
ಬೇರೆಯವರ ಸಾಕುನಾಯಿಯೊಂದು ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿ ಕಚ್ಚಿದ್ದು, ಈ ವೇಳೆ ಆಕೆಯ ರಕ್ಷಣೆಗೆ ಧಾವಿಸಿ ಕ್ಷಮೆ ಕೇಳುವ ಬದಲು ನಾಯಿಯ ಮಾಲಕಿ ಅ ಮಹಿಳೆಯ ಮೇಲೆಯೇ ಹಲ್ಲೆ ಮಾಡಿದಂತಹ ಆಘಾತಕಾರಿ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ. ಘಟನೆ ಕಟ್ಟಡದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ಅನೇಕರು ಮಹಿಳೆಯ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಯುವಕನೋರ್ವ ನಾಯಿಯನ್ನು ಹಿಡಿದುಕೊಂಡು ಮೆಟ್ಟಿಲು ಏರಿ ಬರುತ್ತಿದ್ದಾನೆ. ಈ ವೇಳೆ ಮೆಟ್ಟಿಲಿನ ಪಕ್ಕದಲ್ಲಿ ಬರುತ್ತಿದ್ದ ಮತ್ತೊಬ್ಬ ಮಹಿಳೆಯ ಮೇಲೆ ನಾಯಿ ದಾಳಿ ಮಾಡಿದೆ. ಈ ವೇಳೆ ಯುವಕ ನಾಯಿಯನ್ನು ಹಿಡಿದುಕೊಳ್ಳಲು ಹೋಗಿದ್ದಾನೆ. ಅದೇ ವೇಳೆ ಅಲ್ಲೇ ಇದ್ದ ನಾಯಿಯ ಮಾಲಕಿ ನಾಯಿ ದಾಳಿಗೊಳಗಾದ ಮಹಿಳೆಯ ಕೆನ್ನೆಗೆ ಬಾರಿಸಿದ್ದಾರ. ವೀಡಿಯೋ ನೋಡಿದ ಜನ ನಾಯಿ ಮಾಲಕಿಯ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್‌ಕೋಟ್‌ನ ಕೊಥಾರಿಯಾ ಪ್ರದೇಶದ ರೋಲೆಕ್ಸ್ ರಸ್ತೆಯಲ್ಲಿರುವ ಸುರಭಿ ಪಾಸಿಬಲ್ ಫ್ಲಾಟ್‌ನಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: 90 ಕೋಟಿ ರೂಪಾಯಿಯ ಸೈಬರ್ ವಂಚನೆ: ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ
ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಘಟನೆ:
@NCMIndiaa ಎಂಬ ಎಕ್ಸ್ ಖಾತೆಯಿಂದ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ನಾಯಿಗಳ ಮಾಲೀಕರು ತಮ್ಮ ಸಾಕು ನಾಯಿಗಳಿಗಿಂತ ಹೆಚ್ಚು ಕ್ರೂರಿಗಳಾಗಿದ್ದಾರೆ. ಗುಜರಾತ್‌ನ ರಾಜ್‌ಕೋಟ್‌ನ ಕೊಥಾರಿಯಾ ಪ್ರದೇಶದ ರೋಲೆಕ್ಸ್ ರಸ್ತೆಯಲ್ಲಿರುವ ಸುರ್ಭಿ ಪಾಸಿಬಲ್ ಫ್ಲಾಟ್‌ಗಳ ನಿವಾಸಿ ಕಿರಣ್ ವಘೇಲಾ ಅವರ ಮೇಲೆ ನಾಯಿ ದಾಳಿ ನಡೆಸಿದೆ. ಈ ವೇಳೆ ನಾಯಿಯ ಪಾಲಕಿ ಪಾಯಲ್ ಗೋಸ್ವಾಮಿ ಅವರು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಲಿಫ್ಟ್‌ಗಾಗಿ ಕಾಯುತ್ತಿದ್ದಾಗ ಮಹಿಳೆಯ ನಾಯಿ ಅವರಿಗೆ ಕಚ್ಚಿದೆ. ಆದರೆ ಈ ಡಾಗ್ ಗ್ಯಾಂಗ್‌ನ ಸದಸ್ಯರ ತರ್ಕ ಏನೆಂದರೆ ನಾಯಿ ನಿಮ್ಮನ್ನು ಕಚ್ಚುತ್ತಿದ್ದರೆ ಅದು ನಿಮ್ಮ ತಪ್ಪು ಮತ್ತು ಅದಕ್ಕಾಗಿ ನಿಮಗೆ ಕಪಾಳಮೋಕ್ಷ ಮಾಡಬೇಕಾಗುತ್ತದೆ ಎಂಬುದಾಗಿದೆ ಎಂದು ಅವರು ಬರೆದಿದ್ದಾರೆ ಜೊತೆಗೆ ರಾಜ್‌ಕೋಟ್ ಪೊಲೀಸರಿಗೂ ವೀಡಿಯೋ ಟ್ಯಾಗ್ ಮಾಡಿದ್ದು, ಪ್ರಿಯ @CP_RajkotCity ನೀವು ಈ ನಾಯಿ ಪ್ರೇಮಿ ಮಹಿಳೆಯನ್ನು ಬಂಧಿಸುತ್ತೀರಾ ಅಥವಾ ಬದಲಿಗೆ ನಾಯಿಯಿಂದ ಕಚ್ಚಿದ ನಂತರ ನಾಯಿಯ ಮಾಲಕಿಯಿಂದ ಕಪಾಳಮೋಕ್ಷಕ್ಕೆ ಒಳಗಾದ ಸಂತ್ರಸ್ತೆಗೇ ಶಿಕ್ಷಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಭಾರತದ ಅತೀ ದುಬಾರಿ ನಂಬರ್ ಪ್ಲೇಟ್: ಈ ನಂಬರ್‌ಗಾಗಿ ಅರ್ಜಿ ಸಲ್ಲಿಸಿದವರೆಷ್ಟು? ಸೇಲ್ ಆಗಿದ್ದು ಎಷ್ಟು ಕೋಟಿಗೆ
ವೀಡಿಯೋ ವೈರಲ್: ನಾಯಿ ಮಾಲಕಿಯ ವರ್ತನೆಗೆ ತೀವ್ರ ಆಕ್ರೋಶ:
ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮಹಿಳೆಯ ವರ್ತನೆಗೆ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಯಿಯ ದಾಳಿಗಿಂತ ಮಹಿಳೆಯವರ್ತನೆ ಭೀಕರವಾಗಿದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಯಿ ಒಬ್ಬ ವ್ಯಕ್ತಿಯ ಮೇಲೆ ದಾಳಿ ಮಾಡಿದಾಗ ಕ್ಷಮೆಯಾಚಿಸುವ ಬದಲು, ಇಲ್ಲಿ ಮಾಲೀಕರು ಬಲಿಪಶುವಿಗೆ ಕಪಾಳಮೋಕ್ಷ ಮಾಡುತ್ತಾರೆ. ಇದು ಯಾವ ರೀತಿಯ ಮನಸ್ಥಿತಿ? ಇದೊಂದು ಅಮಾನವೀಯ ಘಟನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. . ಕೆಲವು ಅಯೋಗ್ಯರು ಸಾಕುಪ್ರಾಣಿಗಳನ್ನು ಹೊಂದಿರಬಾರದು ಎಂಬುದಕ್ಕೆ ಈ ಘಟನೆ ಸಾಕ್ಷಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಾಯಿಯ ಮಾಲೀಕರು ಜವಾಬ್ದಾರಿಯಿಂದ ಮುನ್ನಡೆಯಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಲ್ಲೆ ಮಾಡಿದ ಮಹಿಳೆಯನ್ನು ಬಂಧಿಸಬೇಕು ಹಾಗೂ ಆಕೆ ನೀಡಿದ ಮಾನಸಿಕ ಹಾಗೂ ದೈಹಿಕ ಕಿರುಕುಳಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