ಪ್ರಧಾನಿ ಸಿಂಗ್ ಕೈಕುಲುಕಿ ಆತಿಥ್ಯ ಸ್ವೀಕರಿಸಿದ ಉಗ್ರ ಯಾಸಿನ್ ಮಲಿಕ್‌ಗೆ ಸಂಕಷ್ಟ, 1990ರ ಹತ್ಯೆ ಸಾಕ್ಷಿ ಲಭ್ಯ!

By Suvarna NewsFirst Published Jan 18, 2024, 5:44 PM IST
Highlights

ಪ್ರಧಾನಿ ಮನ್‌ಮೋಹನ್ ಸಿಂಗ್ ಕೈಕುಲುಕಿ ಆತಿಥ್ಯ ಸ್ವೀಕರಿಸಿದ ಯಾಸಿನ್ ಮಲಿಕ್‌ಗೆ ಇದೀಗ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಯುಪಿಎ ಸರ್ಕಾರದಲ್ಲಿ ಆತಿಥ್ಯದ ಮೇಲೆ ಆತಿಥ್ಯ, ಗೌರವದ ಮೇಲೆ ಗೌರವ ಸ್ವೀಕರಿಸಿದ ಉಗ್ರ ಯಾಸಿನ್ ಮಲಿಕ್ ಜೈಲು ಪಾಲಾಗಿ ವರ್ಷಗಳೇ ಉರುಳಿದೆ. ಉಗ್ರ ಚಟುವಟಿಕೆ, ಉಗ್ರರಿಗೆ ನೆರವು, ಹಣ ದುರ್ಬಳಕೆ ಸೇರಿದಂತೆ ಹಲವು ಆರೋಪಗಳು ಯಾಸಿನ್ ಮಲಿಕ್ ಜೈಲು ಕುಣಿಕೆಯನ್ನು ಬಿಗಿಗೊಳಿಸಿದೆ. ಇದೀಗ ಇದೇ ಯಾಸಿನ್ ಮಲಿಕ್ ವಿರುದ್ಧ ವಾಯುಸೇನೆಯ ಹಿರಿಯ ಅಧಿಕಾರಿ ಸಾಕ್ಷಿ ನುಡಿದಿದ್ದಾರೆ. 
 

ನವದೆಹಲಿ(ಜ.18) ಭಯೋತ್ಪಾದನೆಗೆ ನಿಧಿ ಸಂಗ್ರಹಿಸಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಉಗ್ರ ಯಾಸಿನ್ ಮಲಿಕ್‌ಗೆ ಸಂಕಷ್ಟ ಹೆಚ್ಚಾಗಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಪ್ರಧಾನಿ ಮನ್‌ಮೋಹನ್ ಸಿಂಗ್ ಕೈ ಕುಲುಕಿ, ಆತಿಥ್ಯ ಸ್ವೀಕರಿಸಿದ್ದ ಇದೇ ಉಗ್ರ ಯಾಸಿನ್ ಮಲಿಕ್ ಇದೀಗ ಹಲವು ಭಯೋತ್ಪಾದಕ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾನೆ. ಇದೀಗ ಯಾಸಿನ್ ಮಲಿಕ್ ಮೇಲಿನ ಪ್ರಕರಣವೊಂದಕ್ಕೆ ಪ್ರಬಲ ಸಾಕ್ಷ್ಯವೊಂದು ಸಲ್ಲಿಕೆಯಾಗಿದೆ. 1990ರಲ್ಲಿ ಭಾರತೀಯ ವಾಯುಸೇನಾ ಅಧಿಕಾರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಯಾಸಿನ್ ಮಲಿಕ್‌ನನ್ನು ಪ್ರತ್ಯಕ್ಷ ಸಾಕ್ಷಿದಾರ, ನಿವೃತ್ತಿ ವಾಯುಸೇನಾ ಅಧಿಕಾರಿ ಗುರುತಿಸಿದ್ದಾರೆ.

ಜನವರಿ 25, 1990ರಲ್ಲಿ ಶ್ರೀನಗರದ ಹೊರವಲಯಲ್ಲಿ ವಾಯುಸೇನಾ ಅಧಿಕಾರಿ ರವಿ ಖಾನ್ ಹಾಗೂ ಇತರ ಮೂವರ ಮೇಲೆ ಉಗ್ರ ಯಾಸಿನ್ ಮಲಿಕ್ ಗುಂಡಿನ ದಾಳಿ ನಡೆಸಿದ್ದ. ಜಮ್ಮು ಕಾಶ್ಮೀರ ಲಿಬರೇಷನ್‌ ಫ್ರಂಟ್‌ (ಜೆಕೆಎಲ್‌ಎಫ್‌) ಉಗ್ರ ಸಂಘಟನೆ ಮುಖ್ಯಸ್ಥ ಯಾಸಿನ್ ಮಲಿಕ್ ಹಾಗೂ ಆತನ ಜೊತೆಗಿತ್ತ ಇತರರ ಉಗ್ರರು ರಾವಲ್ಪೋರದಲ್ಲಿ ವಾಯುಸೇನಾ ಅಧಿಕಾರಿಗಳು ಮೇಲೆ ಭಯೋತ್ಪಾದಕ ದಾಳಿ ನಡೆಸಿದ್ದ. ಈ ದಾಳಿಯಲ್ಲಿ ನಾಲ್ವರು ವಾಯುಸೇನಾ ಅಧಿಕಾರಿಗಳು ಮೃತಪಟ್ಟಿದ್ದರೆ. 22 ಮಂದಿ ತೀವ್ರವಾಗಿ ಗಾಯಗೊಂಡಿದ್ದರು.

