ಚೀನಾ ಭಾರತ ಗಡಿ ಬಿಕ್ಕಟ್ಟಿನ ನಡುವೆ ರಷ್ಯಾ ತಲುಪಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್!

By Suvarna NewsFirst Published Jun 23, 2020, 11:11 AM IST
Highlights

ರಷ್ಯಾ ತಲುಪಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್!| 4 ತಿಂಗಳಲ್ಲಿ ವಿದೇಶಕ್ಕೆ ತೆರಳಿದ ಮೊದಲ ಸಚಿವ| ಭಾರತಕ್ಕೆ ಎಸ್‌-400 ಕ್ಷಿಪಣಿ ನಿರೋಧಕ ಬೇಗ ನೀಡಲು ಕೋರಿಕೆ| ಈಗಾಗಲೇ ಚೀನಾಗೆ ಎಸ್‌-400 ನೀಡಿರುವ ರಷ್ಯಾ

ಮಾಸ್ಕೋ(ಜೂ.23): ನವದೆಹಲಿ: ಚೀನಾ ಜತೆ ಗಡಿ ಬಿಕ್ಕಟ್ಟು ಸೃಷ್ಟಿಯಾಗಿರುವ ನಡುವೆಯೇ ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು 3 ದಿನಗಳ ಪ್ರವಾಸಕ್ಕೆ ರಷ್ಯಾಗೆ ತಲುಪಿದ್ದಾರೆ. ಈ ವೇಳೆ ಅವರು ರಷ್ಯಾದ ಉನ್ನತ ಸೇನಾಧಿಕಾರಿಗಳ ಜತೆ ಮಾತುಕತೆ ನಡೆಸಲಿದ್ದಾರೆ ಹಾಗೂ ಎರಡನೇ ವಿಶ್ವಯುದ್ಧದಲ್ಲಿ ಜರ್ಮನಿ ವಿರುದ್ಧ ಸೋವಿಯತ್‌ ಒಕ್ಕೂಟ ಜಯ ಸಾಧಿಸಿದ 75ನೇ ವರ್ಷಾಚರಣೆಯ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ. 

Raksha Mantri Shri reached Moscow this evening on a three day visit. He was received by Major General Kosenko Vasily Alexandrovich and the Indian Ambassdor to Russia. pic.twitter.com/uZTqLAyo2V

— रक्षा मंत्री कार्यालय/ RMO India (@DefenceMinIndia)

ಕೊರೋನಾ ವೈರಸ್‌ ಹರಡುವಿಕೆ ಆರಂಭವಾದ ನಂತರ 4 ತಿಂಗಳ ಅವಧಿಯಲ್ಲಿ ಭಾರತದ ಸಚಿವರೊಬ್ಬರು ವಿದೇಶಕ್ಕೆ ತೆರಳುತ್ತಿರುವುದು ಇದೇ ಮೊದಲು. ಎಸ್‌-400 ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಸಕಾಲದಲ್ಲಿ ಹಸ್ತಾಂತರಿಸುವಂತೆ ರಷ್ಯಾ ಮೇಲೆ ರಾಜನಾಥ್‌ ಒತ್ತಡ ಹೇರುವ ನಿರೀಕ್ಷೆ ಇದೆ.

ಶೀಘ್ರವೇ S-400 ಮಿಸೈಲ್ ಪೂರೈಸಲು ರಷ್ಯಾ ಒತ್ತಾಯಿಸಿದ ರಾಜನಾಥ್ ಸಿಂಗ್!

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಜನಾಥ್‌, ‘ಈ ಭೇಟಿಯಿಂದ ಭಾರತ-ರಷ್ಯಾ ರಕ್ಷಣಾ ಸಹಭಾಗಿತ್ವ ಮತ್ತಷ್ಟು ಬಲಗೊಳ್ಳುವ ಸಂಬಂಧ ರಷ್ಯಾ ಜತೆ ಮಾತುಕತೆ ನಡೆಸಲಿದ್ದೇನೆ’ ಎಂದಿದ್ದಾರೆ.

Leaving for Moscow on a three day visit. The visit to Russia will give me an opportunity to hold talks on ways to further deepen the India-Russia defence and strategic partnership. I shall also be attending the 75th Victory Day Parade in Moscow.

— Rajnath Singh (@rajnathsingh)

ಎಸ್‌-400 ಟ್ರೈಂಫ್‌ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಭಾರತಕ್ಕೆ ಬೇಗ ಒದಗಿಸಿ ಎಂದು ಭೇಟಿಯ ವೇಳೆ ರಾಜನಾಥ್‌ ಮನವಿ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ. ಏಕೆಂದರೆ ಕೊರೋನಾ ಕಾರಣ ಚೀನಾ ಈ ವ್ಯವಸ್ಥೆಯನ್ನು ಭಾರತಕ್ಕೆ ಹಸ್ತಾಂತರಿಸುವುದು ವಿಳಂಬವಾಗಿದೆ. ತನ್ನ ಜತೆ ಉತ್ತಮ ಬಾಂಧವ್ಯ ಹೊಂದಿದ ಚೀನಾಗೆ ರಷ್ಯಾ ಈಗಾಗಲೇ ಎಸ್‌-400 ವ್ಯವಸ್ಥೆ ನೀಡಿದೆ ಎಂಬುದು ಇಲ್ಲಿ ಗಮನಾರ್ಹ.

ಸೋವಿಯತ್‌ ಗೆಲುವಿನ ವರ್ಷಾಚರಣೆಯ ಪಥಸಂಚನದಲ್ಲಿ ಭಾರತದ 75 ಯೋಧರು ಕೂಡ ಪಲ್ಗೊಳ್ಳಲಿದ್ದು, ಅವರು ಈಗಾಗಲೇ ರಷ್ಯಾಗೆ ತೆರಳಿದ್ದಾರೆ. ಚೀನಾ ಯೋಧರು ಸೇರಿದಂತೆ 11 ರಾಷ್ಟ್ರಗಳ ಯೋಧರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವಿಶ್ವಯುದ್ಧದಲ್ಲಿ ಭಾರತದ ಯೋಧರೂ ಪಾಲ್ಗೊಂಡಿದ್ದರು. ಹೀಗಾಗಿ ಪಥಸಂಚಲನದಲ್ಲಿ ಅವರು ಭಾಗಿಯಾಗಲಿದ್ದಾರೆ.

click me!