
ರಾಜಸ್ಥಾನದ ಬಿಕಾನೇರ್ ಪೊಲೀಸರಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ಇತ್ತೀಚೆಗೆ ಬಿಕಾನೇರ್‌ನ ಮುಕ್ತಾ ಪ್ರಸಾದ್ ಪ್ರದೇಶದಲ್ಲಿ ನಡೆದ ಮನೀಷಾ ಕೊಲೆ ಪ್ರಕರಣವನ್ನು (Bikaner Manisha murder case ) ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಮನೀಷಾಳ ಅತ್ತಿಗೆ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ವಾಸ್ತವವಾಗಿ ಮಾರ್ಚ್ 7 ರಂದು ಬಿಕಾನೇರ್‌ನಲ್ಲಿ ಮಹಿಳೆಯೊಬ್ಬಳ ಅರ್ಧ ಸುಟ್ಟ ಸ್ಥಿತಿಯಲ್ಲಿ ಮನೆಯಲ್ಲಿಯೇ ಪತ್ತೆಯಾಗಿತ್ತು. ಆಕೆಯನ್ನು ಮನೀಷಾ ಎಂದು ಗುರುತಿಸಲಾಯಿತು. ಪ್ರಾಥಮಿಕವಾಗಿ ಶವವನ್ನು ನೋಡಿದಾಗ ಇದು ಕೊಲೆ ಎಂದು ಪೊಲೀಸರಿಗೆ ಅನ್ನಿಸಿತ್ತು. ನಂತರ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದರು. ಪೊಲೀಸರು ಆ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾಗಳ ಫೂಟೇಜ್ ಮತ್ತು ಇತರ ಅಂಶಗಳನ್ನು ಪರಿಶೀಲಿಸಿದಾಗ ಮನೀಷಾಳ ಅತ್ತಿಗೆ ಸುಮನ್ ಮತ್ತು ಆಕೆಯ ಪ್ರಿಯಕರ ಗೋಪಾಲ್ ಅನುಮಾನಾಸ್ಪದವಾಗಿ ಕಂಡುಬಂದರು.
ರಾಜ್ಯದ ಇತಿಹಾಸದಲ್ಲೇ ದೊಡ್ಡ ಡ್ರಗ್ಸ್ ಬೇಟೆ: ಮಂಗಳೂರು ಸಿಸಿಬಿ ಪೊಲೀಸರಿಂದ 75 ಕೋಟಿ ಮಾಲು ವಶ
ಅಘಾತಕಾರಿ ಘಟನೆ: ಕ್ಲಿನಿಕ್‌ಗೆ ನುಗ್ಗಿ ವೈದ್ಯನ ಮೇಲೆ ಹಲ್ಲೆ, ಖಾಸಗಿ ಅಂಗ ಕತ್ತರಿಸಿ ಪರಾರಿಯಾದ ಪಾಪಿಗಳು!
ಈ ಸಂಪೂರ್ಣ ಪ್ರಕರಣವನ್ನು ಭೇದಿಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಅದರಲ್ಲಿ 200ಕ್ಕೂ ಹೆಚ್ಚು ಪೊಲೀಸರನ್ನು ಸೇರಿಸಲಾಗಿತ್ತು. ಆರೋಪಿ ಗೋಪಾಲ್ ಕೊಲೆ ಮಾಡುವ ಸಲುವಾಗಿ ಅನೇಕ ವೆಬ್ ಸರಣಿ ಮತ್ತು ಕ್ರೈಮ್ ಎಪಿಸೋಡ್‌ಗಳನ್ನು ನೋಡಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಪ್ರೇಯಸಿ ಸುಮನ್ ಮನೀಷಾ ಬಗ್ಗೆ ಎಲ್ಲಾ ಮಾಹಿತಿಯನ್ನು ಗೋಪಾಲ್‌ಗೆ ನೀಡಿದ್ದಳು.
ನಂತರ ಮಾರ್ಚ್ 7 ರಂದು ಗೋಪಾಲ್ ಮನೀಷಾಳ ಮನೆಗೆ ಹೋದನು. ಅಲ್ಲಿ ನಂಬಿಕೆ ಬರುವಂತೆ ಆಕೆಯೊಂದಿಗೆ ಚಹಾ ಕುಡಿದು, ನಂತರ ಮೋಸದಿಂದ ತಲೆಗೆ ಸುತ್ತಿಗೆಯಿಂದ ಹೊಡೆದು ಮನೀಷಾಳನ್ನು ಕೊಲೆ ಮಾಡಿದನು. ನಂತರ ಸಾಕ್ಷ್ಯಗಳನ್ನು ನಾಶಮಾಡಲು ಆರೋಪಿ ಗೋಪಾಲ್ ಶವವನ್ನು ಸುಟ್ಟನು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