ಅತಿದೊಡ್ಡ ಮತಾಂತರ ದಂಧೆ ಪತ್ತೆ: ಇಸ್ಲಾಂಮಿಕ್‌ ವಿದ್ವಾಂಸ ಕಲೀಂ ಸಿದ್ಧಿಕಿ ಬಂಧನ!

By Kannadaprabha NewsFirst Published Sep 23, 2021, 7:27 AM IST
Highlights

* ವಿದೇಶಗಳಿಂದ ದೇಣಿಗೆ ಪಡೆದ ಲಕ್ಷಾಂತರ ಜನರ ಮತಾಂತರ

* ಅತಿದೊಡ್ಡ ಮತಾಂತರ ದಂಧೆ ಪತ್ತೆ

* ಉತ್ತರಪ್ರದೇಶದ ಇಸ್ಲಾಂಮಿಕ್‌ ವಿದ್ವಾಂಸ ಕಲೀಂ ಸಿದ್ಧಿಕಿ ಬಂಧನ

ಲಖನೌ(ಸೆ.23): ಮತಾಂತರ(Religious Conversion) ವಿಷಯ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿರುವ ಹೊತ್ತಿನಲ್ಲೇ, ಉತ್ತರಪ್ರದೇಶದ(Uttar Pradesh) ಅತಿದೊಡ್ಡ ಧಾರ್ಮಿಕ ಮತಾಂತರ ದಂಧೆಯೊಂದನ್ನು ಪತ್ತೆ ಹಚ್ಚಿರುವುದಾಗಿ ರಾಜ್ಯದ ಭಯೋತ್ಪಾದನಾ ನಿಗ್ರಹ ಪಡೆ ಘೋಷಿಸಿದೆ. ಅಲ್ಲದೆ ಈ ಸಂಬಂಧ ಇಸ್ಲಾಂಮಿಕ್‌ ವಿದ್ವಾಂಸ ಮೌಲಾನಾ ಕಲೀಮ್‌ ಸಿದ್ಧಿಕಿ (Maulana Kaleem Siddiqui ) ಎಂಬಾತನನ್ನು ಮಂಗಳವಾರ ರಾತ್ರಿ ಮೇರಠ್‌(Meerut)ನಲ್ಲಿ ಬಂಧಿಸಿರುವುದಾಗಿ ತಿಳಿಸಿದೆ.

ಬಂಧಿತ ಸಿದ್ಧಿಕಿ ತನ್ನ ಟ್ರಸ್ಟ್‌, ಎನ್‌ಜಿಒಗಳಿಗೆ ವಿದೇಶಗಳಿಂದ ಭಾರೀ ಪ್ರಮಾಣದ ದೇಣಿಗೆ ಸಂಗ್ರಹಿಸುತ್ತಿದ್ದ. ಬಳಿಕ ಆ ಹಣವನ್ನು ಲಕ್ಷಾಂತರ ಜನರನ್ನು ಇಸ್ಲಾಂಗೆ ಮತಾಂತರ ಮಾಡಲು ಬಳಸುತ್ತಿದ್ದ ಎಂಬ ವಿಷಯ ತಿಳಿದುಬಂದಿದೆ ಎಂದು ಎಟಿಎಸ್‌ ಮಹಾ ನಿರ್ದೇಶಕ ಜಿ.ಕೆ.ಗೋಸ್ವಾಮಿ ತಿಳಿಸಿದ್ದಾರೆ.

Latest Videos

ಯಾರು ಈ ಸಿದ್ದಿಕಿ

ಈಗ ಮುಜಫ್ಫರ್‌ ಜಿಲ್ಲೆಯ ನಿವಾಸಿ. ಬಿಎಸ್‌ಇ ಪದವೀಧರ. ಇಸ್ಲಾಮಿಕ ವಿಧ್ವಾಂಸನಾಗಿರುವ ಈತ ಜಾಮಿಯಾ ಇಮಾಮ್‌ ವಲ್ಲಿಯುಲ್ಲಾ ಟ್ರಸ್ಟ್‌ ಮತ್ತು ಹಲವು ಎನ್‌ಜಿಒಗಳನ್ನು ನಡೆಸುತ್ತಿದ್ದಾನೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಅತ್ಯಂತ ಪ್ರಭಾವಿ ಇಸ್ಲಾಮಿಕ್‌ ಧಾರ್ಮಿಕ ನಾಯಕ.

