ರಾಮಮಂದಿರ ನಿರ್ಮಾಣಕ್ಕೆ ಕರ್ನಾಟಕದ ಗ್ರಾನೈಟ್‌!

By Kannadaprabha NewsFirst Published Sep 23, 2021, 7:33 AM IST
Highlights

* ರಾಮಮಂದಿರ ಅಡಿಪಾಯ ನಿರ್ಮಾಣ ಪೂರ್ಣ

* ರಾಮಮಂದಿರ ನಿರ್ಮಾಣಕ್ಕೆ ಕರ್ನಾಟಕದ ಗ್ರಾನೈಟ್‌

* ಪ್ಲಿಂಥ್‌ಗೆ ಕೊಳ್ಳೇಗಾಲದಿಂದ ಕಪ್ಪು ಗ್ರಾನೈಟ್‌ ರವಾನೆ

ಅಯೋಧ್ಯೆ(ಸೆ.23): ರಾಮಮಂದಿರ(Ram Mandir) ಅಡಿಪಾಯ ನಿರ್ಮಾಣದ ನಂತರ ದೇವಸ್ಥಾನದ ಎರಡನೇ ಹಂತದ ನಿರ್ಮಾಣ ಕಾರ್ಯಗಳಿಗೆ ಮಂಗಳವಾರ ಚಾಲನೆ ನೀಡಲಾಗಿದೆ.

ಈ ಹಂತದಲ್ಲಿ ದೇವಸ್ಥಾನದ ಪ್ಲಿಂಥ್‌ ನಿರ್ಮಾಣಕ್ಕೆ ಕರ್ನಾಟಕ ಚಾಮರಾಜನಗರದ(Chamarajanagar) ಕೊಳ್ಳೆಗಾಲ ಪ್ರದೇಶದ ಕಪ್ಪು ಗ್ರಾನೈಟ್‌ ಕಲ್ಲನ್ನು ಬಳಸಲಾಗುತ್ತಿದೆ. ಇದರ ಅಕ್ಕಪಕ್ಕದಲ್ಲಿ ಮಿರ್ಜಾಪುರದ ಕಲ್ಲುಗಳು ಮತ್ತು ರಾಜಸ್ಥಾನದ ಗುಲಾಬಿ ಬಣ್ಣದ ಕಲ್ಲುಗಳಲ್ಲಿ ಶಿಲ್ಪಗಳನ್ನು ಕೆತ್ತಲಾಗುತ್ತಿದೆ.

‘ಈಗಾಗಲೇ ಕೊಳ್ಳೆಗಾಲ ಮತ್ತು ಮಿರ್ಜಾಪುರಗಳಿಂದ ಕಲ್ಲುಗಳ ಪೂರೈಕೆ ಆರಂಭವಾಗಿದೆ. ಭಾರತಾದ್ಯಂತ ವಿಎಚ್‌ಪಿ 2 ಲಕ್ಷ ಇಟ್ಟಿಗೆಗಳನ್ನು ದೇವಸ್ಥಾನಕ್ಕಾಗಿ ಸಂಗ್ರಹ ಮಾಡಿದೆ. 1989ರಿಂದ ಭಕ್ತರು ದೇವಸ್ಥಾನ ನಿರ್ಮಾಣಕ್ಕೆ 3 ಲಕ್ಷಕ್ಕೂ ಇಟ್ಟಿಗೆಗಳನ್ನು ನೀಡಿದ್ದಾರೆ ಈಗ ಇವುಗಳನ್ನು ದೇವಸ್ಥಾನ ನಿರ್ಮಾವಾಗುತ್ತಿರುವ ಸ್ಥಳಕ್ಕೆ ಸಾಗಿಸಲಾಗುತ್ತಿದೆ ಎಂದು ರಾಮ ಜನ್ಮ ಭೂಮಿ ಟ್ರಸ್ಟ್‌ನ(Ram Janmbhumi Trust) ಸದಸ್ಯ ಅನಿಲ್‌ ಮಿಶ್ರಾ ಹೇಳಿದ್ದಾರೆ.

click me!