
ಇವರ ಹೆಸರು ರಾಜು ನೇಪಾಳಿ, ಓದಿದ್ದು 7ನೇ ಕ್ಲಾಸ್ ಆದರೂ ಇವರೀಗ ಪಶ್ಚಿಮ ಬಂಗಾಳದ ಜನರ ಪಾಲಿನ ಹೀರೋ ಹಾಗೂ ಮಾನವ ಕಳ್ಳಸಾಗಣೆದಾರರ ಪಾಲಿಗೆ ಸಿಂಹಸ್ವಪ್ನವೆನಿಸಿರುವ ವ್ಯಕ್ತಿ. ಪ್ರಸ್ತುತ ಇವರು ದುರಾಸ್ ಎಕ್ಸ್‌ಪ್ರೆಸ್ ಮೇಲ್ ಎಂಬ ಎನ್‌ಜಿಒವವನ್ನು ನಡೆಸುತ್ತಿದ್ದಾರೆ. ಈ ಎನ್‌ಜಿಒದ ಮೂಲಕ ಕಾಣೆಯಾದ ಸಾವಿರಾರು ಮಕ್ಕಳನ್ನು ರಕ್ಷಣೆ ಮಾಡಿರುವ ಅವರು ಮಕ್ಕಳು ಮನೆಗೆ ಮರಳುವಂತೆ ಮಾಡಿದ್ದಾರೆ. ಜೊತೆಗೆ ರಕ್ಷಿಸಲ್ಪಟ್ಟ ಮಕ್ಕಳು ಹಾಗೂ ಅವರ ಕುಟುಂಬದವರಿಗೆ ಕೌನ್ಸಿಲಿಂಗ್ ಕೂಡ ಇವರು ನಡೆಸುತ್ತಾರೆ.
ಅಂದಹಾಗೆ ರಾಜು ನೇಪಾಳಿ ಅವರ ಈ ಪ್ರಯಾಣ ಆರಂಭವಾಗಿದ್ದು, 1992ರಲ್ಲಿ ಇವರಿಗೆ ಪರಿಚವಿದ್ದ ಹುಡುಗಿಯೊಬ್ಬಳು ಮದುವೆಯಾದ ಒಂದು ತಿಂಗಳ ನಂತರ ನಾಪತ್ತೆಯಾಗಿದ್ದಳು. ಆಕೆಯ ಕುಟುಂಬ ಆಕೆಯ ಸಂಪರ್ಕವನ್ನು ಕಳೆದುಕೊಂಡಿತ್ತು. ಆದರೆ 8 ವರ್ಷಗಳ ನಂತರ ರಾಜುವಿಗೆ ಆಕೆ ಕಾಣುವುದಕ್ಕೆ ಸಿಗುತ್ತಾಳೆ. ಈ ವೇಳೆ ಕೇಳಿದಾಗ ತನ್ನನ್ನು ಅಪಹರಿಸಲ್ಪಟ್ಟು, ವೇಶ್ಯಾವಾಟಿಕೆಗೆ ತಳ್ಳಲಾಯ್ತು ಎಂಬ ಆಘಾತಕಾರಿ ವಿಚಾರವನ್ನು ಆಕೆ ಹೇಳಿಕೊಂಡಿದ್ದಳು.
ಮರಳಿ ಬಂದ ಆಕೆಯನ್ನು ಆಕೆಯ ಕುಟುಂಬದವರು ಸ್ವೀಕರಿಸಲು ನಿರಾಕರಿಸಿದರು. ಇದಾಗಿ ಕೆಲವಾರಗಳ ನಂತರ ಆಕೆ ಹೆಚ್‌ಐವಿಗೆ ಬಲಿಯಾಗುತ್ತಾಳೆ. ಈ ಘಟನೆಯಿಂದ ಶಾಕ್‌ಗೆ ಒಳಗಾದ ರಾಜು ಅವರು ಯಾವ ಮಕ್ಕಳು ಇಂತಹ ಹೀನಾಯ ಸ್ಥಿತಿ ಅನುಭವಿಸಬಾರದು ಎಂದು ನಿರ್ಧಾರ ಮಾಡುತ್ತಾರೆ. ಹಾಗೂ ತಮ್ಮ ಉಳಿದ ಜೀವನವನ್ನು ಮಕ್ಕಳ ರಕ್ಷಣೆಯಲ್ಲಿಯೇ ಕಳೆಯಬೇಕು ಎಂದು ನಿರ್ಧರಿಸುತ್ತಾರೆ.
