Aatmanirbharta in Defence ಆತ್ಮನಿರ್ಭರತೆಗೆ ಮತ್ತಷ್ಟು ವೇಗ, 101 ಶಸ್ತ್ರಾಸ್ತ್ರ ಸ್ವದೇಶಿಕರಣಕ್ಕೆ ರಕ್ಷಣಾ ಇಲಾಖೆ ನಿರ್ಧಾರ!

Published : Apr 07, 2022, 05:54 PM IST
Aatmanirbharta in Defence ಆತ್ಮನಿರ್ಭರತೆಗೆ ಮತ್ತಷ್ಟು ವೇಗ, 101 ಶಸ್ತ್ರಾಸ್ತ್ರ ಸ್ವದೇಶಿಕರಣಕ್ಕೆ ರಕ್ಷಣಾ ಇಲಾಖೆ ನಿರ್ಧಾರ!

ಸಾರಾಂಶ

ಶಸ್ತ್ರಾಸ್ತ್ರಗಳ ದೇಶಿ ಉದ್ಯಮ ಉತ್ತೇಜಿಸಲು ಕೇಂದ್ರ ರಕ್ಷಣಾ ಇಲಾಖೆ ಕ್ರಮ 101 ಶಸ್ತ್ರಾಸ್ತ್ರಗಳನ್ನು ಸ್ವದೇಶಿಕರಣಗೊಳಿಸಲು ರಾಜನಾಥ್ ಸಿಂಗ್ ನಿರ್ಧಾರ ರಕ್ಷಣಾ ಉತ್ಪಾದನೆಯಲ್ಲಿ ಭಾರತವನ್ನು ಅಗ್ರಸ್ಥಾನಕ್ಕೆ ಕೊಂಡೊಯ್ಯಲು ಪ್ರಯತ್ನ  

ನವದೆಹಲಿ(ಏ.07): ಭಾರತ ರಕ್ಷಣಾ ಇಲಾಖೆ ಆತ್ಮನಿರ್ಭರ್ ಭಾರತ ಯೋಜನೆಗೆ ಮತ್ತಷ್ಟು ವೇಗ ನೀಡಿದೆ. ಇದೀಗ 101 ಶಸ್ತ್ರಾಸ್ತ್ರಗಳನ್ನು ಸ್ವದೇಶಿಕರಣಗೊಳಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಪ್ರಮುಖ ಉಪಕರಣಗಳ 101 ಶಸ್ತ್ರಾಸ್ತ್ರಗಳನ್ನೊಳಗೊಂಡಿರುವ 3ನೇ ಸ್ವದೇಶಿಕರಣ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಮೂರನೇ ಸ್ವದೇಶಿಕರಣ ಉಪಕರಣ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ರಾಜನಾಥ್ ಸಿಂಗ್, ಇದು ಆತ್ಮನಿರ್ಭರ್ ಭಾರತಕ್ಕೆ ರಕ್ಷಣಾ ಇಲಾಖೆಯ ಕೊಡುಗೆಯಾಗಿದೆ ಎಂದರು. ಪ್ರಧಾನಿ ಮೋದಿ ಆತ್ಮನಿರ್ಭರ್ ಭಾರತ ದೂರ ದೃಷ್ಟಿಯ ಯೋಜೆನೆಯನ್ನು ಸಾಕಾರಗೊಳಿಸಲು ಸರ್ಕಾರ 360 ಡಿಗ್ರಿಯಲ್ಲಿ ಪ್ರಯತ್ನ ಮಾಡಲಾಗಿದೆ. ಇದೀಗ ಬಿಡುಗಡೆ ಮಾಡಿರುವ 101 ಉಪಕರಣಗಳ ಹೊಸ ಸ್ವದೇಶಿಕರಣ ಪಟ್ಟಿ, ಭಾರತದ ದೇಶಿ ಉದ್ಯಮ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಇದರಿಂದ ಭಾರತದ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಉತ್ಪಾದನಾ ಸಾಮರ್ಥ್ಯವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. 

DRDO Recruitment 2022: ಸಂಶೋಧನಾ ವಿಭಾಗದ ವಿವಿಧ ಹುದ್ದೆಗಳಿಗೆ ನೇಮಕಾತಿ

ಮುಂದಿನ 5 ವರ್ಷಗಳಲ್ಲಿ ಭಾರತದ ರಕ್ಷಣಾ ಇಲಾಖೆ ಸ್ವದೇಶಿ ಉಪಕರಣಗಳು , ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ಗಣನೀಯ ಪ್ರಗತಿ ಸಾಧಿಸಲು ಹಂತ ಹಂತದ ಯೋಜನೆಯನ್ನು ಘೋಷಿಸಿದೆ. ಡಿಸೆಂಬರ್ 2022 ರಿಂದ 2027ರ ವರೆಗಿನ ಸ್ವದೇಶಿಕರಣ ಯೋಜನೆಯನ್ನು ಘೋಷಿಸಲಾಗಿದೆ. 

