ರಾಜಕೀಯಕ್ಕೆ ಬಾರದ ರಜನಿ, ಬೆಂಗಲಿಗರು ಕಮಲ್‌ಗೆ ಸಪೋರ್ಟ್

Kannadaprabha News   | Asianet News
Published : Feb 21, 2021, 09:11 AM ISTUpdated : Feb 21, 2021, 09:16 AM IST
ರಾಜಕೀಯಕ್ಕೆ ಬಾರದ ರಜನಿ, ಬೆಂಗಲಿಗರು ಕಮಲ್‌ಗೆ ಸಪೋರ್ಟ್

ಸಾರಾಂಶ

ಇಬ್ಬರು ಪ್ರಭಾವಿ ಮುಖಂಡರು ಭೇಟಿ ಮಾಡಿದ್ದು ತಮ್ಮ ನಿರ್ಧಾರ ಕೈ ಬಿಟ್ಟು ಬೆಂಬಲ ನೀಡುವ ಬಗ್ಗೆ ಗುಸು ಗುಸು ಆರಂಭವಾಗಿದೆ. ಈ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. 

ಚೆನ್ನೈ (ಫೆ.21): ತಮಿಳುನಾಡು ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ನಟ ರಜನೀಕಾಂತ್‌ ಅವರು ಶನಿವಾರ ನಟ ಹಾಗೂ ಮಕ್ಕಳ್‌ ನೀದಿ ಮಯ್ಯಂ ಪಕ್ಷದ ಅಧ್ಯಕ್ಷ ಕಮಲ್‌ ಹಾಸನ್‌ ಅವರನ್ನು ಶನಿವಾರ ಭೇಟಿ ಮಾಡಿದ್ದಾರೆ. ಇದು ಕಮಲ್‌ ಅವರಿಗೆ ರಜನಿ ಬೆಂಬಲ ನೀಡಬಹುದು ಎಂಬ ಗುಸುಗುಸು ಏಳಲು ಕಾರಣವಾಗಿದೆ.

ರಜನೀಕಾಂತ್‌ ಈ ಹಿಂದೆ ರಾಜಕೀಯಕ್ಕೆ ಧುಮುಕುವುದಾಗಿ ಹೇಳಿದ್ದರೂ, ಕಳೆದ ತಿಂಗಳು ತಮ್ಮ ನಿಲುವಿನಿಂದ ಹಿಂದೆ ಸರಿದಿದ್ದರು. ರಾಜಕೀಯಕ್ಕೆ ಬರುವುದಿಲ್ಲ ಎಂಬ ಘೋಷಣೆ ಮಾಡಿದ್ದರು. ಆದರೂ ರಜನಿ ಅವರು ಮುಂದಿನ ಚುನಾವಣೆಯಲ್ಲಿ ಯಾರನ್ನು ಬೆಂಬಲಿಸುತ್ತಾರೆ ಎಂಬ ಕುತೂಹಲ ಮೂಡಿಸಿದೆ.

ರಜನಿ ರಾಜಕೀಯ ಮತ್ತೆ ಸಸ್ಪೆನ್ಸ್‌: ಭಾರೀ ಸಂಚಲನ ಮೂಡಿಸಿದೆ ಆಪ್ತನ ಹೇಳಿಕೆ! ..

ಇದರ ನಡುವೆ, ಕಮಲ್‌ ಹಾಗೂ ರಜನಿ ಶನಿವಾರ ಭೇಟಿ ಮಾಡಿ 30 ನಿಮಿಷ ಮಾತುಕತೆ ನಡೆಸಿದ್ದಾರೆ. ಭಾನುವಾರ ಕಮಲ್‌ ಅವರು ಅಧಿಕೃತ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದಾರೆ. ಈ ಕಾರಣದಿಂದ ರಜನಿ ಆಶೀರ್ವಾದ ಪಡೆಯಲು ಹೋಗುವೆ ಎಂದು ಈ ಹಿಂದೆಯೇ ಕಮಲ್‌ ಹೇಳಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹೈದ್ರಾಬಾದ್‌ ರಸ್ತೆಗಳಿಗೆ ಟ್ರಂಪ್, ಗೂಗಲ್‌ ಹೆಸರು
ಗಲ್ವಾನ್‌ ಹಿಂಸೆ ನಡೆದ ಸ್ಥಳದಲ್ಲಿ ವಿಶ್ವದ ಎತ್ತರದ ಯುದ್ಧ ಸ್ಮಾರಕ!