ಹೀಗಾಗಿ 2007ರಲ್ಲಿ ಇದಕ್ಕಾಗಿ ಎನ್‌ಜಿಒ ಒಂದನ್ನು ಸ್ಥಾಪನೆ ಮಾಡುವ ಅವರು ತಮ್ಮ ಈ ಕಾರ್ಯಕ್ಕಾಗಿ ನಂತರದಲ್ಲಿ 'ಸ್ಟಾಪ್ ಇಫ್ ಯು ಕ್ಯಾನ್' ಎಂಬ ವಾಟ್ಸಾಪ್ ಖಾತೆಯನ್ನು ತೆರೆಯುತ್ತಾರೆ. ಈ ಗ್ರೂಪ್‌ನಲ್ಲಿ ಭಾರತ, ನೇಪಾಳ, ಭೂತಾನ್ ಮತ್ತು ಬಾಂಗ್ಲಾದೇಶದ ಪೊಲೀಸ್ ಅಧಿಕಾರಿಗಳು, ಪತ್ರಕರ್ತರು, ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು ಸೇರಿದಂತೆ 230 ಕ್ಕೂ ಹೆಚ್ಚು ಜನರು ಇದ್ದಾರೆ. ಪಶ್ಚಿಮ ಬಂಗಾಳದಿಂದ ಕಾಣೆಯಾದ ಮಕ್ಕಳನ್ನು ತ್ವರಿತವಾಗಿ ಪತ್ತೆಹಚ್ಚಲು ಈ ಗುಂಪು ಸಹಾಯ ಮಾಡುತ್ತದೆ. ಈ ಆಧುನಿಕ ವಿಧಾನವು ಹಳೆಯ ವ್ಯವಸ್ಥೆಗಳಿಗಿಂತ ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ರಾಜು ಹೇಳುತ್ತಾರೆ.
2023 ರಲ್ಲಿ, ಪ್ರವಾಸಕ್ಕೆ ತೆರಳಿದ ಸಿಕ್ಕಿಂನ 16 ವರ್ಷದ ಬಾಲಕಕಾಣೆಯಾದಾಗ ಅವರು ರಾಜು ತಕ್ಷಣ ಆತನ ಫೋಟೋವನ್ನು ಗುಂಪಿನಲ್ಲಿ ಹಂಚಿಕೊಂಡರು. ಆ ಹುಡುಗ ಸ್ವಲ್ಪ ಸಮಯದ ನಂತರ ರಕ್ಷಿಸಲ್ಪಟ್ಟಿದ್ದ ಬಿಹಾರದಲ್ಲಿ ಸುಲಿಗೆಕೋರರು ಆತನನ್ನು ಅಪಹರಿಸಿದ್ದರು. ರಾಜು ಅವರ ಈ ವಾಟ್ಸಾಪ್ ಜಾಲಕ್ಕೆ ಅವನನ್ನು ರಕ್ಷಿಸಿ ಅವನ ಕುಟುಂಬಕ್ಕೆ ಹಿಂತಿರುಗಿಸಿತು. ಇದುವರೆಗೆ ರಾಜು ಅವರು 1500ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿದ್ದಾರೆ. ಆ ಪ್ರದೇಶದಲ್ಲೇ ಯಾವುದೇ ಮಕ್ಕಳು ಕಾಣೆಯಾದರೆ ಮೊದಲು ಸಂದೇಶ ಬರುವುದು ರಾಜು ಅವರಿಗೆ.
ಹೀಗೆ ನಾಪತ್ತೆಯಾಗಿ ಮತ್ತೆ ಸಿಗುವ ಮಕ್ಕಳಿಗೆ ರಾಜು ಅವರ ಎನ್‌ಜಿಒ ಆಪ್ತ ಸಮಾಲೋಚನೆ ಮಾಡುತ್ತದೆ. ಕೆಲವು ಮಕ್ಕಳು ಮನೆಗೆ ಹಿಂದಿರುಗಿದರೆ ಮತ್ತೆ ಕೆಲವು ಮಕ್ಕಳು ಆಶ್ರಯ ತಾಣದಲ್ಲಿ ಇರಲು ಬಯಸುತ್ತಾರೆ. ಹೀಗೆ ನಾಪತ್ತೆಯಾದ ಮಕ್ಕಳು ತಮ್ಮ ಪೋಷಕರ ಮುಖ ನೋಡಿ ನಗುವುದೇ ನನಗೆ ಸಿಗುವ ಉಡುಗೊರೆ ಎಂದು ರಾಜು ಅವರು ಹೇಳಿಕೊಳ್ಳುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