ಮತಾಂತರ ಹೇಗೆ?

ಈತ ತನ್ನ ಟ್ರಸ್ಟ್‌ಗಳಿಗೆ ವಿದೇಶಗಳಿಂದ ಕೋಟ್ಯಂತರ ರು. ದೇಣಿಗೆ ಸಂಗ್ರಹಿಸುತ್ತಿದ್ದ. ದಾರುಲ್‌ ಉಲೂಂ ಸೇರಿದಂತೆ ಹಲವು ದೇಶಿ ಮತ್ತು ವಿದೇಶಿ ಸಂಸ್ಥೆಗಳು ಈತನಿಗೆ ದೇಣಿಗೆ ನೀಡುತ್ತಿದ್ದವು. ಈತನ ಸಂಗಡಿಗರು ಕೆಳವರ್ಗದ ಬಡ ಹಿಂದೂಗಳನ್ನು ಗುರುತಿಸಿ ಅವರಿಗೆ ಆಮಿಷ ಒಡ್ಡಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದರು. ಇದಕ್ಕಾಗಿ ಹಲವು ಮದ್ರಸಾಗಳಿಗೆ ಭಾರೀ ಪ್ರಮಾಣದಲ್ಲಿ ಹಣವನ್ನು ನೀಡಲಾಗುತ್ತಿತ್ತು. ಉತ್ತರಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ, ಪಂಜಾಬ್‌, ಹರ್ಯಾಣ, ಒಡಿಶಾ ಸೇರಿ ಹಲವು ರಾಜ್ಯಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಜನರನ್ನು ಈತ ಇಸ್ಲಾಂಗೆ(Islam) ಮತಾಂತರ ಮಾಡಿರುವ ಶಂಕೆ ಇದೆ.

ಪತ್ತೆ ಹೇಗೆ

ಮೂಗ ಮತ್ತು ಕಿವುಡ ಮಕ್ಕಳನ್ನು ಇಸ್ಲಾಂಗೆ ಮತಾಂತರ ಮಾಡುವ ದಂಧೆಯೊಂದು ಕಳೆದ ಜೂನ್‌ನಲ್ಲಿ ಪತ್ತೆಯಾಗಿತ್ತು. ಆ ಪ್ರಕರಣದಲ್ಲಿ ಉಮರ್‌ ಗೌತಮ್‌ ಸೇರಿದಂತೆ ಹಲವರನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು. ಇವರಿಗೂ ವಿದೇಶಗಳಿಂದ ಕೋಟ್ಯಂತರ ಹಣ ಮತಾಂತರಕ್ಕೆ ರವಾನೆಯಾಗಿತ್ತು. ವಿಚಾರಣೆ ವೇಳೆ ಆತ ಸಿದ್ಧಿಕಿ(Maulana Kaleem Siddiqui) ಹೆಸರು ಬಹಿರಂಗಪಡಿಸಿದ್ದ. ಅಂದಿನಿಂದ ಸಿದ್ಧಿಕಿ, ಆತನ ಚಲನವಲನ, ಹಣಕಾಸು ಚಟುವಟಿಕೆ ಮೇಲೆ ಎಟಿಎಸ್‌ ಕಣ್ಣಿಟ್ಟಿತ್ತು. ರಹಸ್ಯ ತನಿಖೆಯಲ್ಲಿ ಆತನ ವ್ಯವಸ್ಥಿತ ಮತ್ತು ಸಂಘಟಿತ ಮತಾಂತರ ದಂಧೆ ಖಚಿತಪಟ್ಟ ಹಿನ್ನೆಲೆಯಲ್ಲಿ ಮಂಗಳವಾರ ಆತನನ್ನು ಮೇರಠ್‌ನಲ್ಲಿ ಬಂಧಿಸಲಾಯ್ತು.

click me!