತ್ತು ಗೋಡೆಗಳನ್ನು ಅಲಂಕರಿಸುತ್ತವೆ.

ದೇವಾಲಯಕ್ಕೆ ಬರುವ ಭಕ್ತರು ದೇವಾಲಯದ ಪೂರ್ವ ಭಾಗದಿಂದ ಪ್ರವೇಶಿಸಿ ಸಿಂಗ್ ದ್ವಾರದ ಮೂಲಕ 32 ಮೆಟ್ಟಿಲುಗಳನ್ನು ಹತ್ತುತ್ತಾರೆ. ದೇವಸ್ಥಾನವು ವೃದ್ಧರು ಮತ್ತು ಅಂಗವಿಕಲರಿಗೆ ಇಳಿಜಾರು ಮತ್ತು ಲಿಫ್ಟ್ ಸೌಲಭ್ಯಗಳನ್ನು ಸಹ ಹೊಂದಿದೆ 

ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ದೇವಾಲಯ ಉದ್ಘಾಟನೆಯಾಗಲಿದ್ದು, ಇದಕ್ಕಾಗಿ ಈಗಾಗಲೇ ಆಹ್ವಾನಗಳನ್ನು ಕಳುಹಿಸಲಾಗಿದೆ.

click me!