
ನವದೆಹಲಿ(ಫೆ.05) ದೆಹಲಿ ಅಬಕಾರಿ ಹಗರಣದಲ್ಲಿ ಜೈಲುಪಾಲಾಗಿರುವ ಆಮ್ ಆದ್ಮಿ ಸಂಸದ ಸಂಜಯ್ ಸಿಂಗ್ ಇತ್ತೀಚೆ ರಾಜ್ಯಸಭೆಗೆ ಪುನರ್ ಆಯ್ಕೆಯಾಗಿದ್ದರು. ಇಂದು ಪ್ರಮಾಣವಚನ ಸ್ವೀಕರಿಸಲು ಸಂಜಯ್ ಸಿಂಗ್ ಕೋರ್ಟ್ ಅನುಮತಿ ಪಡೆದ ರಾಜ್ಯಸಭೆಗೆ ಆಗಮಿಸಿದ್ದರು. ಆದರೆ ಸಂಜಯ್ ಸಿಂಗ್ ಪ್ರಮಾಣವಚನವನ್ನು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ತಡೆದಿದ್ದಾರೆ. ಸದನದ ಸಮಿತಿ ಸಂಜಯ್ ಸಿಂಗ್ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಭಾದ್ಯತೆಗಳ ಕುರಿತು ತನಿಖೆ ನಡೆಸುತ್ತಿದೆ. ಈ ಸಮಿತಿ ವರದಿ ಬಳಿಕ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಜಗದೀಪ್ ಧನ್ಕರ್ ಹೇಳಿದ್ದಾರೆ
ರಾಜ್ಯಸಭಾ ಅಧ್ಯಕ್ಷ ಪೀಠಕ್ಕೆ ಅಗೌರವ ತೋರಿದ ಸಂಜಯ್ ಸಿಂಗ್ ಅವರನ್ನು 2023ರ ಜುಲೈ ತಿಂಗಳಲ್ಲಿ ರಾಜ್ಯಸಭೆಯಿಂದ ಅಮಾನತು ಮಾಡಲಾಗಿತ್ತು. ಇದಾದ ಬಳಿಕ ದೆಹಲಿಯ ಅಬಕಾರಿ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಸಂಜಯ್ ಸಿಂಗ್ ಅವರನ್ನು ಬಂಧಿಸಿದೆ. ಸದ್ಯ ಜೈಲು ಪಾಲಾಗಿರುವ ಸಂಜಯ್ ಸಿಂಗ್ ಕೋರ್ಟ್ ಅನುಮತಿ ಪಡೆದು ಪ್ರಮಾಣವಚನಕ್ಕೆ ಆಗಮಿಸಿದ್ದರು.
ಸುಳ್ಳು ಭ್ರಷ್ಟಾಚಾರ ಆರೋಪ, ಆಪ್ ಸಂಸದ ಸಂಜಯ್ ಸಿಂಗ್‌ಗೆ 1 ಲಕ್ಷ ದಂಡ ವಿಧಿಸಿದ ಕೋರ್ಟ್!
ಸಂಜಯ್ ಸಿಂಗ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಳೆದ ತಿಂಗಳು ಅವಧಿ ಮುಗಿಯುತ್ತಿದ್ದ ರಾಜ್ಯಸಭಾ ಸಂಸದರ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ರಾಜ್ಯಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಮೂರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್ ಹಾಗೂ ಎನ್.ಡಿ. ಗುಪ್ತಾ, ಇ.ಡಿ.ಯಿಂದ ಬಂಧಿಸಲ್ಪಟ್ಟಿರುವ ಆಪ್ ನಾಯಕ ಸಂಜಯ್ ಸಿಂಗ್ ಆಯ್ಕೆಯಾಗಿದ್ದರು.
ಈ ಮೂವರ ವಿರುದ್ಧ ಯಾವುದೇ ಅಭ್ಯರ್ಥಿ ಇಲ್ಲದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ಸಂಜಯ್ ಸಿಂಗ್ ಅವರು ಪೊಲೀಸ್ ವ್ಯಾನಿನಲ್ಲಿ ಬಂದಿದ್ದರು. ಈ ಹಿಂದೆ ಇದ್ದ ಸುಶೀಲ್ ಗುಪ್ತ ಅವರ ಸ್ಥಾನಕ್ಕೆ ಸ್ವಾತಿ ನಾಮಪತ್ರ ಸಲ್ಲಿಸಿದ್ದರು. ಜೊತೆಗೆ ಎನ್.ಡಿ.ಗುಪ್ತಾ ಪುನರಾಯ್ಕೆಯಾಗಿದ್ದಾರೆ.
ಆಪ್ ಸಂಸದ ಸಂಜಯ್ ಸಿಂಗ್‌ಗೆ ಮತ್ತೆ ನಿರಾಸೆ, ನ್ಯಾಯಾಂಗ ಬಂಧನ ವಿಸ್ತರಿಸಿದ ಕೋರ್ಟ್!
ದಿಲ್ಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ ಆರೋಪದಡಿ ಸಂಜಯ್ ಸಿಂಗ್ ಅರೆಸ್ಟ್ ಆಗಿದ್ದಾರೆ. ‘ಮದ್ಯದ ವ್ಯಾಪಾರಿಗಳಿಗೆ ದೆಹಲಿಯ ಆಪ್ ಸರ್ಕಾರ 2021-22ರಲ್ಲಿ ನಿಯಮ ಮೀರಿ ಮದ್ಯದಂಗಡಿ ಲೈಸೆನ್ಸನ್ನು ಹಂಚಿತ್ತು. ಇದಕ್ಕೆ ಪ್ರತಿಯಾಗಿ ಮದ್ಯದ ಅಂಗಡಿ ಮಾಲೀಕರು, ಡೀಲರ್‌ಗಳಿಂದ ಆಪ್ ನಾಯಕರು ಭಾರಿ ಲಂಚದ ಹಣ ಸ್ವೀಕರಿಸಿದ್ದರು’ ಎಂಬುದು ದಿಲ್ಲಿ ಅಬಕಾರಿ ಹಗರಣದ ತಿರುಳಾಗಿದೆ. ಇದರ ತನಿಖೆಯನ್ನು ಸಿಬಿಐ ಹಾಗೂ ಇ.ಡಿ. ನಡೆಸುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