ಶಸ್ತ್ರಾಸ್ತ್ರಗಳ ಸ್ವದೇಶಿಕರಣ ಪಟ್ಟಿ ಇದಕ್ಕೂ ಮೊದಲು ಆಗಸ್ಟ್ 21, 2020ರಲ್ಲಿ ಹಾಗೂ ಮೇ 31, 2021ರಲ್ಲಿ ಪ್ರಕಟಿಸಲಾಗಿತ್ತು. ಮೊದಲ ಪಟ್ಟಿಯಲ್ಲಿ 101 ಮತ್ತು ಎರಡನೇ ಪಟ್ಟಿ 108 ಶಸ್ತ್ರಾಸ್ತ್ರ ಉಪಕರಣಗಳ ಸ್ವದೇಶಿಕರಣಕ್ಕೆ ಘೋಷಿಸಲಾಗಿದೆ. ಆ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿದೆ. ಒಟ್ಟು 310 ರಕ್ಷಣಾ ಸಾಧನಗಳನ್ನು ಒಳಗೊಂಡಿರುವ ಈ ಮೂರು ಪಟ್ಟಿಗಳನ್ನು ಸ್ಥಳೀಯವಾಗಿ ಉತ್ಪಾದಿಸಲು ನಿರ್ಧರಿಸಲಾಗಿದೆ. ಶಸ್ತ್ರಾಸ್ತ್ರ ಕ್ಷೇತ್ರ ಅತೀ ಹೆಚ್ಚಿನ ಬೇಡಿಕೆ ಇರುವ ಕ್ಷೇತ್ರವಾಗಿದೆ. ಭಾರತದ ಬಳಕೆಗೂ ಹಾಗೂ ವಿದೇಶಗಳಿಗೆ ರಫ್ತು ಮಾಡಲು ದೇಶದ ರಕ್ಷಣಾ ವ್ಯವಸ್ಥೆಯನ್ನು ತಯಾರು ಮಾಡುವುದೇ ಭಾರತದ ಗುರಿಯಾಗಿದೆ. ಅತ್ಯುತ್ತಮ ತಂತ್ರಜ್ಞಾನ, ಗುಣಮಟ್ಟ ಸೇರಿದಂತೆ ಎಲ್ಲವೂ ಭಾರತದಲ್ಲಿದೆ. ಈ ಮೂಲಕ ಅಂತಾರಾಷ್ಟ್ರೀಯ ಗುಣಮಟ್ಟದ ಉತ್ಪನ್ನ ಪೂರೈಸಿಲು ದೇಶಿಯ ಉದ್ಯಮಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಇದರಿಂದ ದೇಶದಲ್ಲಿನ ಉತ್ಪದನಾ ಕ್ಷೇತ್ರಗಳಲ್ಲಿನ ಹೂಡಿಕೆ ಹೆಚ್ಚಾಗಲಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ರಕ್ಷಣಾ ಕ್ಷೇತ್ರಕ್ಕೆ 5.25 ಲಕ್ಷ ಕೋಟಿ ; ಸ್ವ ರಕ್ಷಣೆಗೆ ಆತ್ಮನಿರ್ಭರ ಭಾರತ ಬಳಕೆ, ಸಂಶೋಧನೆಗೆ ಒತ್ತು

