
ನವದೆಹಲಿ (ಜನವರಿ 5, 2024): ಗುಜರಾತ್‌ನ ವಡ್‌ನಗರ ಪಟ್ಟಣದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಓದಿದ್ದ ಶಾಲೆಗೆ, ವಿದ್ಯಾರ್ಥಿಗಳಿಗಾಗಿ 7 ದಿನಗಳ ಅಧ್ಯಯನ ಪ್ರವಾಸದ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಆರಂಭಿಸಲಿದೆ. ವಿದ್ಯಾರ್ಥಿಗಳ ಹೆಸರು ನೋಂದಣಿಗಾಗಿ ಆನ್‌ಲೈನ್ ಪೋರ್ಟಲ್ ಅನ್ನು ಕೂಡ ಆರಂಭಿಸಲಾಗಿದ್ದು, ನೋಂದಾಯಿತ ವಿದ್ಯಾರ್ಥಿಗಳಿಗೆ ನಡೆಯುವ 3 ಹಂತದ ಸ್ಪರ್ಧೆಗಳಲ್ಲಿ ಆಯ್ಕೆಯಾದ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗುತ್ತದೆ.
ದೇಶಾದ್ಯಂತದ 9 ರಿಂದ 12 ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ ಅವಕಾಶವಿದೆ. 10 ಹುಡುಗಿಯರು ಮತ್ತು 10 ಹುಡುಗರು ಸೇರಿದಂತೆ 20 ವಿದ್ಯಾರ್ಥಿಗಳ ಬ್ಯಾಚ್ ವರ್ಷವಿಡೀ ಪ್ರತಿ ವಾರ ಈ ಪ್ರವಾಸ ಕಾರ್ಯಕ್ರಮದಲ್ಲಿ ಭಾಗವಹಿಸುತ್ತದೆ. 7 ದಿನದ ಪ್ರವಾಸದ ವೇಳೆ ಮೋದಿ ಅವರ ವಡ್‌ನಗರದ ಶಾಲೆಯಲ್ಲಿ ವಿವಿಧ ಹಂತದ ತರಬೇತಿ ಕಾರ್ಯಕ್ರಮ, ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಇದನ್ನು ಓದಿ: ಭಾರತದ ಪ್ರಗತಿ ಬಗ್ಗೆ ಚೀನಾ ಭಾರಿ ಮೆಚ್ಚುಗೆ: ಮೋದಿ ಹಣಕಾಸು, ವಿದೇಶಾಂಗ ನೀತಿಗೆ ಶ್ಲಾಘನೆ
3 ಹಂತದ ಜಿಲ್ಲಾವಾರು ಆಯ್ಕೆ
ಮೊದಲ ಹಂತದಲ್ಲಿ, ದೇಶದ ಯಾವುದೇ ಮಾನ್ಯತೆ ಪಡೆದ ಶಾಲೆಯಲ್ಲಿ 9 ರಿಂದ 12 ನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳು ತಮ್ಮ ಮಾಹಿತಿಯನ್ನು ನೀಡುವ ಮೂಲಕ https://prerana.education.gov.in ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.
ವಿದ್ಯಾರ್ಥಿಗಳು ಒದಗಿಸಿದ ವಿವರಗಳು ಮತ್ತು ಅವರ ವಿಶೇಷ ಸಾಧನೆಗಳ ಆಧಾರದ ಮೇಲೆ ಪ್ರತಿ ಜಿಲ್ಲೆಯಲ್ಲಿ 200 ವಿದ್ಯಾರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ, ಅವರಲ್ಲಿ ಶೇ.50 ಹುಡುಗಿಯರು ಇರುತ್ತಾರೆ.
ಇದನ್ನು ಓದಿ: ಲಕ್ಷದ್ವೀಪದಲ್ಲಿ ಪ್ರಧಾನಿ ಮೋದಿ ಸ್ನೋರ್ಕೆಲಿಂಗ್, ಸಮುದ್ರ ಸೌಂದರ್ಯಕ್ಕೆ ಮಂತ್ರಮುಗ್ಧ
ಎರಡನೇ ಹಂತದಲ್ಲಿ, ವಿದ್ಯಾರ್ಥಿಗಳು ಕಿರು ವಿಡಿಯೋ ರೆಕಾರ್ಡಿಂಗ್, ಪ್ರಬಂಧ/ಕವಿತೆ/ಕಥೆ ಮತ್ತು ಇತರ ಸೃಜನಶೀಲ ಅಭಿವ್ಯಕ್ತಿ (ಚಿತ್ರಕಲೆ/ವ್ಯಂಗ್ಯಚಿತ್ರ ಇತ್ಯಾದಿ) ಮುಂತಾದ ಬಹು-ಮಾದರಿಯ ಚಟುವಟಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು.
ಮೂರನೇ ಹಂತದಲ್ಲಿ, ವೈಯಕ್ತಿಕ ಸಂದರ್ಶನ, ಸಾಧನೆಗಳನ್ನು ಆಧರಿಸಿ ಇಬ್ಬರು ಮಕ್ಕಳನ್ನು (ಒಬ್ಬ ಹುಡುಗ, ಒಬ್ಬ ಹುಡುಗಿ) ಆಯ್ಕೆ ಮಾಡಲಾಗುತ್ತದೆ. ಇವರ ಜತೆಗೆ ಮೀಸಲು ಕೆಟಗರಿಯಲ್ಲಿ ಇಬ್ಬರನ್ನು ಆಯ್ಕೆ ಮಾಡಲಾಗುತ್ತದೆ.
ಇದನ್ನು ಓದಿ: ಮೋದಿ ಗ್ಯಾರಂಟಿಯೆದುರು ಬೇರಾವ ಗ್ಯಾರಂಟಿಯೂ ಇಲ್ಲ: ಕೇಂದ್ರ ಸಚಿವ ಕ್ರಿಶನ್ ಪಾಲ್
ಮಲ್ಲಿಕಾರ್ಜುನ ಖರ್ಗೆ ಕೂಡ ಮೋದಿ ಸರಿಗಟ್ಟುವ ನಾಯಕರಲ್ಲ: ಶಾಸಕ ಜಿ.ಟಿ.ದೇವೇಗೌಡ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