ಪಾಕಿಸ್ತಾನ ಸರ್ಕಾರದಲ್ಲಿ ಸಚಿವೆಯಾದ ಭಯೋತ್ಪಾದಕ ಯಾಸಿನ್‌ ಮಲೀಕ್‌ ಪತ್ನಿ!

1990ರಲ್ಲಿ ಯಾಸಿನ್ ಮಲಿಕ್ ಬಂಧನವಾಗಿ ಚಾರ್ಚ್‌ಶೀಟ್ ಕೂಡ ಸಲ್ಲಿಕೆಯಾಗಿತ್ತು. ಆದರೆ ರಾಜಕೀಯ ಒತ್ತಡ, ಕಾಶ್ಮೀರ ವಿಚಾರ ಸೇರಿ ಹಲವು ಕಾರಣಗಳಿಂದ ಕೇಸ್ ತಣ್ಣಗಾಯಿತು. ಇತ್ತ ಯಾಸಿನ್ ಮಲಿಕ್ ಜೈಲಿನಿಂದ ಬಿಡುಗಡೆಯಾಗಿದ್ದ. ಇದೀಗ ಜೈಲಿನಲ್ಲಿ ಕೊಳೆಯುತ್ತಿರುವ ಯಾಸಿನ್ ಮಲಿಕ್ ವಿರುದ್ದ ಹಳೇ ಕೇಸ್‌ಗಳೆಲ್ಲಾ ಜೀವ ಪಡೆದುಕೊಂಡಿದೆ. 

1990ರ ಉಗ್ರ ದಾಳಿ ಕುರಿತು ವಿಚಾರಣೆ ವೇಳೆ ತಿಹಾರ್ ಜೈಲಿನಿಂದ ವರ್ಚುಲ್ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಯಾಸಿನ್ ಮಲಿಕ್‌‌ನನ್ನು ಈ ಘಟನೆ ವೇಳೆ ಸ್ಥಳದಲ್ಲಿದ್ದ ಪ್ರತ್ಯಕ್ಷ ಸಾಕ್ಷಿದಾರ, ವಾಯುಸೇನಾ ಅದಿಕಾರಿ ಉಮೇಶ್ವರ್ ಸಿಂಗ್ ಗುರುತಿಸಿದ್ದಾರೆ. ಸ್ಪೆಷಲ್ ಕೋರ್ಟ್‌ಗೆ ಹಾಜರುಪಡಿಸುವ ಮೂದಲು ವೀಡಿಯೋ ಕಾನ್ಫರೆನ್ಸ್ ಆಯೋಜಿಸಲಾಗಿತ್ತು. ಈ ವೇಳೆ ಪ್ರತ್ಯಕ್ಷ ಸಾಕ್ಷಿದಾರ ಉಮೇಶ್ವರ್ ಸಿಂಗ್, ಯಾಸಿನ್ ಮಲಿಕ್ ಗುರುತಿಸಿದ್ದಾರೆ. ಈತನೇ ಹತ್ಯೆ ಮಾಡಿರುವ ಘಟನೆಯನ್ನೂ ವಿವರಿಸಿದ್ದಾರೆ.

 

 

ಉಗ್ರ ಯಾಸಿನ್‌ಗೆ ಶಿಕ್ಷೆಯಾದರೆ ಭಾರತದ ವಿರುದ್ಧ ಘೋಷಣೆ, ಭಯೋತ್ಪಾದಕರಿಗೆ ಬಹುಪರಾಕ್

ಜೆಕೆಎಲ್‌ಎಫ್‌ ಮುಖ್ಯಸ್ಥನಾಗಿರುವ ಮಲಿಕ್‌ ಭಯೋತ್ಪಾದನೆಗೆ ನಿಧಿ ಸಂಗ್ರಹಿಸಿದ್ದ, ಭಯೋತ್ಪಾದನೆ, ದೇಶದ್ರೋಹ ಮತ್ತು ಭಾರತ ಸರ್ಕಾರದ ವಿರುದ್ಧ ಯುದ್ಧಕ್ಕೆ ನಿಂತ ವಿವಿಧ ಆರೋಪಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ ಹಾಗೂ ವಿವಿಧ ಐಪಿಸಿ ಸೆಕ್ಷನ್‌ಗಳಡಿಯಲ್ಲಿ ಅಪರಾಧಿ ಎಂದು ಸಾಬೀತಾಗಿದೆ. 
 

click me!