ಇಂದು ರಾಜನಾಥ್ ಸಿಂಗ್ ಬಿಡುಗಡೆ ಮಾಡಿರುವ 3ನೇ ಪಟ್ಟಿಯಲ್ಲಿರುವ 101 ಉಪಕರಣಗಳು ಅತೀ ಸೂಕ್ಷ್ಮ ಹಾಗೂ ಅತ್ಯಂತ ಪ್ರಮುಖ ಅಸ್ತ್ರಗಳಾಗಿವೆ.  ಶಸ್ತ್ರಾಸ್ತ್ರಗಳು, ಮದ್ದುಗುಂಡು, ಲಘು ತೂಕದ ಟ್ಯಾಂಕ್, ಮೌಂಟೆಡ್  ಆರ್ಟಿ ಗನ್( 155mmX 52Cal), ಗೈಡೆಟ್ ಎಕ್ಸ್‌ಟೆಂಡ್ ರೇಂಜ್ ರಾಕೆಟ್((GER), ನೇವಲ್ ಯುಟಿಲಿಟಿ ಹೆಲಿಕಾಪ್ಟರ್‌ಗಳು (NUHs),MF STAR (ಹಡಗುಗಳಿಗಾಗಿ ರಾಡಾರ್), ಮಧ್ಯಮ ಶ್ರೇಣಿಯ ಆಂಟಿ-ಶಿಪ್ ಕ್ಷಿಪಣಿ (Ship Launch) ಮಾನವರಹಿತ ವೈಮಾನಿಕ ವಾಹನ (MALE UAV), ವಿಕಿರಣ ವಿರೋಧಿ ಕ್ಷಿಪಣಿಗಳು ಸೇರಿದಂತೆ ಒಟ್ಟು 101 ಉಪಕರಣಗಳು ಒಳಗೊಂಡಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ರಕ್ಷಣಾ ಉತ್ಪಾದನಾ ಇಲಾಖೆ (DDP) ಸಂಸ್ಥೆ, ಸೇವಾ ಪ್ರಧಾನ ಕಛೇರಿ, ಖಾಸಗಿ ಉದ್ಯಮಗಳ ಜೊತೆ ಸುದೀರ್ಘ ಚರ್ಚೆ ಬಳಿಕ ಮೂರನೇ ಸ್ವದೇಶಿಕರಣ ಉಪಕರಣ ಪಟ್ಟಿ ತಯಾರಿಸಲಾಗಿದೆ. ರಕ್ಷಣಾ ಇಲಾಖೆ ಸ್ವಾವಲಂಬಿಯಾಗಲು ಸರ್ಕಾರ ಎಲ್ಲಾ ಪ್ರಯತ್ನ ಮಾಡಲಿದೆ. ಇದರಿಂದ ದೇಶ ಯಾವುದೇ ಸಂದರ್ಭದಲ್ಲೂ ಇತರ ದೇಶಗಳಿಂದ ಭಾರಿ ಗಾತ್ರದ ಹಾಗೂ ದುಬಾರಿ ಬೆಲೆಗೆ ರಕ್ಷಣಾ ಸಾಮಾಗ್ರಿ ಆಮದು ಮಾಡಿಕೊಳ್ಳುವ ಪರಿಸ್ಥಿತಿ ದೂರವಾಗಲಿದೆ. ಇಷ್ಟೇ ಅಲ್ಲ ಭಾರತದ ಉತ್ಪಾದನೆ ವೇಗ ಹೆಚ್ಚಾಗುತ್ತಿದೆ. ಇದರಿಂದ ವಿದೇಶಗಳಿಗೆ ಶಸ್ತ್ರಾಸ್ತ್ರ ರಫ್ತು ಮಾಡಲು ನೆರವಾಗಲಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಭಾರತ ಸೇರಿದಂತೆ ಹಲವು ದೇಶಗಳು ರಕ್ಷಣಾ ಇಲಾಖೆ ಉಪಕರಗಳು, ಶಸ್ತ್ರಾಸ್ತ್ರ, ಯುದ್ಧ ವಿಮಾನಗಳು,  ಮದ್ದುಗುಂಡುಗಳಿಗೆ ಇತರ ದೇಶಗಳನ್ನು ಅವಲಿಂಬಿಸಿದೆ. ಫ್ರಾನ್ಸ್, ರಷ್ಯಾ, ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳಿಂದ ಭಾರತ ಆಮದು ಮಾಡಿಕೊಳ್ಳುತ್ತದೆ. ಇದೀಗ ಭಾರತ ಸ್ವದೇಶಿ ಲಘು ಯುದ್ಧ ವಿಮಾನ ಸೇರಿದಂತೆ ಹಲವು ಪ್ರಮುಖ ಶಸ್ತ್ರಾಸ್ತ್ರಗಳನ್ನು ಭಾರತವೇ ಉತ್ಪಾದಿಸುತ್ತಿದೆ. ಡಿಆರ್‌ಡಿಒ ಅಭಿವೃದ್ಧಿ ಪಡಿಸಿರುವ ಕ್ಷಿಪಣಿಗಳು ಭಾರತ ರಕ್ಷಣೆ ಇಲಾಖೆ ಬತ್ತಳಿಕೆಯಲ್ಲಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana