ರೇಷ್ಮೆ ಧೋತಿ, ಕುರ್ತಾ ಧರಿಸಿ ರಾಮಜನ್ಮ ಭೂಮಿ ಅಯೋಧ್ಯೆಯತ್ತ ಮೋದಿ!

By Suvarna NewsFirst Published Aug 5, 2020, 11:13 AM IST
Highlights

ರಾಮ ಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ| ಶಿಲಾನ್ಯಾಸ ನಡೆಸಲಿದ್ದಾರೆ ಪಿಎಂ ಮೋದಿ| ರೇಷ್ಮೆ ಧೋತಿ, ಕುರ್ತಾ ಧರಿಸಿ ರಾಮಜನ್ಮ ಭೂಮಿ ಅಯೋಧ್ಯೆಯತ್ತ ಮೋದಿ!

ನವದೆಹಿ(ಆ.05): ಪ್ರಧಾನಿ ನರೇಂದ್ರ ಮೋದಿ ಇಂದು ರಾಮ ಮಂದಿರ ಭೂಮಿ ಪೂಜೆಯ ಶಿಲಾನ್ಯಾಸ ನಡೆಸಲಿದ್ದಾರೆ. ಪ್ರಧಾನಿ ಮೋದಿ ರಾಜಧಾನಿ ದೆಹಲಿಯಿಂದ ಲಕ್ನೋಗೆ ಪ್ರಯಾಣ ಆರಂಭಿಸಿದ್ದಾರೆ. ಸಾಮಾನ್ಯವಾಗಿ ಕಾದಿ ಉಡುಪು ಚೂಡಿದಾರ್ ಪೈಜಾಮಾ ಹಾಗೂ ಕುರ್ತಾ ಧರಿಸುವ ನರೇಂದ್ರ ಮೋದಿ ಇಂದಿನ ಐತಿಹಾಸಿಕ ಕಾರ್ಯಕ್ರಮಕ್ಕೆ ರೇಷ್ಮೆಯ ಧೋತಿ ಹಾಗೂ ಬಂಗಾರ ಬಣ್ಣದ ಕುರ್ತಾ ಧರಿಸಿದ್ದಾರೆ. ಬೆಳಗ್ಗೆ 11.30ರ ವೇಳೆಗೆ ಅವರು ಶ್ರೀರಾಮನ ಜನ್ಮಭೂಮಿ ಅಯೋಧ್ಯೆಗೆ ತಲುಪಲಿದ್ದಾರೆ.

ಇಂದು ಅಯೋಧ್ಯೆಯಲ್ಲಿ ಏನೇನು ಕಾರ್ಯಕ್ರಮ? ಇಲ್ಲಿದೆ ವೇಳಾಪಟ್ಟಿ

ಎಲ್ಲರನ್ನೂ ಅಚ್ಚರಿಗೀಡು ಮಾಡಿದ ಪ್ರಧಾನಿ ಮೋದಿ ಡ್ರೆಸ್ ಕೋಡ್

ಸಾಮಾನ್ಯವಾಗಿ ಚೂಡಿದಾರ್ ಪೈಜಾಮಾ ಹಾಗೂ ಕುರ್ತಾ ಧರಿಸುವ ಮೋದಿಯ ಇಂದಿನ ಡ್ರೆಸ್ ಕೋಡ್ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ಪೀತಾಂಬರಿ ಧೋತಿ ಹಾಗೂ ಗೋಲ್ಡನ್ ಬಣ್ಣದ ಕುರ್ತಾ ಧರಿಸಿದ ಮೋದಿ ವಿಶೇಷ ವಿಮಾನದ ಮೂಲಕ ಪ್ರಯಾಣ ಆರಂಭಿಸಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಮೋದಿ ವಿಶೇಷ ಉಡುಪನ್ನೇ ಧರಿಸಿದ್ದಾರೆ. ಹಿಂದೂ ಧರ್ಮದಲ್ಲಿ ಬಂಗಾರ ಹಾಗೂ ಪೀತಾಂಬರ ಬಣ್ಣ ಬಹಳ ಶುಭವಾದದ್ದು ಎಂದು ಪರಿಗಣಿಸಲಾಗುತ್ತದೆ. ಹೀಗಿರುವಾಗ ಮೋದಿ ಧರಿಸಿರುವ ಉಡುಪನ್ನೂ ಇದರೊಂದಿಗೆ ಹೋಲಿಸಲಾಗುತ್ತಿದೆ.

ರಾಮಮಂದಿರ ನಿರ್ಮಾಣದ ಹೆಜ್ಜೆಗುರುತುಗಳು

"

 

click me!