ಆಯೋಧ್ಯೆ ರಾಮ ಮಂದಿರದ ಗರ್ಭ ಗುಡಿಯಲ್ಲಿ ರಾಮಲಲ್ಲಾ ವಿಗ್ರಹವನ್ನು ಇಂದು ಪ್ರತಿಷ್ಠಾಪಿಸಲಾಗಿದೆ. ಸತತ 4 ಗಂಟೆಗಳ ಕಾಲ ಅರ್ಚರು, ಹಿರಿಯ ಸಂತರ ಮಾರ್ಗದರ್ಶನದಂತೆ ವಿಗ್ರಹ ಪ್ರತಿಷ್ಠಾಪನೆ ನಡೆದಿದೆ. ಗರ್ಭ ಗುಡಿ ಹೊರಗಡೆ UPSSF ಭದ್ರತಾ ಪಡೆ ನಿಯೋಜಿಸಲಾಗಿದ್ದು, ಸಂಪೂರ್ಣವಾಗಿ ಮೊಬೈಲ್ ಬಳಕೆ ನಿಷೇಧಿಸಿದೆ.
ಆಯೋಧ್ಯೆ(ಜ.18) ಭವ್ಯ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ರಾಮ ಮಂದಿರದಲ್ಲಿ ಪೂಜಾ ಕೈಂಕರ್ಯಗಳು ಈಗಾಗಲೇ ಆರಂಭಗೊಂಡಿದೆ. ಇಂದು ರಾಮ ಮಂದಿರ ಗರ್ಭಗುಡಿಯಲ್ಲಿ ಶ್ರೀ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ. 4 ಗಂಟೆಗಳಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಸದ್ಯ ವಿಗ್ರಹದ ಕಣ್ಣು ಜೊತೆಗೆ ಸಂಪೂರ್ಣ ವಿಗ್ರಹವನ್ನು ಮುಚ್ಚಲಾಗಿದೆ. ಇಷ್ಟೇ ಅಲ್ಲ ಗರ್ಭಗುಡಿಯ ಹೊರಭಾಗದಲ್ಲಿ ಉತ್ತರ ಪ್ರದೇಶದ ಸ್ಪೆಷಲ್ ಸೆಕ್ಯೂರಿಟಿ ಫೋರ್ಸ್( UPSSF) ಪಡೆ ನಿಯೋಜಿಸಲಾಗಿದೆ. ಯಾರೂ ಕೂಡ ಅನುಮತಿ ಇಲ್ಲದೆ ಯಾರೂ ಕೂಡ ಗರ್ಭಗುಡಿ ಪ್ರವೇಶಿಸುವಂತಿಲ್ಲ. ಇಷ್ಟೇ ಅಲ್ಲ ಗರ್ಭಗುಡಿ ಹೊರಭಾಗದಿಂದ ಶ್ರೀರಾಮಲಲ್ಲಾ ವಿಗ್ರಹದ ಪೋಟೋಗಳನ್ನು ತೆಗೆಯುವಂತಿಲ್ಲ. ಹೀಗಾಗಿ ಮೊಬೈಲ್ ಸಂಪೂರ್ಣ ನಿಷೇಧಿಸಲಾಗಿದೆ.
ಇಂದು ಪ್ರತಿಷ್ಠಾಪಿಸಿರುವ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠೆ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ನೇರವೇರಿಸಲಿದ್ದಾರೆ. 12.30ಕ್ಕೆ ಪ್ರಾಣಪ್ರತಿಷ್ಠೆ ನಡೆಯಲಿದೆ. ಸದ್ಯ ರಾಮಲಲ್ಲಾ ಮೂರ್ತಿಯನ್ನು ಶುಭ್ರ ಬಟ್ಟೆಯಿಂದ ಮುಚ್ಚಲಾಗಿದೆ. ಆದರೆ ಪ್ರತಿ ದಿನ ಈ ಬಟ್ಟೆ ಬದಲಿಸಲಾಗುತ್ತದೆ. ಪ್ರತಿ ದಿನ 5 ಆರತಿಯನ್ನು ಶ್ರೀ ರಾಮಲ್ಲಾಗೆ ಮಾಡಲಾಗುತ್ತದೆ.
ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಕೇಂದ್ರ ಸರ್ಕಾರದ ಗಿಫ್ಟ್, ಅರ್ಧ ದಿನ ರಜೆ ಘೋಷಣೆ!
ಅರ್ಚಕರು, ಹಿರಿಯರ ಮಾರ್ಗದರ್ಶನದಂತೆ ರಾಮಲಲ್ಲಾ ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಸಂಪೂರ್ಣವಾಗಿ ಮೊಬೈಲ್ ನಿಷೇಧಿಸಲಾಗಿದೆ. ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ನಡೆಯುತ್ತಿರುವ ಪೂಜಾ ಕೈಂಕರ್ಯಗಳು ನಡೆಯುತ್ತಿದೆ. ಜನವರಿ 22ರಂದು ಪ್ರಧಾನಿ ಮೋದಿ, ಅರ್ಚಕರು ಸೇರಿದಂತೆ ಇತರರು ಪ್ರಾಣಪ್ರತಿಷ್ಠೆ ನೆರವೇರಿಸಲಿದ್ದಾರೆ ಎಂದು ಟ್ರಸ್ಟ್ ಸದಸ್ಯರು ಹೇಳಿದ್ದಾರೆ.
ಬುಧವಾರ(ಜ.17) ರಂದು ವಿಗ್ರಹ ಕೆತ್ತನೆ ಸ್ಥಳದಿಂದ ಕ್ರೇನ್ ಮೂಲಕ ರಾಮ ಲಲ್ಲಾ ವಿಗ್ರಹವನ್ನು ಶೃಂಗರಿಸಲಾದ ಟ್ರಕ್‌ಗೆ ಸ್ಥಳಾಂತರಿಸಿ ರಾಮಮಂದಿರ ಆವರಣಕ್ಕೆ ತರಲಾಗತ್ತು.ಬಳಿಕ ಮತ್ತೆ ಕ್ರೇನ್ ಬಳಸಿ ವಿಗ್ರಹವನ್ನು ಟ್ರಕ್‌ನಿಂದ ಕೆಳಗಿಳಿಸಿ ಮಂತ್ರಘೋಷಗಳ ನಡುವೆ ದೇಗುಲದೊಳಕ್ಕೆ ಕೊಂಡೊಯ್ಯಲಾಗಿತ್ತು. ಈ ವೇಳೆ ವಿಗ್ರಹದ ದರ್ಶನಕ್ಕೆ ಯಾರಿಗೂ ಅವಕಾಶ ನೀಡಿಲ್ಲ. ಟರ್ಪಾಲಿನ್ ಹುಡ್ ಇರುವ ಲಾರಿಯಲ್ಲಿ ಮೂರ್ತಿಯನ್ನು ಇರಿಸಿ ಅದರ ಕಣ್ಣಿಗೆ ಬಟ್ಟೆ ಕಟ್ಟಿ ಯಾರೂ ಅದನ್ನು ನೋಡದಂತೆ ಮಂದಿರ ಆವರಣಕ್ಕೆ ಸ್ಥಳಾಂತರಿಸಲಾಗಿತ್ತು ಜ.22ರಂದೇ ಕಣ್ಣಿಗೆ ಕಟ್ಟಿದ ಬಟ್ಟೆ ಬಿಚ್ಚಿ ಸಾರ್ವಜನಿಕ ದರ್ಶನ ಮಾಡಿಸಲಾಗುವುದು ಎಂದು ಟ್ರಸ್ಟ್ ಹೇಳಿದೆ.